ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಆನೆ ಹಾವಳಿ, ಆನೆ ವಿಹಾರ ಧಾಮ, ಸೆಕ್ಷನ್ 4, ಒತ್ತುವರಿ ಸಮಸ್ಯೆ ಹಾಗೂ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಚರ್ಚೆ ನಡೆಸಿ ರೈತರು ಕಾರ್ಮಿಕರಿಗಾಗುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರು.
ಇದನ್ನೂ ಓದಿ: ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ!; ಈ ರೀತಿ ಚೆಕ್ ಮಾಡಿ

ಸಮಸ್ಯೆ ಆಲಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿ ಇನ್ನು ಮುಂದೆ ವಾರದಲ್ಲಿ 2 ದಿನ ಕೊಪ್ಪದಲ್ಲಿ ಲಭ್ಯವಿರುತ್ತಾರೆ. ಸೆಕ್ಷನ್ 04 ಹಾಗೂ ಸೆಕ್ಷನ್ 17 ಸರ್ವೆ ಮಾಡಲು ಅರಣ್ಯ ಇಲಾಖೆಯ ನೌಕರರ ನೇಮಕ ಮಾಡಿರುವುದಾಗಿ ಹಾಗೂ ಸರಿಯಾದ ರೀತಿಯಲ್ಲಿ ಸರ್ವೆ ಮಾಡುವುದಾಗಿ ಹೇಳಿದ್ದಾರೆ. ಹೊಸದಾಗಿ ಒತ್ತುವರಿ ಮಾಡುವುದನ್ನು ಬಿಟ್ಟು, ಈ ಹಿಂದೆ ಮಾಡಿರುವ ಒತ್ತುವರಿ ಸಾಗುವಳಿ ಭೂಮಿಯಲ್ಲಿ ಸಣ್ಣ ಪುಟ್ಟ ಸಾಗುವಳಿ ಭೂಮಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಹೇಳಿದರು.
ಆನೆ ಹಾವಳಿ ಆಗುತ್ತಿರುವ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಜನ ಆನೆ ಹಾವಳಿಯ ಬಗ್ಗೆ ಸರ್ಕಾರಕ್ಕೆ ಅರಣ್ಯ ಇಲಾಖೆಗೆ ಲಿಖಿತ ರೂಪದಲ್ಲಿ ಮನವಿ ಪತ್ರ ಕೊಟ್ಟರೆ ಒಂಟಿ ಆನೆಗಳ ಸ್ಥಳಾಂತರ ಮಾಡಲು ಅವಕಾಶ ಆಗುತ್ತದೆ. ಇದರ ಜೊತೆಗೆ ಮುಳುಗಡೆ ಪ್ರದೇಶದ ಹಾಗೂ ಹೆನ್ನಂಗಿ ಹಾಗೂ ಬೆಳ್ಳೆಂಗಿ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಲಾಯಿತು.
ಶೃಂಗೇರಿ ನೂರು ಬೆಡ್ ಆಸ್ಪತ್ರೆ ಜಾಗ ಮಂಜೂರಾತಿ ತೊಡಕು ನಿವಾರಿಸುವ ಕುರಿತು ಸಹ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ನಾಗೇಶ್, ಕಾರ್ಯದರ್ಶಿ ರಂಜಿತ್ ಶೃಂಗೇರಿ, ಹಾಗೂ ಪ್ರಮುಖರಾದ ರತ್ನಾಕರ್ ಗಡಿಗೇಶ್ವರ, ದೇವಂತ್ , ಪುರುಷೋತ್ತಮ ಕೂಸ್ಗಲ್, ಮನೋಹರ್ ಮುತ್ತಿನಕೊಪ್ಪ, ನವೀನ್, ಅರವಿಂದ ಸಿಗದಾಳ್, ಪ್ರಸನ್ನ, ಓಂಕಾರ್ ಮೂರ್ತಿ, ನವೀನ್ ಕಟ್ಟಿನಮನೆ, ನವೀನ್, ಬೋಬೇಗೌಡ ಹೆನ್ನಂಗಿ, ಕಿರಣ್, ಎನ್ ಡಿ ಪ್ರಸಾದ್ ಸೇರಿದಂತೆ ಹಲವು ಸದಸ್ಯರು ಇದ್ದರು.
ಇದನ್ನೂ ಓದಿ: ಜಿಲ್ಲೆಯ ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ
ಮನವಿ ಪತ್ರದ ಅಂಶಗಳು:
• ಆನೆ ಹಾವಳಿ ; ನಮ್ಮ ಕ್ಷೇತ್ರದಲ್ಲೇ ಅದರಲ್ಲೂ ನರಸಿಂಹರಾಜಪುರ ತಾಲ್ಲೂಕು ಮತ್ತು ಖಾಂಡ್ಯ ಹೋಬಳಿ ಅಲ್ಲಿ ಈಗಾಗಲೇ ವಿಪರೀತ ಆನೆ ಹಾವಳಿ ಜಾಸ್ತಿ ಆಗಿದೆ. ಮೊದಮೊದಲು ಭದ್ರಾ ನದಿಯ ತಟದ ಗ್ರಾಮಗಳಲ್ಲಿ ಮಾತ್ರ ಇದ್ದ ಆನೆ ಹಾವಳಿ ಎಲ್ಲಾ ಕಡೆ ವ್ಯಾಪಿಸಿದೆ. ಕೆಲವು ಕಡೆ ಒಂಟಿ ಆನೆಗಳು ದಾಳಿ ಮಾಡಿದರೆ ಇನ್ನೊಂದು ಕಡೆ ಗುಂಪು ಆನೆಗಳು ದಾಳಿ ಮಾಡುತ್ತಿವೆ. ಇದಕ್ಕೆ ಭದ್ರಾ ಅಭಯಾರಣ್ಯದ ಗಡಿಯಲ್ಲಿ ರೈಲ್ವೆ ಕಂಬಗಳ ಬೇಲಿ ಮಾಡುವ ಮೂಲಕ ಶಾಶ್ವತ ಪರಿಹಾರ ನೀಡಬೇಕು. ಜೊತೆಗೆ ಅರಣ್ಯ ಇಲಾಖೆ ಭದ್ರಾ ಅಭಯಾರಣ್ಯದಲ್ಲಿ ಯೋಜನೆ ಮಾಡಿರುವ ಆನೆ ವಿಹಾರ ಧಾಮ ಯಾವುದೇ ಕಾರಣಕ್ಕೆ ಮಾಡಬಾರದು.
• ಸೆಕ್ಷನ್ 04 ; ಈ ಹಿಂದೆ 2021/22 ರಲ್ಲಿ ಅರಣ್ಯ ಇಲಾಖೆ ಸೆಕ್ಷನ್ 4 ರ ಅನ್ವಯ ಜಾಗ ಗುರುತಿಸಿ , ಅಲ್ಲಿ ವಾಸ ಮಾಡುತ್ತಿರುವ ರೈತರ ಕಾರ್ಮಿಕರ ಬಳಿ ಆಕ್ಷೇಪಣಾ ಅರ್ಜಿಗಳನ್ನು ಕೇಳಿ ಸ್ವೀಕಾರ ಮಾಡಿರುತ್ತಿರಿ, ಸದರಿ ಅನ್ವಯ ಇಲಾಖೆಯ ಕಚೇರಿಯ ಅಧಿಕಾರಿಯೂ ಜನರ ಸಾಗುವಳಿ ಭೂಮಿಯ ಬಳಿ ಆಗಲಿ ವಾಸದ ಮನೆಯ ಬಳಿ ಅಗಲಿ ಬಂದು ಅಧ್ಯಯನ ಅಥವಾ ಸರ್ವೆ ಮಾಡಿಲ್ಲ, ಈ ಕುರಿತಾಗಿ ನಮ್ಮ ಸಮಿತಿ ಕೂಡ ನಾಲ್ಕಾರು ಬಾರಿ ನಿಮಗೆ ಮನವಿ ಕೂಡ ಮಾಡಿತ್ತು. ಅರಣ್ಯ ಇಲಾಖೆ ನಮ್ಮ ಮನವಿಗೆ ಇಲ್ಲಿನ ವಾಸಿಗಳ ಮನವಿಗೆ ಸ್ಪಂದಿಸಿಲ್ಲ, ಈಗ ಅರಣ್ಯ ಇಲಾಖೆ ಸೆಕ್ಷನ್ 4 ರ ಮುಂದುವರೆದ ಭಾಗವಾಗಿ ಸೆಕ್ಷನ್ 17 ಮಾಡಲು ಹೊರಟಿದೆ. ನಮ್ಮ ಬಳಿ ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಲು ಹೇಳಿದ್ದೀರಿ, ಅದನ್ನು ಅಧ್ಯಯನ ಮಾಡದೆ ಸರ್ವೆ ಮಾಡದೆ ಸೆಕ್ಷನ್ 17 ಮಾಡಲು ಹೊರಟಿದ್ದೀರಿ ಹಾಗಾಗಿ ದಯಮಾಡಿ ವಸ್ತು ಸ್ಥಿತಿ ಅಧ್ಯಯನ ಮಾಡದೆ ಸೆಕ್ಷನ್ 17 ಮಾಡಬಾರದು ಎಂದು ನಾವು ವಿನಂತಿ ಮಾಡುತ್ತೇವೆ. ಜೊತೆಗೆ ಬಲವಂತವಾಗಿ ಮಾಡಲು ಹೊರಟಿದ್ದೆ ಆದರೆ ಇಲ್ಲಿನ ನಿವಾಸಿಗಳಾದ ಕಾರ್ಮಿಕರ ರೈತರ ಮೇಲೆ ಮರಣಶಾಸನ ಬರೆದ ಹಾಗೆ ಆಗುತ್ತದೆ. ಈಗ ಸೆಕ್ಷನ್ 4 ಮಾಡಿರುವ ಜಾಗದಲ್ಲಿ ಶಾಲೆ ಮಠ ಮಂದಿರ ದೇವಸ್ಥಾನ ಮಸೀದಿ ಚರ್ಚುಗಳು ಸೇರಿವೆ. ಇದು ಸೆಕ್ಷನ್ 17 ಆದರೆ ಇಲ್ಲಿನ ಕಾರ್ಮಿಕರಿಗೆ ರೈತರಿಗೆ ಸಣ್ಣ ಮನೆಯನ್ನು ಕಟ್ಟುವ ಅವಕಾಶ ಕೂಡ ಇರುವುದಿಲ್ಲ ಹಾಗಾಗಿ ನೀವು ಮನಸು ಮಾಡಿದರೆ ಇದರಿಂದ ಇಲ್ಲಿನ ರೈತರನ್ನು ಕಾರ್ಮಿಕರನ್ನು ಉಳಿಸಲು ಸಾಧ್ಯ ಇದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾಗಳಲ್ಲಿ ಘಿಬ್ಲಿ ಸ್ಟೈಲ್ ಟ್ರೆಂಡಿಂಗ್; ಸಖತ್ ಸದ್ದು ಮಾಡುತ್ತಿರುವ ಇದರ ಬಳಕೆ ಹೇಗೆ?
ಮುಂದಿನ ದಿನಗಳಲ್ಲಿ ಸೆಕ್ಷನ್ 4 ಘೋಷಿಸುವ ಮೊದಲು ಹಾಗೂ ಸೆಕ್ಷನ್ 17 ಮಾಡುವಲ್ಲಿ ಕಡ್ಡಾಯವಾಗಿ ಸ್ಥಳೀಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಅಧಿಕಾರಿಗಳು ಹಾಗೂ ಜನರ ಅಭಿಪ್ರಾಯ ಪಡೆದ ನಂತರವೇ ಕಡತಗಳ ವಿಲೇವಾರಿ ಮಾಡಬೇಕು ಎಂದು ಸಮಿತಿ ವತಿಯಿಂದ ವಿನಮ್ರವಾಗಿ ಮನವಿ ಮಾಡುತ್ತೇವೆ.
ಒತ್ತುವರಿ ಸಮಸ್ಯೆ; ಕ್ಷೇತ್ರದ ಆದ್ಯಂತ ಭಯ ಹುಟ್ಟಿಸಿರುವ ಒತ್ತುವರಿ ತೆರವು ಗುಮ್ಮ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕೊಡುವಂತೆ ಆಗಬೇಕು. 3 ಎಕರೆಗೆ ಸೀಮಿತ ಗೊಳಿಸಿರುವುದನ್ನು ಪುನರ್ ಪರಿಶೀಲನೆ ಮಾಡಬೇಕು. ಏಕೆಂದರೆ ಹಳದಿ ರೋಗ ಪೀಡಿತ ತೋಟಗಳಲ್ಲಿ ಇದೆ ನಿಯಮ ಮುಂದುವರೆಸಿದರೆ ಕಷ್ಟ ಆಗುತ್ತದೆ. ಜೊತೆಗೆ ಬದಲಾದ ಜೀವನ ಮಟ್ಟದಲ್ಲಿ ಮೂರು ಎಕರೆ ಜಮೀನಿನಲ್ಲಿ ಬರುವ ಆದಾಯದಲ್ಲಿ ನೆಮ್ಮದಿಯಾಗಿ ಬದುಕುವುದು ಅತ್ಯಂತ ಕಷ್ಟ ,ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಿಮ್ಮಲ್ಲಿ ವಿನಂತಿ ಮಾಡುತ್ತೇವೆ. ಹಾಗು ಯಾವುದೇ ಕಾರಣಕ್ಕೂ ಸಾಗುವಳಿದಾರರ ಮೇಲೆ ಹೊಸ ಒತ್ತುವರಿ ಪ್ರಕರಣ ದಾಖಲು ಮಾಡಬಾರದು ಎಂದು ನಿಮ್ಮಲ್ಲಿ ವಿನಂತಿ ಮಾಡುತ್ತೇವೆ.
ಸೊಪ್ಪಿನಬೆಟ್ಟ ಜಾಗದಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡವರು ಹಾಗೂ ಸಾಗುವಳಿ ನಡೆಸುತ್ತಿರುವವರಿಗೆ ಭೂಮಿಯ ಹಕ್ಕನ್ನು ನೀಡಬೇಕು.
ಕಾಡುಕೋಣಗಳ ಸ್ಥಳಾಂತರ : ಇತ್ತೀಚಿನ ದಿನಗಳಲ್ಲಿ ಕಾಡುಕೋಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ರೈತರು ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸಿದ ಘಟನೆಗಳು ಸಹ ಹೆಚ್ಚುತ್ತಿದೆ, ಆದ್ದರಿಂದ ಜನನಿಬಿಡ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕಾಡುಕೋಣಗಳನ್ನು ರಾಜ್ಯದ ಬೇರೆ ಸ್ಥಳಗಳಲ್ಲಿರುವ ಅಭಯಾರಣ್ಯಗಳಿಗೆ ಸ್ಥಳಾಂತರಿಸಬೇಕು.












