ಕೊಟ್ಟಿಗೆಹಾರ: ಕಾಲು ಸಂಕಕ್ಕೆ ಮುಕ್ತಿ: 30 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭ

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಸುರೇಶ್ ನಾಯ್ಕ್ ಎಂಬವರ ಮನೆಗೆ ಸಂಕದಲ್ಲಿ ಹೊಳೆ ದಾಟುವ ಸಂಕಷ್ಟದ ಬಗ್ಗೆ ನ್ಯೂಸ್ ಮಲ್ನಾಡ್ ನಲ್ಲಿ ವರದಿ ಪ್ರಕಟಿಸಲಾಗಿತ್ತು.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಸುದ್ದಿ ಪ್ರಕಟವಾದ ಬೆನ್ನಲ್ಲೇ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೆಲವು ದಿನಗಳ ಬಳಿಕ ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ಬಂದು ಪರಿಶೀಲನೆ ನಡೆಸಿದ್ದರು. ಬಳಿಕ ಸರ್ಕಾರದ ಗಮನ ಸೆಳೆದಿದ್ದರು.

ಗ್ರಾಮದ ಸುರೇಶ್ ನಾಯ್ಕ್ ಮನೆಗೆ ಮಳೆಗಾಲದಲ್ಲಿ ಶಿಥಿಲವಾದ ಕಾಲು ಸಂಕ ದಾಟಿ ಜೀವನ ನಡೆಸುವ ಅನಿವಾರ್ಯತೆ ಇತ್ತು. ತುಂಬಿ ಹರಿಯುವ ಕಿರುಹಳ್ಳ ಮಳೆಗಾಲದಲ್ಲಿ ಸುರೇಶ್ ಮನೆಯ ಗೇಟ್ ವರೆಗೂ ನೀರು ಬಂದು ಸಮಸ್ಯೆಯಾಗಿತ್ತು.


ಇದನ್ನೂ ಓದಿ; ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?


ಸುದ್ದಿ ಪ್ರಕಟವಾದ ಬಳಿಕ ಶಾಸಕರ 30ಲಕ್ಷ ಅನುದಾನದಲ್ಲಿ ಗುತ್ತಿಗೆದಾರ ಪದ್ಮಾನಂದನ್ ಭಟ್ ಕಾಮಗಾರಿ ವಹಿಸಿಕೊಂಡು ಭಾನುವಾರದಂದು ಜೆಸಿಬಿ ಯಂತ್ರದ ಮೂಲಕ ಕೆಲಸ ಆರಂಭಿಸಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಸುರೇಶ್ ನಾಯ್ಕ್ ಕುಟುಂಬದ ಮೂಲಸೌಲಭ್ಯದ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ.

‘ಗ್ರಾಮಸ್ಥರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಸೇತುವೆ ಕಾಮಗಾರಿ ನಡೆಸಲಾಗುವುದು. 30 ಲಕ್ಷದಲ್ಲಿ ಈ ಸೇತುವೆ ಕಾಮಗಾರಿ ನಡೆಯಲಿದೆ’– ಪದ್ಮಾನಂದನ್ ಭಟ್, ಗುತ್ತಿಗೆದಾರ.

ʼನಮ್ಮ ಕುಟುಂಬದ ಸಂಕಷ್ಟವನ್ನು ಪತ್ರಿಕೆಗಳಲ್ಲಿ ಮೊದಲು ಸುದ್ದಿ ಬಂದಿತ್ತು. ಬಳಿಕ ಎಲ್ಲಾ ಮಾಧ್ಯಮದವರು ಸುದ್ದಿ ಮಾಡಿ ಜನಪ್ರತಿನಿದಿಗಳ ಗಮನ ಸೆಳೆದರು. ಸೇತುವೆ ನಿರ್ಮಾಣದ ಕನಸು ನನಸಾಗಲು ಸಹಕರಿಸಿದ ಶಾಸಕರು ಹಾಗೂ ಶ್ರಮಿಸಿದ ಎಲ್ಲರಿಗೂ ನಮ್ಮ ಕುಟುಂಬ ಅಭಾರಿಯಾಗಿದೆ’– ಸುರೇಶ್ ನಾಯ್ಕ್, ಗ್ರಾಮಸ್ಥ,ತರುವೆ.

(ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ; ಬೆಳೆ ಹಾನಿ ಪರಿಹಾರಕ್ಕೆ 297 ಕೋಟಿ ರೂ. ಬಿಡುಗಡೆ; ಈ ದಿನ ಜಮಾ- ಸಚಿವ ಕೃಷ್ಣಬೈರೇಗೌಡ ಮಾಹಿತಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.