ಕಡೂರು: (ನ್ಯೂಸ್ ಮಲ್ನಾಡ್ ವರದಿ) ಮದ್ಯವ್ಯಸನಿಯಾಗಿರುವ ಪತಿ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೃಹಿಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಕ್ಷ್ಮೀಪುರದ ಸುನೀಲ್ ಎಂಬುವನ ವಿರುದ್ಧ ಪತ್ನಿ ಅನಿತಾ ದೂರು ನೀಡಿದ್ದಾರೆ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು:
ಆರು ವರ್ಷದ ಹಿಂದೆ ಸುನೀಲ್ ಜೊತೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಸುಮಾರು 87 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ನಮಗೆ ಇಬ್ಬರು ಮಕ್ಕಳಿದ್ದು, ಮಾವ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬಳಿಕ ಪ್ರತಿನಿತ್ಯ ಪತಿ ಮದ್ಯಪಾನ ಮಾಡಿ ಆಗಾಗ ಗಲಾಟೆ ಮಾಡುತ್ತ, ತವರು ಮನೆಯಿಂದ ಹಣ ತರುವಂತೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತು ಮನೆ ತೊರೆದು ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದೆ. ನಂತರ ಗಂಡನ ಕುಟುಂಬಸ್ಥರು ರಾಜಿ ಮಾಡಿಸಿ ಪುನಃ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೂ ಸರಿಯಾಗದ ಪತಿ ಹಾಗೂ ಆತನ ಕುಟುಂಬಸ್ಥರ ವರ್ತನೆಗೆ ಬೇಸತ್ತು ಮಾ.7ರಂದು ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದೇನೆ.
ಇದನ್ನೂ ಓದಿ: ಮಾ.18 ರಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
3 ಲಕ್ಷ ರೂ. ವರದಕ್ಷಿಣೆ ಹಣ ತರುವಂತೆ ಪತಿ ಸುನೀಲ್, ಅತ್ತೆ ಪದ್ಮಾ ಹಾಗೂ ಅಶೋಕ್ ಎಂಬುವರು ಪಿಡಿಸುತ್ತಿದ್ದಾರೆ ಎಂದು ಆರೋಪಿಸಿ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.












