ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಇತ್ತೀಚೆಗೆ ದನಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಸ್ತೆ ಪಕ್ಕದಲ್ಲಿ ಮಲಗಿದ ದನಗಳನ್ನು, ಮನೆಯ ಸಮೀಪ ಕಟ್ಟಿದ ದನಗಳನ್ನೂ ಬಿಡದೇ ಕದ್ದೊಯ್ಯುತ್ತಿದ್ದಾರೆ. ಇದರಿಂದಾಗಿ ಗೋ ಸಾಕಾಣಿಕೆದಾರರಿಗೆ ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಕೊಪ್ಪ ಪಟ್ಟಣದಲ್ಲೇ ಮರುಕಳಿಸಿರುವ ಈ ಘಟನೆ ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಹೌದು, ನಿನ್ನೆ ರಾತ್ರಿ ಕೊಪ್ಪದ ಒಂ ಕಾರ್ ಡ್ರೈ ಫೂಟ್ಸ್ ಅಂಗಡಿ ಸಮೀಪ XUV ಕಾರಿನಲ್ಲಿ (ನಂ: KA 18 MA 9372) ಗೋವುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಆ ಕಾರನ್ನು ಬಜರಂಗದಳದ ಕಾರ್ಯಕರ್ತರು ಹಿಡಿಯಲು ಪ್ರಯತ್ನಿಸಿದರೂ ತಪ್ಪಿಸಿಕೊಂಡು ಹೋಗಿದೆ.

ಈ ರೀತಿಯ ಘಟನೆ 11 ರಿಂದ 12ನೇ ಬಾರಿ ನಡೆಯುತ್ತಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ವಾಹನದ ಮಾಲೀಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳದ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರಿನಲ್ಲಿ ಬಂದು ದನ ಕದಿಯುವ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಮಿತಿಮೀರುತ್ತಿರುವ ದನಗಳ್ಳರ ಹಾವಳಿಗೆ ಕಡಿವಾಣ ಹಾಕಲೇಬೇಕೆಂದು ಹಿಂದೂ ಸಂಘಟನೆಗಳು, ಗೋ ಪ್ರಿಯರು ಎಷ್ಟೇ ಒತ್ತಾಯಿಸಿದರೂ ಅದು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಜನ ಸಂಚಾರ ಇಲ್ಲದ ಪ್ರದೇಶಗಳಲ್ಲಿ ಮಲಗಿದ ಜಾನುವಾರುಗಳಿಗೇ ಹೊಂಚು ಹಾಕುವ ಕಳ್ಳರು ಅವುಗಳನ್ನು ಚಾಣಾಕ್ಷತನದಿಂದ ಕದ್ದೊಯ್ಯುತ್ತಿದ್ದು, ಅವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಪೊಲೀಸರು ಗೋವು ಕಳ್ಳರಿಗೆ ತಕ್ಕ ಪಾಠ ಕಲಿಸಬೇಕಿದೆ.













