ರಿಪ್ಪನ್ ಪೇಟೆ: (ನ್ಯೂಸ್ ಮಲ್ನಾಡ್ ವರದಿ) ಸಾಗರ ರಸ್ತೆಯ ಸಾವರ್ಕರ್ ಕಾಲೊನಿಯಲ್ಲಿ 20 ದಿನಗಳ ಹಿಂದೆ ಇನ್ನೋವಾ ಕಾರಿನಲ್ಲಿ ಬಂದು ಗೋವು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹಳೆ ಮಂಡ್ಲಿ ನಿವಾಸಿಗಳಾದ ಅಮೀರ್ ಸುಹೇಲ್ (26) ಹಾಗೂ ಮಹಮ್ಮದ್ ಉಲ್ಲಾ ಖಾನ್ (20) ಬಂಧಿತರು.

ಜುಲೈ 3ರ ರಾತ್ರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಆಧರಿಸಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಮುಖಂಡ ದೇವರಾಜ್ ಕೆರೆಹಳ್ಳಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿದೆ.
ಸಿಬ್ಬಂದಿ ರಾಮಚಂದ್ರ, ಅಶೋಕ್, ವಿಶ್ವನಾಥ್, ಪರಮೇಶ್ವರಪ್ಪ ಹಾಗೂ ಅವಿನಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.














