
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಅಕ್ಟೋಬರ್ 3 ರಿಂದ (ನಾಳೆಯಿಂದ) ಶ್ರೀ ಮಠ ಹರಿಹರಪುರದಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯಲಿದ್ದು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಅದ್ದೂರಿ ನವರಾತ್ರಿ ಉತ್ಸವಕ್ಕೆ ಸಜ್ಜಾಗಿದೆ.
ಇದನ್ನೂ ಓದಿ; ಕಾರಿನ ಜೊತೆ ಬೈಕ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್; 22 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆ

ವಿವಿಧ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶಾರದೆಯ ಈ ಅದ್ದೂರಿ ಶರನ್ನವರಾತ್ರಿಗೆ ಶ್ರೀ ಮಠ ಹರಿಹರಪುರದ ಪರವಾಗಿ ಪರಮಪೂಜ್ಯ ಮಹಾಸ್ವಾಮಿಗಳವರ ಆಪ್ತ ಕಾರ್ಯದರ್ಶಿಯಾದ ಪಿ ರಘುನಾಥ ಶಾಸ್ತ್ರೀ ಅವರು ಸರ್ವರಿಗೂ ಆದರದ ಸ್ವಾಗತ ಕೋರಿ ಆಮಂತ್ರಿಸಿದ್ದಾರೆ.

ಶಾರದೆಗೆ ವಿವಿಧ ಅಲಂಕಾರ:
* ಇಂದು (ಅ.2ರಂದು) ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶ್ರೀ ಲಕ್ಷ್ಮೀನರಸಿಂಹ ಹೋಮ ನಡೆಯಲಿದೆ.
* 3ರಂದು ಶಾರದಾ ಕಲಶ ಪ್ರತಿಷ್ಠೆ ಹಾಗೂ ಹಂಸಾರೋಹಣ ಅಲಂಕಾರ
* 4ರಂದು ವೃಷಭವಾಹನ ಅಲಂಕಾರ
* 5ರಂದು ಮಯೂರವಾಹನ ಅಲಂಕಾರ
* 6ರಂದು ಗರುಡವಾಹನ ಅಲಂಕಾರ
* 7ರಂದು ಮಕರಾರೋಹಣ
* 8ರಂದು ಆಶ್ವಾರೋಹಣ ಅಲಂಕಾರ
* 9ರಂದು ಸರಸ್ವತೀ ಪೂಜಾ ಮತ್ತು ವೀಣಾಶಾರದಾ ಅಲಂಕಾರ
* 10ರಂದು ದುರ್ಗಾಷ್ಟಮಿ, ಮೃಗಾರೋಹಣ ಅಲಂಕಾರ
* 11ರಂದು ಸಿಂಹವಾಹನಾಲಂಕಾರ,
* 12ರಂದು ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ,
ರಾತ್ರಿ ದರ್ಬಾರಿನ ನಂತರ ಪರಮಪೂಜ್ಯ ಮಹಾಸ್ವಾಮಿಗಳವರಿಂದ ಆಶೀರ್ವಚನ ನಡೆಯಲಿದೆ.
ಇದನ್ನೂ ಓದಿ; ದೇಶದ ಜನತೆಗೆ ಹಬ್ಬದ ಮೊದಲೇ ಬಿಗ್ ಶಾಕ್; LPG ಸಿಲಿಂಡರ್ ದರ ಏರಿಕೆ! ಬೆಲೆ ಎಷ್ಟಿದೆ
ನವರಾತ್ರಿಯ ವಿಶೇಷ ಸೇವಾ ಸಂಕಲ್ಪ ವಿವರ:
* ಲಲಿತಾ ಹೋಮ ಸಂಕಲ್ಪ ಕಾಣಿಕೆ: 1500
* ಲಕ್ಷ್ಮೀನಾರಾಯಣ ಹೃದಯ ಹೋಮ ಸಂಕಲ್ಪ ಕಾಣಿಕೆ: 2000
* ಚಂಡಿಕಾ ಹೋಮ ಸಂಕಲ್ಪ ಕಾಣಿಕೆ: 3000
* ಅನ್ನದಾನ ಕಾಣಿಕೆ: 5000
* ಸರ್ವಸೇವೆ( ಒಂದು ದಿನ): 10,000
* ಒಂದು ದಿನದ ಅನ್ನದಾನ ಸೇವೆ: 51,000
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ಹಾಗೆಯೇ ಶರನ್ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಗೆ ಕುಂಕುಮಾರ್ಚನೆ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದಾಗಿದೆ.
9448971500 / 9019977466
ಇದನ್ನೂ ಓದಿ; ಗ್ರಾಮಾಂತರ ಕೈಗಾರಿಕಾ ಇಲಾಖೆ ವತಿಯಿಂದ ಸಿಗಲಿದೆ 5,000; ಹೇಗೆ ಗೊತ್ತಾ? ಇಲ್ಲಿದೆ ನೋಡಿ













