ಶೃಂಗೇರಿ: ಗಾಂಧಿ ಮೈದಾನ ಪಟ್ಟಣ ಪಂಚಾಯಿತಿಗೆ ಒಳಪಟ್ಟಿದ್ದು: ವಿಶೇಷ ನ್ಯಾಯಾಲಯದಿಂದ ಆದೇಶ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ಶೃಂಗೇರಿ ಗಾಂಧಿ ಮೈದಾನ ಜಾಗ ಪಟ್ಟಣ ಪಂಚಾಯಿತಿಗೆ ಒಳಪಟ್ಟಿದ್ದು ಇದರ ಸಂಪೂರ್ಣ ಅಭಿವೃದ್ಧಿ ಹಾಗೂ ರಕ್ಷಣೆ ಹೊಣೆಗಾರಿಕೆಯನ್ನು ಶೃಂಗೇರಿ ಪಟ್ಟಣ ಪಂಚಾಯಿತಿ ನಿರ್ವಹಿಸಬೇಕು ಎಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಪಾಲಯ್ಯ ಅವರು ಆದೇಶಿಸಿದ್ದಾರೆ.

ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಕಂದಾಯ ಇಲಾಖೆ ದಾಖಲೆ ಪ್ರಕಾರ ಹೊಳೆ ಖರಾಬು ಪ್ರದೇಶ ಆಗಿದ್ದು. ಇಂತಹ ನದಿ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನದಿ ಕಲುಷಿತಗೊಳ್ಳುತ್ತಿದೆ ಎಂದು ದಿನಪತ್ರಿಕೆಯೊಂದರಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಸುಮೋಟೊ ಪ್ರಕರಣವನ್ನು ಜ.23ರಂದು ದಾಖಲಿಸಿಕೊಂಡಿತ್ತು. ಈ ಕುರಿತು ವಿಚಾರಣೆ ಕೈಗೊಂಡು ಪರಿಶೀಲನೆ ನಡೆಸಿ ಭೂಕಬಳಿಕೆ ಕೇಸ್ ವಜಾಗೊಳಿಸಿ ಪಟ್ಟಣ ಪಂಚಾಯಿತಿಗೆ ಜವಾಬ್ದಾರಿ ನೀಡಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಗಾಂಧಿ ಮೈದಾನವು ಕೆಳೆದ ಆರು ದಶಕಗಳಿಂದ ಅಂದಿನ ಪುರಸಭೆ ಹಾಗೂ ಇಂದಿನ ಪಟ್ಟಣ ಪಂಚಾಯಿತಿಗೆ ಸೇರಿದ್ದಾಗಿದೆ. 1960-61ರಿಂದ 2023-24ರ ನಾಲಿಗೆ ಕಂದಾಯ ಅಸೆಸ್ಟೆಂಟ್ ರಿಜಿಸ್ಟರ್‌ನಲ್ಲಿ ಗಾಂಧಿ ಮೈದಾನ ಎಂದು ನಮೂದು ಆಗಿದ್ದು, ಪವಿತ್ರ ಯಾತ್ರಾ ಸ್ಥಳಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಿದ್ದು ಅಂದಾಜು ಐದು ದಶಕಗಳಿಂದ ಪ್ರವಾಸಿ ವಾಹನ ನಿಲುಗಡೆ ಶುಲ್ಕದ ಹರಾಜು ಪ್ರಕ್ರಿಯೆ ನಡೆಯುತ್ತ ಬಂದಿದೆ ಪಂಚಾಯಿತಿಗೆ ಉತ್ತಮ ಆದಾಯವನ್ನು ನೀಡುತ್ತಿದೆ. ಈ ಹಿಂದೆ ಗಾಂಧಿ ಮೈದಾನದಲ್ಲಿ ಟೆಂಟ್ ಸಿನಿಮಾ, ಜಾನುವಾರು ಜಾತ್ರೆ, ಯಕ್ಷಗಾನ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ದಸರಾ ಸಂದರ್ಭದಲ್ಲಿ ಸರ್ಕಸ್ ಮನೋರಂಜನೆಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ ಎಂಬ ಅಂಶವನ್ನು ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ವರದಿ ಪರಿಶೀಲನೆ ಮಾಡಿದ ವಿಶೇಷ ನ್ಯಾಯಾಲಯ ಗಾಂಧಿ ಮೈದಾನ ಜಾಗ ಪಂಚಾಯಿತಿಗೆ ಒಳಪಟ್ಟಿದ್ದು ಇದರ ಸಂಪೂರ್ಣ ಅಭಿವೃದ್ಧಿ ಮತ್ತು ರಕ್ಷಣೆ ಪಪಂ ನಿರ್ವಹಿಸಬೇಕು ಎಂದು ಆದೇಶ ನೀಡಿದೆ.

ಇದನ್ನೂ ಓದಿ; ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು

ಹಿಂದಿನ ಜಿಲ್ಲಾಧಿಕಾರಿಗಳು ಗಾಂಧಿ ಮೈದಾನ ಪ್ರಕರಣ ವಿಶೇಷ ನ್ಯಾಯಾಲಯದಲ್ಲಿದೆ ಎಂದು ಗಾಂಧಿ ಮೈದಾನದ ಹರಾಜು ಪ್ರಕ್ರಿಯೆ ತಡೆ ಹಿಡಿದಿದ್ದರು. ಇದರಿಂದ ಪಪಂಗೆ ಗಾಂಧಿ ಮೈದಾನದ ವಾಹನ ನಿಲುಗಡೆ ಹರಾಜಿನಿಂದ ಬರುತ್ತಿದ್ದ ಸುಮಾರು ಒಂದು ಕೋಟಿ ಆದಾಯಕ್ಕೆ ಕತ್ತರಿ ಬಿದ್ದಿತ್ತು.

ಕಂದಾಯ ಇಲಾಖೆ ಒಟ್ಟು 34 ಅಂಗಡಿ ಮಳಿಗೆಯನ್ನು ಸಹ ತೆರವುಗೊಳಿಸಿತ್ತು, ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ತಾಲೂಕು ಆಡಳಿತವು ಅಂದು ಸ್ಪಷ್ಟನೆ ನೀಡಿತ್ತು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.