
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಜೆ.ಸುರಪುರ ಗ್ರಾಮದ ಕೇಶವಮೂರ್ತಿ ಅತ್ಯಾಚಾರ ಎಸಗಿರುವ ಆರೋಪಿ.

ಕೂಲಿ ಕೆಲಸಕ್ಕೆಂದು ನಾಲ್ಕು ತಿಂಗಳ ಹಿಂದೆ ಅಸ್ಸಾಂನಿಂದ ಬಂದಿದ್ದ ಮಹಿಳೆ, ಆರ್‌ಎಂಸಿಯಲ್ಲಿ ಶುಂಠಿ ವಾಷಿಂಗ್ ಕೆಲಸ ಮಾಡಿಕೊಂಡಿದ್ದರು. ಸೆ.30 ರಂದು ಆರ್‌ಎಂಸಿಗೆ ಕೆಲಸಕ್ಕೆ ತೆರಳಲು ವಾಹನ ಕಾಯುತ್ತಿದ್ದ ವೇಳೆ ಮಹಿಳೆಗೆ ಡ್ರಾಪ್ ನೀಡುವುದಾಗಿ ಬೈಕ್ ಗೆ ಹತ್ತಿಸಿಕೊಂಡ ಆರೋಪಿ ಕೇಶವಮೂರ್ತಿ ಆಕೆಯನ್ನು ಜೋಳದ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ; ಡಿಎಲ್‌ಎಸ್‌ಎ ಯಲ್ಲಿ ಉದ್ಯೋಗ; 10th ಪಾಸ್ ಆದವರು ಅರ್ಜಿ ಸಲ್ಲಿಸಿ; 15,884 – 19,695 ಸಂಬಳ
ಈ ಸಂಬಂಧ ಮಹಿಳೆ ಬೇಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













