ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದೆರಡು ದಿನಗಳಿಂದ ಎಡೆಬಿಡದೇ ಸುರಿದ ಭಾರಿ ಮಳೆಯಿಂದ ವರ್ಷದ ಮೊದಲ ನೆರೆ ಬಂದಿದೆ.
ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ

ಪ್ಯಾರಲೆಲ್ ರಸ್ತೆ ಸಂಪರ್ಕ ಬಂದ್, ಪಟ್ಟಣದಲ್ಲಿ ದ್ವಿಮುಖ ಸಂಚಾರ:

ಕುರುಬಗೇರಿ ರಸ್ತೆಯಿಂದ ಗಾಂಧಿ ಮೈದಾನಕ್ಕೆ(ಶ್ರೀಮಠ ಪಾರ್ಕಿಂಗ್) ಸಂಪರ್ಕಿಸುವ ಪ್ಯಾರಲಲ್ ರಸ್ತೆಯ ಮೇಲೆ ನೀರು ಬಂದಿರುವ ಕಾರಣ ರಸ್ತೆಯನ್ನು ಬಂದ್ ಮಾಡಲಾಗಿದೆ.



ಏಕಮುಖ ಸಂಚಾರ ವ್ಯವಸ್ಥೆ ಹೊಂದಿದ್ದ ಭಾರತೀಬೀದಿ ಮುಖ್ಯ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಗಾಂಧಿ ಮೈದಾನಕ್ಕೆ ನುಗ್ಗಿದ ನೀರು:
ಪ್ರತಿ ವರ್ಷದಂತೆ ಈ ವರ್ಷವೂ ಗಾಂಧಿ ಮೈದಾನಕ್ಕೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ತಾತ್ಕಾಲಿಕವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಕಪ್ಪೆ ಶಂಕರ ಮುಳುಗಡೆ:
ಇನ್ನು ಶೃಂಗೇರಿ ಶ್ರೀಮಠದಲ್ಲಿ ತುಂಗಾ ನದಿಗೆ ಇಳಿಯುವ ಸ್ಥಳದಲ್ಲಿ ಮೆಟ್ಟಿಲುಗಳ ಮೇಲೆ ನೀರು ಹತ್ತಿರುವ ಕಾರಣ ಕಪ್ಪೆ ಶಂಕರ ಮುಳುಗಿದ್ದು , ಸುರಕ್ಷತೆಯ ದೃಷ್ಟಿಯಿಂದ ಹೊಳೆಗೆ ಇಳಿಯುವ ದಾರಿಯನ್ನು ಬಂದ್ ಮಾಡಲಾಗಿದೆ.



ಮಳೆ ಹೀಗೆಯೇ ಮುಂದುವರೆದರೆ ಕುರುಬಗೇರಿ ಮುಖ್ಯ ರಸ್ತೆ ಸಂಪರ್ಕ ಕಡಿತವಾಗುವ ಸಂಭವವಿದೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಇಂದು ಮೂಡಿಗೆರೆ ತಾಲ್ಲೂಕಿನ ಬಿದ್ರಹಳ್ಳಿ ಸಮೀಪ ಎರ್ಟಿಗ ವಾಹನವೊಂದು ಪಲ್ಟಿಯಾದ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿ ಹೊಡೆದಿದೆ.













