ತರೀಕೆರೆ: ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷಿಸಿದ್ದ ವ್ಯಕ್ತಿ ಸಾವು

ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ಸುಮ್ಮನಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತ ದುರ್ದೈವಿ.


ಇದನ್ನೂ ಓದಿ: ರೈತರ ಗಮನಕ್ಕೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಪಿಎಂ ಕಿಸಾನ್ ಯೋಜನೆಯ ಹಣ; ತಕ್ಷಣವೇ ಈ ರೀತಿ ಮಾಡಿ


ಜಮೀನಿನಲ್ಲಿ ಕೆಲಸ ಮಾಡುವಾಗ ಗಂಗಪ್ಪ ಅವರಿಗೆ ಎರಡು ಬಾರಿ ಹಾವು ಕಚ್ಚಿದೆ. ಆದರೆ, ಹಾವು ಕಚ್ಚಿದ್ದು ಗೊತ್ತಾಗದೇ ಮುಳ್ಳು ಚುಚ್ಚಿದೆ ಎಂದು ಊಟ ಮಾಡಿ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯವರು ವ್ಯಕ್ತಿಯನ್ನು ಎಬ್ಬಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಇದನ್ನೂ ಓದಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ; ಗ್ರಾಮ ಆಡಳಿತ ಅಧಿಕಾರಿ ಸೇರಿ 5 ಇಲಾಖೆಗಳ ಹುದ್ದೆಗೆ ಪರೀಕ್ಷೆ ಪ್ರಕಟ


ಈ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಬಿಪಿಎಲ್‌, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್; ಅನ್ನಭಾಗ್ಯ ನಗದು ವರ್ಗಾವಣೆ ಸ್ಥಗಿತ


ಕೊಪ್ಪ: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಸೇವಾ ಶಿಕ್ಷಣ ಶಿಬಿರ ಕಾರ್ಯಕ್ರಮ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯದ ಸೇವಾ ಶಿಕ್ಷಣ ಶಿಬಿರವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಕಟಪುರ ಶ್ರೀ ಮಠದಲ್ಲಿ ಶುಕ್ರವಾರದಿಂದ (ಮೇ 23 ರಿಂದ) ಜೂನ್ 2 ವರೆಗೆ ನಡೆಯಲಿದೆ.


ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!


ಶುಕ್ರವಾರ ಶಿಬಿರವನ್ನು ಉದ್ಘಾಟಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಶೃಂಗೇರಿ ಜಿಲ್ಲೆಯ ಮಾನ್ಯ ಸಂಘ ಚಾಲಕರಾದ ನಾರಾಯಣ ಟಿ.ಕೆ, ಶಕಟಪುರ ಮಠದ ಅಧಿಕಾರಿಗಳಾದ ಸೋಮಶೇಖರ್ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಸುರೇಶ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮಾಜದಲ್ಲಿ ಸಂಸ್ಕಾರ ಕೇಂದ್ರಿತ ಸೇವಾ ಚಟುವಟಿಕೆ ನಡೆಸುವ ಕಾರ್ಯಕರ್ತರನ್ನು ತಯಾರು ಮಾಡುವ ಶಿಬಿರ ಇದಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ 115 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಬೋಧಿನಿ ಗುರುಕುಲದ ಉಮೇಶ್, ತಾಲೂಕು ಸಂಯೋಜಕರಾದ ನೂತನ ಸೂರ್ಯ ಮುಂತಾದವರು ಉಪಸ್ಥಿತಿ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.