ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಳೆದ ವಾರ ಚಾರ್ಮಾಡಿ ಘಾಟಿಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬೆಂಕಿ ಇಟ್ಟಿರುವುದು ಕಿಡಿಗೇಡಿಗಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ಬೆಂಕಿಗೆ ಅಪರೂಪದ ಸಸ್ಯ ರಾಶಿಗಳು ಹಾಗೂ ಕೋಟ್ಯಂತರ ಮೌಲ್ಯದ ಸಸ್ಯ ಸಂಪತ್ತುಗಳು ನಾಶವಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಕಾಡ್ಗಿಚ್ಚಿನ ಅಸಲಿ ಸತ್ಯ ಬಯಲಾಗಿದೆ.
ಇದನ್ನೂ ಓದಿ: ಮದುವೆಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ!; ಹೇಗೆ?, ಯಾರು ಅರ್ಹರು, ಇಲ್ಲಿದೆ ನೋಡಿ
ಶಿಕಾರಿಗೆ ತೆರಳಿದ್ದ ವೇಳೆ ಬೆಂಕಿ ಹಾಕಿರುವ ಕಿಡಿಗೇಡಿಗಳು:
ಹೌದು, ರಾತ್ರಿ ವೇಳೆ ಶಿಕಾರಿಗೆ ತೆರಳಿದ್ದ ವೇಳೆ ಬೆಂಕಿ ಹಾಕಿದ ಕಾರಣ ಇಡೀ ಅರಣ್ಯಕ್ಕೆ ವ್ಯಾಪಿಸಿ 500 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ನಾಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ.
ಹೀಗಾಗಿ ಬೆಂಕಿ ಇಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದು, ಮೂಡಿಗೆರೆ ವಲಯ ಅರಣ್ಯ ಇಲಾಖೆಯಿಂದ ಕಿಡಿಗೇಡಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 24 (ಎ2ಜಿ) ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಬೆಂಕಿ ಇಟ್ಟವರಿಗಾಗಿ ಅರಣ್ಯ ಇಲಾಖೆ ತಲಾಶ್ ನಡೆಸುತ್ತಿದ್ದಾರೆ.












