ಕಳಸ: ಕುಡಿಯುವ ನೀರಿನ ಸಮಸ್ಯೆ : ಗ್ರಾಮಸ್ಥರ ಆಕ್ರೋಶ

ಕಳಸ: (ನ್ಯೂಸ್ ಮಲ್ನಾಡ್ ವರದಿ)ಸ್ವಾತಂತ್ರ‍್ಯ ದೊರೆತು ದಶಕಗಳೇ ಕಳೆದರೂ ಈ ಗ್ರಾಮದ ಜನರಿಗೆ ಸಮರ್ಪಕ ಕುಡಿಯುವ ನೀರು, ಚರಂಡಿ ಎಂಬುದು ಇಲ್ಲಿ ಮರೀಚಿಕೆ. ಹೀಗಾಗಿ ಇಲ್ಲಿನ ಜನತೆಯ ಬದುಕು ಮಾತ್ರ ದಯನೀಯವಾಗಿದೆ.

 

ಇದನ್ನೂ ಓದಿ; ಆಧಾರ್ ಕಾರ್ಡ್ ಅಪ್ಡೇಟ್‌ ಗೆ ಡೆಡ್‌ಲೈನ್‌!; ಮಾರ್ಚ್ 14 ವರೆಗೆ ಮಾತ್ರ ಅವಕಾಶ; ಅಪ್ಡೇಟ್ ಮಾಡಲು ಈ ದಾಖಲೆ ಕಡ್ಡಾಯ

ಹೌದು.. ಇದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ತೋಟದ್ದುರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮ. ಇಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ಪೂರೈಕೆ ಹಾಗೂ ಸಮರ್ಪಕವಾದ ರಸ್ತೆ ಸಂಪರ್ಕ, ಚರಂಡಿ ಸೌಲಭ್ಯ ದೊರೆತಿಲ್ಲ. ಸರ್ಕಾರ ಹಾಗೂ ಆಳುವ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಪರಿಣಾಮ ಈ ಪರಿಸರದಲ್ಲಿ ವಾಸಿಸುವ ಕುಟುಂಬಗಳು ನ್ಯಾಯಯುತವಾಗಿ ದೊರೆಯಬೇಕಾದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಹಲವಾರು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತ ಬಂದಿದ್ದರೂ ಇಲ್ಲಿಯ ತನಕ ಇಲ್ಲಿನ ಜನತೆಗೆ ದೊರೆತಿದ್ದು, ಅಶ್ವಾಸನೆಗಳ ಸುರಿಮಳೆ ಮಾತ್ರ.

ಇದನ್ನೂ ಓದಿ; ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಿದ ಕ್ಷಣದಿಂದಲೇ ವಿಮೆ ಜಾರಿಯಾಗುತ್ತದೆ: ಹೈಕೋರ್ಟ್

ಚುನಾವಣೆ ಬಹಿಷ್ಕರಿಸಿದರು ಬಗೆಹರಿಯದ ಸಮಸ್ಯೆ:
ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನಲೆಯಲ್ಲಿ ಕಳೆದ ವರ್ಷ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದರು. ಇದರಿಂದ ಕಸಿವಿಸಿಯಾದ ಜನಪ್ರತಿನಿಧಿಗಳು, ಆದಷ್ಟು ಬೇಗ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದವರು ಇಲ್ಲಿಯ ತನಕ ಅನುಷ್ಠಾನಗೊಳ್ಳದೆ ಗ್ರಾಮಸ್ಥರ ಮೊಣಕೈಗೆ ತುಪ್ಪ ಸವರಿದಂತಾಗಿದೆ.

ಅರ್ಧದಲ್ಲಿ ನಿಂತ ರಿಂಗ್ ಬಾವಿ ನಿರ್ಮಾಣ:
ಈ ಹಿಂದೆ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಕೂಡ ಬತ್ತಿ ಹೋಗಿದೆ. ಮೂರು ಕಿಲೋಮೀಟರ್ ದೂರದಿಂದ ಪೈಪ್ ಲೈನ್ ಮಾಡಲಾಗಿತ್ತು ಆದರೆ ಕಾಡಾನೆ ಹಾಗೂ ಕಾಡುಕೋಣಗಳ ದಾಳಿಯಿಂದ ಪೈಪ್ ಲೈನ್ ಕೂಡ ಹಾಳಾಗಿದೆ. ಇತ್ತ ಕಗ್ನನಳ್ಳದಲ್ಲಿ ರಿಂಗ್ ಬಾವಿ ನಿರ್ಮಿಸಿದ್ದು ಆ ಕಾಮಗಾರಿ ಕೂಡ ಅರ್ಧದಲ್ಲಿ ನಿಲ್ಲಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಇನ್ನಾದರೂ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಈ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಕಾರ್ಯಪ್ರವತ್ತರಾಗಬೇಕೆಂಬುದು ಈ ಗ್ರಾಮದ ನಿವಾಸಿಗಳ ಆಗ್ರಹವಾಗಿದೆ.

ಚಿಕ್ಕಮಗಳೂರು: ವಿಚಾರಣಾಧೀನ ಕೈದಿ ಅನುಮಾನಸ್ಪಾದ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಸತೀಶ್ ಮೃತಪಟ್ಟ ಕೈದಿ.

ದಾಯಾದಿಗಳ ಕಲಹ ಪ್ರಕರಣ ಸಂಬಂಧ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್ ನನ್ನು ನಾಲ್ಕು ದಿನಗಳ ಹಿಂದೆ ಪೊಲೀಸರು ಬಂಧಿಸಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದರು. ಕಾರಾಗೃಹಕ್ಕೆ ಬಂದ ದಿನವೇ ಅನಾರೋಗ್ಯ ಉಂಟಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ; ಗೃಹಲಕ್ಷ್ಮೀ ಯೋಜನೆ; ಹಣ ಬಾರದೇ ಇರುವ ಮಹಿಳೆಯರಿಗೆ ಬಂಪರ್ ಸುದ್ದಿ ಕೊಟ್ಟ ಸರ್ಕಾರ!; ಏನದು? ಇಲ್ಲಿದೆ ಮಾಹಿತಿ

ಸತೀಶ್ ಸಾವಿನ ಗೆ ಪತ್ನಿ ನೇತ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ. ಸತೀಶ್ ಕುತ್ತಿಗೆ, ಕೈ, ದೇಹದ ಇತರೆ ಭಾಗದಲ್ಲಿ ಗಾಯದ ಗುರುತುಗಳಿದ್ದು, ಕಾರಾಗೃಹದ ಸಿಬ್ಬಂದಿ ಮತ್ತು ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದಾಗಿ ಸತೀಶ್ ಮೃತಪಟ್ಟಿದ್ದಾಗಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬದವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.