ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಗೂಲ್ ಗುಡ್ಡ(ಮಂಡಲದಿಣ್ಣೆ) ಗ್ರಾಮಕ್ಕೆ ಸಾಗಲು ಸೇತುವೆಯಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ಮಂಡಲದಿಣ್ಣೆಯಲ್ಲಿ 15 ಮನೆಗಳಿದ್ದು ಹೆಚ್ಚಿನ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಮಳೆಗಾಲದಲ್ಲಿ ರಭಸದಿಂದ ಹರಿಯುವ ನೀರಿಗೆ ಪೈಪುಗಳು ಹಾಕಿರುವುದರಿಂದ ಕೊಚ್ಚಿ ಹೋಗುತ್ತಿದ್ದು, ಮಳೆಗಾಲದಲ್ಲಿ ಗ್ರಾಮದ ಜನರು ಸಂಪರ್ಕ ಕಡಿತಗೊಂಡು ಪ್ರತಿ ವರ್ಷ ಸಂಕಷ್ಟ ಅನುಭವಿಸುವಂತಾಗಿದೆ. ಶಾಲಾ ಮಕ್ಕಳಿಗೂ ಇದರಿಂದ ತುಂಬಾ ತೊಂದರೆಯಾಗಿದೆ.
ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದ ಗ್ರಾಮದಲ್ಲಿ ಮೂಲಭೂತ ಸೌಲಭ್ಯವಾದ ರಸ್ತೆ ಸಂಪರ್ಕ ಇದ್ದರೂ ಸೇತುವೆಯಿಲ್ಲದೇ ಜನರು ಕಷ್ಟ ಪಡುತ್ತಿದ್ದಾರೆ. ಕೊಟ್ಟಿಗೆಹಾರ ಭಾಗದಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಜನರು ಕೆಲಸಗಳಿಗೆ ಸಾಗಲು ರಸ್ತೆಗೆ ಸೇತುವೆಯ ಅಗತ್ಯವಿದೆ. ರಸ್ತೆಗೆ ತಾತ್ಕಾಲಿಕ ಪೈಪುಗಳನ್ನು ಹಾಕಲಾಗಿದೆ. ಆದರೆ ಮಳೆಯ ರಭಸಕ್ಕೆ ಅರ್ಧ ರಸ್ತೆಯೇ ಇಲ್ಲದಂತಾಗುತ್ತದೆ.
ಇದನ್ನೂ ಓದಿ: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೂಲ್ಸ್ ಕಡ್ಡಾಯ: ಕಲಿಕಾ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ
ತರುವೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೂ, ಮುಖಂಡರು ಬೇಟಿ ನೀಡಿ ಸಮಸ್ಯೆ ಅವರ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮಂಡಲದಿಣ್ಣೆ ದೇವನಗೂಲ್ ಗುಡ್ಡ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರಿಗೆ ತೊಂದರೆ ಆಗದ ರೀತಿ ಕೂಡಲೇ ಈ ಭಾಗಕ್ಕೆ ರಸ್ತೆ ಹಾಗೂ ಸೇತುವೆ ಕೆಲಸಕ್ಕೆ ಅನುದಾನ ಇಟ್ಟುಕೊಡಿ ಎಂದು ಶಾಸಕರ ಗಮನಕ್ಕೆ ತರಲಾಗುವುದು ಎಂದು ಬಣಕಲ್ ಕಾಂಗ್ರೆಸ್ ಪಕ್ಷದ ಹೋಬಳಿ ಅಧ್ಯಕ್ಷ ಸುಬ್ರಮಣ್ಯ ತಿಳಿಸಿದ್ದಾರೆ.
‘ಮಂಡಲದಿಣ್ಣೆ ದೇವನಗೂಲ್ ಭಾಗದ ರಸ್ತೆಗೆ ಸದಸ್ಯರೊಂದಿಗೆ ಬೇಟಿ ನೀಡಿದ್ದೇನೆ. ಈ ರಸ್ತೆಯ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಿಸಲು ಅಷ್ಟು ಅನುದಾನವಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.– ಸುಶೀಲಾ ಗೋಪಾಲ್, ತರುವೆ ಗ್ರಾ.ಪಂ.ಅಧ್ಯಕ್ಷೆ.
(ವರದಿ- ತನು ಕೊಟ್ಟಿಗೆಹಾರ)












