ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಕಚೇರಿಯಲ್ಲಿರುವ ಸರ್ವೇ ಇಲಾಖೆ ಕೊಠಡಿಯೊಂದಕ್ಕೆ ಅಧಿಕಾರಿಗಳು ಕೆಲಸದ ವೇಳೆಯಲ್ಲಿ ಬಾಗಿಲು ಹಾಕಿ ತೆರಳಿರುವುದು ಆಕ್ರೋಶಕ್ಕೆ ಕಾರಣಾವಾಗಿದೆ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್ಶಿಪ್; ಡಿಟೇಲ್ಸ್ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸರ್ವೇ ಇಲಾಖೆಯ ಕೊಠಡಿ ಬಾಗಿಲು ಹಾಕಿದ ಪರಿಣಾಮ ಹಲವು ಗ್ರಾಮಗಳ ರೈತರು ಕಾಯುತ್ತ ಕುಳಿತ್ತಿದ್ದರು. ಇದೇ ವೇಳೆಯಲ್ಲಿ ರೈತ ಸಂಘದ ಕಾರ್ಯದರ್ಶಿ ನವೀನ್ ಕರುವಾನೆ ಬಂದಿದ್ದು, ಅಧಿಕಾರಿಗಳು ವಿರುದ್ಧ ಆಕ್ರೋಶ ಹೊರ ಹಾಕಿದರು. ರೈತರ ಸಮಸ್ಯೆಗಳನ್ನು ಆಲಿಸಬೇಕಿದ್ದ ಅಧಿಕಾರಿಗಳು ಬಾಗಿಲು ಹಾಕಿ ತೆರಳಿದ್ದಾರೆ. ರೈತರು, ಕೂಲಿ ಕಾರ್ಮಿಕರನ್ನು ಕಾಯುಸುವುದು ಸರಿಯಲ್ಲ. ಅಧಿಕಾರಿಗಳ ಇಂತಹ ವರ್ತನೆ ಸಲ್ಲದು. ಜಿಲ್ಲಾಧಿಕಾರಿ ಅಧಿಕಾರಿಗಳ ಮೇಲೆ ಹತೋಟಿ ಇಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಎಡಿಎಲ್ಆರ್ ಶ್ರೀಧರ್ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಕಚೇರಿಗೆ ಬಂದಿದ್ದ ಸಿಬ್ಬಂದಿ ರಕ್ತದೊತ್ತಡ ಕಡಿಮೆಯಾದ ಕಾರಣ ಆಸ್ಪತ್ರೆಗೆ ತೆರಳಿದ್ದರು. ಹಾಗಾಗಿ ಸಮಸ್ಯೆಯಾಗಿತ್ತು. ಮುಂದೆ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.












