ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮ್ಯಾಮ್ಕೋಸ್ ನಲ್ಲಿ ಸಹಕಾರ ಭಾರತಿ ಸಂಸ್ಥೆಯಿಂದ ರೈತರಿಗೆ ದ್ರೋಹವಾಗಿದೆ ಎಂಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಎಂ. ನಟರಾಜ್ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮ್ಯಾಮ್ಕೋಸ್ ನಿರ್ದೇಶಕ ಸುರೇಶ್ಚಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಮ್ಯಾಮ್ಕೋಸ್ ಗೆ ಆಡಳಿತ ಮಂಡಳಿಯ ಅಂದಿನ ಉಪಾಧ್ಯಕ್ಷ ನರಸಿಂಹ ನಾಯಕ್ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಹಕಾರ ಸಂಸ್ಥೆಯ ಸದಸ್ಯರು ಮತ್ತು ಅವರ ತೋಟದ ಕಾರ್ಮಿಕರಿಗೆ ಅಪಘಾತ ವಿಮೆ ಜಾರಿಗೆ ತರಲಾಗಿತ್ತು. ಈ ಯೋಜನೆ ಅನ್ವಯ ಇಲ್ಲಿವರೆಗೆ ನೂರಾರು ಸದಸ್ಯರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಹಾಗೂ ಮರಣ ಹೊಂದಿದ್ದರೆ ಕುಟುಂಬಸ್ಥರಿಗೆ ಆರು ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಮಹತ್ವದ ಮಾಹಿತಿ; ಬೆಳೆ ಸಮೀಕ್ಷೆ ಕುರಿತು ಆಕ್ಷೇಪಣೆ ಸಲ್ಲಿಸಲು ಸೂಚನೆ
ಎಚ್. ಎಂ. ನಟರಾಜ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಬೆಳ್ಳಪ್ಪ ಎಂಬುವರು ಮರದಿಂದ ಬಿದ್ದು ಅವಘಡ ಸಂಭವಿಸಿದ್ದಾಗ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಯಾವುದೇ ಬಿಲ್ ಅವರು ನೀಡಿಲ್ಲ. ಸಂಸ್ಥೆಯು ಬೆಳ್ಳಪ್ಪ ಅವರಿಗೆ 2,300 ರೂ. ವಿಮಾ ಪರಿಹಾರ ಮೊತ್ತ ನೀಡಿದಾಗ ಅದನ್ನು ಅವರು ನಿರಾಕರಿಸಿದ್ದಾರೆ.
ಸರಿಯಾಗಿ ದಾಖಲೆ ನೀಡದ ಎಚ್. ಎಂ. ನಟರಾಜ್ ಅವರೇ ಇದಕ್ಕೆ ಜವಾಬ್ದಾರರು. ಈ ವಿಷಯಕ್ಕೆ ಸಂಬಂಧಪಟ್ಟ ದಾಖಲೆಗಳು ಸಂಸ್ಥೆಯಲ್ಲಿ ಲಭ್ಯವಿವೆ. ರೈತಪರ ಚಿಂತನೆಯಿಂದ ಅವರಿಗೆ ಕೆಲಸ ಮಾಡುವ ಅವಕಾಶ ವಿಪುಲವಾಗಿದೆ. ಇಂಥ ರಾಜಕೀಯಪ್ರೇರಿತ ಹೇಳಿಕೆಗಳಿಗೆ ಮನ್ನಣೆ ನೀಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: SC-ST ಸಮುದಾಯದವರ ಗಮನಕ್ಕೆ; ಸಿಗಲಿದೆ ಶೇ.90 ರಷ್ಟು ಸಹಾಯಧನ;ಈ ದಾಖಲೆ ಕಡ್ಡಾಯ, ಹೀಗೆ ಅರ್ಜಿ ಸಲ್ಲಿಸಿ












