ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಪ್ರತಿಷ್ಠಿತ ಮ್ಯಾಮ್ಕೋಸ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳೆ ಗೆದ್ದು ಬೀಗಿದ್ದಾರೆ. 19 ಸ್ಥಾನವನ್ನ ಸಹಕಾರ ಭಾರತಿ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಕಳೆದ 20 ವರ್ಷದಿಂದ ಮ್ಯಾಮ್ಕೋಸ್ ಆಡಳಿತ ಮಂಡಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳೆ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದು, ಮತ್ತೊಂದು ಅವಧಿಗೆ ಸಹಕಾರ ಭಾರತಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಮದುವೆಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ!; ಹೇಗೆ?, ಯಾರು ಅರ್ಹರು, ಇಲ್ಲಿದೆ ನೋಡಿ
ಗೆದ್ದ ಸಹಕಾರ ಭಾರತಿಯ ಅಭ್ಯರ್ಥಿಗಳು ಕೆಳಕಂಡಂತಿವೆ:
* ಕೀರ್ತಿರಾಜ್ ಕಾನಳ್ಳಿ, ಸಾಮಾನ್ಯ (ಸಾಗರ)
* ಕುಬೇಂದ್ರಪ್ಪ ಎಂ, ಸಾಮಾನ್ಯ (ಗುಡುಮಘಟ್ಟ, ಭದ್ರಾವತಿ)
* ಕೃಷ್ಣಮೂರ್ತಿ ಕೆ.ವಿ, ಸಾಮಾನ್ಯ (ಕಿರುಗುಳಿಗೆ, ಹೊಸನಗರ)
* ಜಯಶ್ರೀ ಕಡಗೋಡು, ಮಹಿಳಾ ಮೀಸಲು (ತೀರ್ಥಹಳ್ಳಿ)
* ತಿಮ್ಮಪ್ಪ ಶ್ರೀಧರಪುರ, ಸಾಮಾನ್ಯ (ಸಾಗರ)
* ಧಮೇಂದ್ರ ಹೆಚ್ , ಸಾಮಾನ್ಯ (ಕೊಳವಂಕ, ಹೊಸನಗರ)
* ಬಿ.ಸಿ ನರೇಂದ್ರ, ಸಾಮಾನ್ಯ (ಬೇಳೆಗದ್ದೆ, ಕೊಪ್ಪ)
* ನಂದನ್ ಹಸಿರುಮನೆ, ಸಾಮಾನ್ಯ (ತೀರ್ಥಹಳ್ಳಿ)
* ಪ್ರಸನ್ನ ಹೆಬ್ಬಾರ್ ಜಿ.ಎಸ್, ಸಾಮಾನ್ಯ ( ಕಳಸ-ಎನ್.ಆರ್.ಪುರ)
* ಭರಮಪ್ಪ, ಪರಿಶಿಷ್ಟ ಜಾತಿ ಮೀಸಲು (ಸಾಗರ)
* ಹೆಚ್. ಎಸ್ ಮಹೇಶ್, ಸಾಮಾನ್ಯ (ಹುಲ್ಕುಳಿ, ತೀರ್ಥಹಳ್ಳಿ)
* ಕೆ. ರತ್ನಾಕರ ಯಾನೆ ಧರ್ಮಣ್ಣ, ಸಾಮಾನ್ಯ (ಬೆಳಗಿನ ಮನೆ,ತೀರ್ಥಹಳ್ಳಿ)
* ರಮೇಶ್ ಟಿ.ಎಲ್ , ಹಿಂದುಳಿದ ವರ್ಗ ʼಎʼ (ಚಿಕ್ಕಮಗಳೂರು)
* ವಿರೂಪಾಕ್ಷಪ್ಪ ಜಿ.ಈ, ಸಾಮಾನ್ಯ (ಗೋಂದಿಚಟ್ನಳ್ಳಿ, ಶಿವಮೊಗ್ಗ)
* ವೀರೇಶ್ ಯು.ವಿ, ಹಿಂದುಳಿದ ವರ್ಗ ʼಬಿʼ (ಹಿರೇಜಂಬೂರು, ಶಿಕಾರಿಪುರ)
* ಕಚ್ಚೋಡಿ ಶ್ರೀನಿವಾಸ್ , ಸಾಮಾನ್ಯ (ಶೃಂಗೇರಿ)
* ಸತೀಶ್ ಎನ್, ಪರಿಶಿಷ್ಟ ವರ್ಗ ಮೀಸಲು (ರಾಮೇನಕೊಪ್ಪ, ಶಿವಮೊಗ್ಗ)
* ಸಹನಾ ಸುಭಾಷ್, ಮಹಿಳಾ ಮೀಸಲು (ಕೊಪ್ಪ)
* ಸುರೇಶ್ಚಂದ್ರ, ಸಾಮಾನ್ಯ (ಅಂಬ್ಳೂರು, ಶೃಂಗೇರಿ)












