ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ರೈತರು ಎದುರಿಸುತ್ತಿರುವ ಅಡಿಕೆಗೆ ಹಳದಿ ಎಲೆರೋಗ, ಎಲೆ ಚುಕ್ಕಿರೋಗ ಜೊತೆಗೆ ಒತ್ತುವರಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಬಾಳೆಹೊನ್ನೂರು ರಂಭಾಪುರಿ ಮಠದಿಂದ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

ನಿನ್ನೆ ಅರಣ್ಯ ಸಚಿವ ಈಶ್ವರ ಖಂಡ್ರೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಏನಿದೆ?;
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ರೈತರು ಹಾಗೂ ರೈತ ಕಾರ್ಮಿಕರು ತಮ್ಮ ಜೀವನ ನಿರ್ವಹಣೆಗಾಗಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಅಡಿಕೆಗೆ ಹಳದಿ ಎಲೆರೋಗ, ಎಲೆ ಚುಕ್ಕಿರೋಗ ಸೇರಿದಂತೆ ವಿವಿಧ ರೋಗಗಳ ಭಾದಿಸಿದ್ದು, ಜೊತೆಗೆ ಬದಲಾದ ಹವಮಾನದಿಂದಾಗಿ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ತಮ್ಮ ಫಸಲನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಕಾರಣದಿಂದಾಗಿ ತಮ್ಮ ಬದುಕಿಗಾಗಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.
ಇತ್ತೀಚಿಗೆ ಅರಣ್ಯ ಇಲಾಖೆ ರೈತರ ಒತ್ತುವರಿ ತೆರವಿಗೆ ಮುಂದಾಗಿದ್ದು, ಹಾಗೂ ಆವೈಜ್ಞಾನಿಕವಾಗಿ ಜಾರಿ ಮಾಡಿರುವ ಸೆಕ್ಷನ್ 4ಅನ್ನು ಸೆಕ್ಷನ್ 17 ಮೀಸಲು ಅರಣ್ಯವಾಗಿಸಲು ಆದೇಶ ಮಾಡಿದೆ. ಹಾಗೂ ಹಿಂದಿನ ಜಿಲ್ಲಾಧಿಕಾರಿ ಗೋಪಾಲಕೃಷ್ಣಗೌಡರು ಚಿಕ್ಕಮಗಳೂರು ಜಿಲ್ಲೆಯ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು, ಇದನ್ನು ಮರಳಿ ಕಂದಾಯ ಇಲಾಖೆಗೆ ಪಡೆಯಬೇಕು.
ರೈತರ ಒತ್ತುವರಿ ತೆರವು ಮಾಡದಂತೆ ಮತ್ತು ಸೆಕ್ಷನ್ 17 ಜಾರಿ ಮಾಡದಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಬೆಳೆ ಹಾನಿ ಪರಿಹಾರಕ್ಕೆ 297 ಕೋಟಿ ರೂ. ಬಿಡುಗಡೆ; ಈ ದಿನ ಜಮಾ- ಸಚಿವ ಕೃಷ್ಣಬೈರೇಗೌಡ ಮಾಹಿತಿ












