
ಕಳಸ: (ನ್ಯೂಸ್ ಮಲ್ನಾಡ್ ವರದಿ) ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿಯಲ್ಲಿ ನಡೆದಿದೆ. ತಾರಿಕೊಂಡ ರಮೇಶ್ ಎಂಬುವವರ ಪುತ್ರಿ ರಮ್ಯಾ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಇದನ್ನೂ ಓದಿ: ರೈತರ ಗಮನಕ್ಕೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಪಿಎಂ ಕಿಸಾನ್ ಯೋಜನೆಯ ಹಣ; ತಕ್ಷಣವೇ ಈ ರೀತಿ ಮಾಡಿ

ಕಳಸ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ರಮ್ಯಾ ಶನಿವಾರವಷ್ಟೆ ತನ್ನ 21ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು ಎನ್ನಲಾಗಿದೆ. ಭಾನುವಾರ ಪೋಷಕರೆಲ್ಲ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬಂದಾಗ ರಮ್ಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮದುವೆಗೆ ಹೋಗುವಾಗ ಸೀರೆಯ ವಿಚಾರಕ್ಕಾಗಿ ರಮ್ಯಾ ಮತ್ತು ಸಹೋದರಿ ನಡುವೆ ಜಗಳ ಆಗಿತ್ತು, ಇದರಿಂದ ಮದುವೆಗೆ ಹೋಗದೇ ರಮ್ಯಾ ಮನೆಯಲ್ಲೇ ಉಳಿದಿದ್ದಳು ಎನ್ನಲಾಗಿದೆ. ಮನೆಯವರೆಲ್ಲಾ ಮದುವೆಗೆ ತೆರಳಿದ ನಂತರ ರಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ; ಗ್ರಾಮ ಆಡಳಿತ ಅಧಿಕಾರಿ ಸೇರಿ 5 ಇಲಾಖೆಗಳ ಹುದ್ದೆಗೆ ಪರೀಕ್ಷೆ ಪ್ರಕಟ
ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್; ಅನ್ನಭಾಗ್ಯ ನಗದು ವರ್ಗಾವಣೆ ಸ್ಥಗಿತ
ಕೊಪ್ಪ: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಸೇವಾ ಶಿಕ್ಷಣ ಶಿಬಿರ ಕಾರ್ಯಕ್ರಮ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯದ ಸೇವಾ ಶಿಕ್ಷಣ ಶಿಬಿರವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಕಟಪುರ ಶ್ರೀ ಮಠದಲ್ಲಿ ಶುಕ್ರವಾರದಿಂದ (ಮೇ 23 ರಿಂದ) ಜೂನ್ 2 ವರೆಗೆ ನಡೆಯಲಿದೆ.
ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!
ಶುಕ್ರವಾರ ಶಿಬಿರವನ್ನು ಉದ್ಘಾಟಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಶೃಂಗೇರಿ ಜಿಲ್ಲೆಯ ಮಾನ್ಯ ಸಂಘ ಚಾಲಕರಾದ ನಾರಾಯಣ ಟಿ.ಕೆ, ಶಕಟಪುರ ಮಠದ ಅಧಿಕಾರಿಗಳಾದ ಸೋಮಶೇಖರ್ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಸುರೇಶ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾಜದಲ್ಲಿ ಸಂಸ್ಕಾರ ಕೇಂದ್ರಿತ ಸೇವಾ ಚಟುವಟಿಕೆ ನಡೆಸುವ ಕಾರ್ಯಕರ್ತರನ್ನು ತಯಾರು ಮಾಡುವ ಶಿಬಿರ ಇದಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ 115 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಬೋಧಿನಿ ಗುರುಕುಲದ ಉಮೇಶ್, ತಾಲೂಕು ಸಂಯೋಜಕರಾದ ನೂತನ ಸೂರ್ಯ ಮುಂತಾದವರು ಉಪಸ್ಥಿತಿ ಇದ್ದರು.













