ಶೃಂಗೇರಿ: ಹೆದ್ದಾರಿ ಕಾಮಗಾರಿ ವಾಹನ ಗುದ್ದಿ ಸ್ಥಳೀಯ ಬೈಕ್ ಸವಾರನ ಕಾಲು ಮುರಿತ

ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ) ಹೆದ್ದಾರಿ ಕಾಮಗಾರಿಯ ವಾಹನವೊಂದು ಬೈಕ್ ಸವಾರನಿಗೆ ಗುದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ಹೆದ್ದಾರಿ ಕಾಮಗಾರಿಯ ವಾಹನ ಸ್ಥಳೀಯ ಬೈಕ್ ಸವಾರನಿಗೆ ಹಿಂಬದಿಯಿಂದ ಗುದ್ದಿದ್ದು ಚಾಲಕನು ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿಲ್ಲ, ಅಪಘಾತದ ಪರಿಣಾಮ ಬೈಕ್ ಸವಾರರ ಕಾಲು ಮುರಿದಿದ್ದು, ಬೈಕ್ ನಜ್ಜುಗುಜ್ಜಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬೈಕ್ ಚಾಲಕನಿಗೆ ಗುದ್ದಿದ ವಾಹನವು ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಕಂಪನಿಗೆ ಸೇರಿದ ವಾಹನವಾಗಿದ್ದು, ಚಾಲಕ ಅಪಘಾತವಾದ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೆ ತೆರಳಿದ್ದಾನೆ. ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತೀಚೆಗಷ್ಟೇ ನೆಮ್ಮಾರಿನ ಬಳಿ ರಸ್ತೆ ಕೆಲಸ ಮಾಡುವಾಗ ಅಮಾಯಕ ಕಾರ್ಮಿಕನೊಬ್ಬ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದನು, ಕಂಪನಿಯು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವ ಕುರಿತು ಆರೋಪ ಕೇಳಿಬಂದಿತ್ತು.

 

ಕೊಪ್ಪ: ವಸೂಲಿ ದಂಧೆ, ರೌಡಿ ಶೀಟರ್ ಗಳ ಜೊತೆಗೆ ಗಲಾಟೆ : ಇಬ್ಬರು ಪೊಲೀಸರ ಸಸ್ಪೆಂಡ್

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಇಬ್ಬರು ಕಾನ್ ಸ್ಟೆಬಲ್ ಗಳು ಅಮಾನತುಗೊಂಡಿದ್ದಾರೆ. ಕಾನ್ ಸ್ಟೆಬಲ್ ಸಿದ್ದೇಶ್, ಹೆಡ್ ಕಾನ್ ಸ್ಟೆಬಲ್ ಉಮಾಶಂಕರ್ ಅಮಾನತುಗೊಂಡಿರುವವರು.

ಏನಿದು ಘಟನೆ

6 ತಿಂಗಳ ಹಿಂದೆ ಲಿಂಗದಹಳ್ಳಿ ಠಾಣೆಯಿಂದ ಅಮಾನತುಗೊಂಡಿದ್ದ ಸಿದ್ದೇಶ್, ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದ ಉಮಾಶಂಕರ್ ಕೊಪ್ಪ ಠಾಣೆಗೆ ವರ್ಗಾವಣೆಗೊಂಡಿದ್ದರು. ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ಅವರು ಶುಕ್ರವಾರ ರಾತ್ರಿ ಅಮಾನತುಗೊಂಡಿದ್ದಾರೆ.

ಸಿದ್ದೇಶ್ ಹಳೇ ಚಾಳಿಯನ್ನು ಮುಂದುವರಿಸಿ ಜನರಿಂದ ವಸೂಲಿ ದಂಧೆ ನಡೆಸುತ್ತಿದ್ದರು. ಉಮಾಶಂಕರ್ ಮದ್ಯಸೇವಿಸಿ ರೌಡಿಶೀಟರ್ ಗಳ ಜೊತೆ ಸೇರಿಕೊಂಡು ಗುಂಪು ಗಲಾಟೆಯಲ್ಲಿ ತೊಡಗಿದ್ದರು. ಕೊಪ್ಪ ಪಿಎಸ್ಐ ಕೌಶಿಕ್ ಅವರ ವರದಿ ಆಧರಿಸಿ DYSP ಅನಿಲ್ ಅಮಾನತು ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದು, ಕರ್ತವ್ಯಲೋಪ ಮಾಡಿದ ತನ್ನ ಇಲಾಖೆಯ ಸಿಬ್ಬಂದಿಯನ್ನೇ ಅಮಾನತುಗೊಳಿಸಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.