ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾದ ದಿವಂಗತ ಅಜಿತ್ ಕುಮಾರ್ ಅವರ ಪುಣ್ಯ ಸ್ಮರಣೆ ನಿಮಿತ್ತ ಸೇವಾ ದಿನ ಆಚರಿಸಲಾಯಿತು.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ವಕ್ತಾರರಾಗಿ ಆಗಮಿಸಿದ ಹರಿಹರಪುರದ ಪ್ರಭೋದಿನಿ ಗುರುಕುಲದ ಉಮೇಶ್ ಮಾತನಾಡಿ ಅವರು, ಸಂಘದ ಪ್ರಚಾರಕರಾಗಿದ್ದ ಅಜಿತ್ ಕುಮಾರ್ ಅವರು ಸಾಮಾನ್ಯರು ಕೂಡ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಹಿಂದು ಸೇವಾ ಪ್ರತಿಷ್ಠಾನ ಪ್ರಾರಂಭ ಮಾಡಿದರು. ವಿಶೇಷ ಕಲ್ಪನೆಯೊಂದಿಗೆ ಸದಾ ಸಮಾಜಕ್ಕಾಗಿ ಕೆಲಸ ಮಾಡಿದ ಅಜಿತ್ ಕುಮಾರ್ ಅವರು ಕಡಿಮೆ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಮರಣಹೊಂದಬೇಕಾಯಿತು. ಅವರನ್ನು ಒಮ್ಮೆ ಪೇಜಾವರ ಶ್ರೀಗಳು ಧಾವಂತದ ಸಂತ ಎಂದು ಬಣ್ಣಿಸಿದ್ದರು ಎಂದರು.



ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಿಂದು ಸೇವಾ ಪ್ರತಿಷ್ಠಾನ ಸೇವಾ, ಸಂಸ್ಕಾರ ಪರಿಸರ, ಹೀಗೆ ಎಲ್ಲಾ ವಿಭಾಗದಲ್ಲಿ ಕೂಡ ಕಾರ್ಯ ಮಾಡುತ್ತಿದೆ ಇದೇ ದಾರಿಯಲ್ಲಿ ನಾಗೇಶ್ ಕಾಮತ್ ಅಂತವರು ಕೂಡ ಪ್ರಚಾರ ಬಯಸದೆ ಸ್ವಚ್ಛ ಸುಂದರ ಪರಿಸರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪರಿಸರ ಕಾಳಜಿ, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ಪ್ರಚಾರ ಬಯಸದೆ ಶ್ರಮಿಸುತ್ತಿರುವ ಶ್ರೀ ನಾಗೇಶ್ ಕಾಮತ್ ಅವರಿಗೆ ಸೇವಾ ಸಾಧಕ ಸನ್ಮಾನ ಮಾಡಿ ಗೌರವಿಸಲಾಯಿತು.

ಇದನ್ನೂ ಓದಿ: 3 ಮದ್ಯದ ಬಾಟಲ್ ಖರೀದಿಸಿದ್ರೆ 1 ಫ್ರೀ; ಹೊಸ ವರ್ಷದ ಆಫರ್, ಯಾರಿಗುಂಟು ಯಾರಿಗಿಲ್ಲ!
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ತಾಲೂಕು ಸಂಘಚಾಲಕರಾದ ವಿಶ್ವನಾಥ ಮಾನಗಾರು, ಹಿಂದು ಸೇವಾ ಪ್ರತಿಷ್ಠಾನದ ತಾಲೂಕು ಸಂಯೋಜಕರಾದ ನೂತನ ಸೂರ್ಯ ಮತ್ತು ಸುಮಂಗಲ ಆನಂದಸ್ವಾಮಿ, ಸುವರ್ಣ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ













