ಶೃಂಗೇರಿ: ದುರಸ್ತಿಯಾಗದ ಪೈಪ್‌ ಲೈನ್: ಪಟ್ಟಣಕ್ಕೆ ಕಲುಷಿತ ನೀರು ಸರಬರಾಜು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)  ಕಳೆದ 6 -7 ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಮಾತ್ರ ಪಟ್ಟಣ ಪಂಚಾಯಿತಿ ಜನರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿಲ್ಲ.

ಇದನ್ನೂ ಓದಿ; ಯುವಜನತೆಗೆ ಗುಡ್ ನ್ಯೂಸ್; ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

ಹೌದು, ಕಳೆದ 7 ತಿಂಗಳಿನಿಂದ ಕುವೆಂಪು ಬಸ್ ನಿಲ್ದಾಣದ ಮುಂಭಾಗದಿಂದ ಹಾದು ಹೋಗಿರುವ ದೊಡ್ಡ ಪೈಪ್ ಲೈನ್ ಮಾರ್ಗ, ಸುಮಾರು 7-8 ಪೈಪ್ ಗಳು ಒಡೆದು ಹೋಗಿ ಅದನ್ನು ದುರಸ್ಥಿ ಮಾಡದೇ ಬಿಡಲಾಗಿದೆ. ಇದರಿಂದಾಗಿ ಪಟ್ಟಣದ ಜನರು, ಶಾಲೆಗಳ ವಿದ್ಯಾರ್ಥಿಗಳು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು

ಪಂಪ್ ಹೌಸ್ ನಿಂದ ಫಿಲ್ಟರ್ ಹೌಸ್ ಗೆ ಹೋಗುವ ನೀರು ನಂತರ ಈಶ್ವರಗಿರಿಗೆ ಹೋಗಿ ತದನಂತರ ಪಟ್ಟಣಕ್ಕೆ ಸರಬರಾಜು ಆಗುತ್ತದೆ, ಆದರೆ ಫಿಲ್ಟರ್ ಹೌಸ್ ನಿಂದ ಈಶ್ವರಗಿರಿಗೆ ಹೋಗುವ ಪೈಪ್ ಲೈನ್ ಹಾಳಾಗಿದ್ದು ಇದರಿಂದಾಗಿ ಕಳೆದ ಏಳು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲ. ಏಳು ತಿಂಗಳ ಹಿಂದೆಯೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ತಿಳಿಸಿ ತುರ್ತು ಕಾರ್ಯ ಆದುದರಿಂದ ಹೊಸ ಪೈಪ್ ಲೈನ್ ಹಾಕುವಂತೆ ಕೇಳಿದ್ದೆನು, ಆದರೆ ಟೆಂಡರ್ ಆಗಬೇಕು ಎಂಬ ನೆಪವೊಡ್ಡಿ ಇದುವರೆಗೂ ಪೈಪ್ ಲೈನ್ ದುರಸ್ತಿಯಾಗಿಲ್ಲ. ಇದು ಶೃಂಗೇರಿ ಜನರ ಆರೋಗ್ಯ ಸಂಬಂಧಿ ವಿಷಯವಾಗಿದ್ದು ಇಂತಹ ತುರ್ತು ವಿಷಯಗಳಲ್ಲಿ ಟೆಂಡರ್ ಗಾಗಿ ಕಾಯದೆ, ಸರ್ವ ಸದಸ್ಯರ ಅಭಿಪ್ರಾಯ ಪಡೆದು ಶೀಘ್ರ ಕ್ರಮ ಕೈಗೊಳ್ಳಬೇಕು. –ಹರೀಶ್ ಶೆಟ್ಟಿ, ಸದಸ್ಯರು ಪಟ್ಟಣ ಪಂಚಾಯಿತಿ

ಕಲುಷಿತ ನೀರು ದೊಡ್ಡ ಬ್ಯಾಂಕಿಗೆ ಸಂಗ್ರಹ:
ಪಟ್ಟಣದ ಹೊರವಲಯದಲ್ಲಿರುವ ವಿದ್ಯಾರಣ್ಯಪುರಕ್ಕೆ ತೆರಳುವ ಮಾರ್ಗದ ತುಂಗಾ ನದಿಯ ದಂಡೆಯಲ್ಲಿರುವ ಮೋಟಾರ್ ಶೆಡ್ ನಿಂದ ಮೂರು ಮೋಟಾರ್ ಸಹಾಯದಿಂದ ಸುಮಾರು 2 ಲಕ್ಷ ಲೀ. ಸಾಮರ್ಥ್ಯದ ನೀರಿನ ಪಂಪ್ ಸೆಟ್ ನಿಂದ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಈ ಪಂಪ್ ಸೆಟ್ ನಿಂದ ನೀರು ಫಿಲ್ಟರ್ ಆಗಿ ಪಟ್ಟಣದ ಹನುಮಂತನಗರದ 11 ನೇ ವಾರ್ಡಿನಲ್ಲಿರುವ ನೀರಿನ ಘಟಕಕ್ಕೆ ಸರಬರಾಜು ಆಗುತ್ತಿತ್ತು. ಅಲ್ಲಿಂದ ಪೈಪ್ ಲೈನ್ ಮೂಲಕ ಪಟ್ಟಣದ ಮಧ್ಯಭಾಗದಲ್ಲಿರುವ ಈಶ್ವರ ಗಿರಿಯಲ್ಲಿನ ದೊಡ್ಡ ಬ್ಯಾಂಕಿಗೆ ನೀರು ಸಂಗ್ರಹವಾಗಿ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿತ್ತು. ಆದರೆ, ಕುವೆಂಪು ಬಸ್ ನಿಲ್ದಾಣದ ಮುಂಭಾಗದಿಂದ ಹಾದು ಹೋಗಿರುವ ದೊಡ್ಡ ಪೈಪ್ ಲೈನ್ ಮಾರ್ಗದ ಸುಮಾರು 7-8 ಪೈಪ್ ಗಳು ಒಡೆದು ಹೋಗಿ ಅದನ್ನು ದುರಸ್ಥಿ ಮಾಡದೇ ಬಿಡಲಾಗಿದೆ, ಬದಲಿ ಮಾರ್ಗದಿಂದ ಕಲುಷಿತ ನೀರು ಈಶ್ವರ ಗಿರಿಯಲ್ಲಿನ ದೊಡ್ಡ ಟ್ಯಾಂಕಿಗೆ ಸಂಗ್ರಹವಾಗುತ್ತಿದೆ.

ವಿದ್ಯಾರಣ್ಯಪುರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಸಹ ಇದೇ ನೀರು ಸರಬರಾಜು ಆಗುತ್ತಿದೆ.

ಪೈಪ್ ಲೈನ್ ಒಡೆದು ಹೋದ ಬಗ್ಗೆ ಗಮನದಲ್ಲಿ ಇದ್ದು ತಕ್ಷಣವೇ ಪೈಪ್ ಲೈನ್ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.- ಶ್ರೀ ಪಾದ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

ಇನ್ನು ಗಾಂಧಿ ಮೈದಾನದ ಹಿಂಬಾಗದ ಕೊಳಚೆ ನೀರು, ಪಟ್ಟಣದ ಚರಂಡಿ ನೀರು ತ್ಯಾಜ್ಯಗಳು ತುಂಗಾ ನದಿ ಸೇರುವುದರಿಂದ ನೀರು ಮಲಿನಗೊಳ್ಳುತ್ತಿದೆ. ಪ್ರತಿ ನಿತ್ಯ ಹೋಟೆಲ್, ಮಾಂಸದಂಗಡಿ, ಪಟ್ಟಣದ ಮನೆಗಳ ತ್ಯಾಜ್ಯ ನೀರು ತುಂಗಾ ನದಿ ಪಾಲಾಗುತ್ತಿದೆ. ಹೀಗಿರುವಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೇಜಾವಾಬ್ದಾರಿತನ ತೋರಿಸಿ ಪೈಪ್ ಲೈನ್ ದುರಸ್ತಿ ಪಡಿಸದೆ ಪಟ್ಟಣದ ಜನರಿಗೆ ಕುಡಿಯುವಂತಾಗಿದೆ. ಇನ್ನಾದರು ಅಧಿಕಾರಿಗಳು ಪೈಪ್ ಲೈನ್ ದುರಸ್ತಿ ಪಡಿಸಿ ಶುದ್ದ ಕುಡಿಯುವ ನೀರು ಉಪಯೋಗಿಸುವಂತೆ ಕ್ರಮ ಕೈಗೊಳ್ಳಬೇಕಿದೆ.

 

ಇದನ್ನೂ ಓದಿ; ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸೋಮವಾರ ಪೇಟೆ ಪಶುವೈದ್ಯರಾಗಿದ್ದ ಶಿವಪ್ಪ ಬಾದಾಮಿ ಹೃದಯಾಘಾತದಿಂದ ಮೃತಪಟ್ಟ ವೈದ್ಯ.

ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರಿಕೆಟ್ ಆಡಿ ಫೋಟೋ ಸೆಷೆನ್ ನಲ್ಲಿ ಪಾಲ್ಗೊಂಡು ನಂತರ ಕ್ರಿಕೆಟ್ ನೋಡುತ್ತಿದ್ದಂತೆ ಕುಳಿತಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.

ಶಿವಪ್ಪ ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯ ಲೋಕದ ಕಂಬನಿ ಮಿಡಿದಿದ್ದು, ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು. ಶಿವಪ್ಪ ಬಾದಾಮಿಯವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.