ಕೊಪ್ಪ: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಸೇವಾ ಶಿಕ್ಷಣ ಶಿಬಿರ ಕಾರ್ಯಕ್ರಮ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯದ ಸೇವಾ ಶಿಕ್ಷಣ ಶಿಬಿರವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಕಟಪುರ ಶ್ರೀ ಮಠದಲ್ಲಿ ಶುಕ್ರವಾರದಿಂದ (ಮೇ 23 ರಿಂದ) ಜೂನ್ 2 ವರೆಗೆ ನಡೆಯಲಿದೆ.


ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!


ಶುಕ್ರವಾರ ಶಿಬಿರವನ್ನು ಉದ್ಘಾಟಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಶೃಂಗೇರಿ ಜಿಲ್ಲೆಯ ಮಾನ್ಯ ಸಂಘ ಚಾಲಕರಾದ ನಾರಾಯಣ ಟಿ.ಕೆ, ಶಕಟಪುರ ಮಠದ ಅಧಿಕಾರಿಗಳಾದ ಸೋಮಶೇಖರ್ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಸುರೇಶ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇದನ್ನೂ ಓದಿ: ಒಂದೇ ವಾರದಲ್ಲಿ ಹೂಡಿಕೆದಾರರಿಗೆ ಲಕ್ಷ ಲಕ್ಷ ಲಾಭ..!; ಷೇರು ಮಾರುಕಟ್ಟೆ ಹೀಗೆ ಓಡ್ತಿರೋದ್ಯಾಕೆ..?; ಇಲ್ಲಿದೆ ನಾಲ್ಕು ಬೆಸ್ಟ್ ಷೇರುಗಳು..!


ಸಮಾಜದಲ್ಲಿ ಸಂಸ್ಕಾರ ಕೇಂದ್ರಿತ ಸೇವಾ ಚಟುವಟಿಕೆ ನಡೆಸುವ ಕಾರ್ಯಕರ್ತರನ್ನು ತಯಾರು ಮಾಡುವ ಶಿಬಿರ ಇದಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ 115 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಬೋಧಿನಿ ಗುರುಕುಲದ ಉಮೇಶ್, ತಾಲೂಕು ಸಂಯೋಜಕರಾದ ನೂತನ ಸೂರ್ಯ ಮುಂತಾದವರು ಉಪಸ್ಥಿತಿ ಇದ್ದರು.

ಕೊಪ್ಪ: ಫೇಸ್ಬುಕ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಪೋಸ್ಟ್ ಮಾಡಿದ್ದವನ ಬಂಧನ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಫೇಸ್​ಬುಕ್​ನಲ್ಲಿ ಪಾಕಿಸ್ತಾನ ಪರ ಪೋಸ್ಟ್ ಮಾಡಿದ ಕೊಪ್ಪ ಮೂಲದ ಮೊಹಮ್ಮದ್ ಅಸ್ಗರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ಪ್ರಕಟಿಸಿರುವ ಈತ ಬಜರಂಗ ದಳದ ವಿರುದ್ಧವೂ ಫೇಸ್ಬುಕ್ ನಲ್ಲಿ ಅಸಭ್ಯ ಪೋಸ್ಟ್ ಮಾಡಿದ್ದ. ಇದಕ್ಕೆ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು.

ಫೇಸ್​​ಬುಕ್ ಪೋಸ್ಟ್ ಮಾಡಿದ ಬಳಿಕ ಅಕೌಂಟನ್ನೇ ಆತ ಡಿಲೀಟ್ ಮಾಡಿದ್ದಾನೆ. ಇದೀಗ ಘಟನೆ ಸಂಬಂಧ ಸ್ವಯಂಪ್ರೇರಿತರಾಗಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪ ಠಾಣೆಯ ಪೊಲೀಸರು, ಸದ್ಯ ಅಸ್ಗರ್​ ನನ್ನು ಬಂಧಿಸಿದ್ದಾರೆ.

ವಿಧಾನಸಭೆ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತ ಅಂಥದ್ದೇ ಘಟನೆ ವರದಿಯಾಗಿರುವುದು ಮಲೆನಾಡು ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.