ಕಾಡುಕೋಣ ಬೇಟೆ ಕೇಸ್: ಆರು ಮಂದಿ ಲಾಕ್ | ಎಸ್ಟೇಟ್ ಮಾಲೀಕ ಸೇರಿ ನಾಲ್ಕು ಜನ ಎಸ್ಕೇಪ್

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅರಣ್ಯ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ ಕಾಟಿ ಕೊಂದ ಆರು ಜನರನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!


ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತೀ ಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯನ ಮನೆಯಲ್ಲಿ ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ 1 ಕೆ.ಜಿ.ಯಷ್ಟು ಮಾಂಸವನ್ನು ಕದ್ದು, ಶೇಖರಿಸಿರುವುದು‌ ಪತ್ತೆಯಾಗಿದೆ. ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಕನೆ ಎಸ್ಟೇಟ್ ನಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸವನ್ನು ಮಾಡಿರುವುದಾಗಿ ತಿಳಿದು ಬಂದಿದೆ.

ಕಲ್ಮನೆ ಎಸ್ಟೇಟ್ ನ ಜೀವನ್ ಡಿ.ಬಿ.ಬಿ.ಎಲ್. ಬಂದೂಕಿನಿಂದ ಗುಂಡಿಕ್ಕಿದ್ದು, ಫೀಲ್ಡ್ ಆಫೀಸರ್ ಬಪ್ಪುಂಜಿಯ ರವೀಶ್, ರೈಟರ್ ಪ್ರದೀಪ್, ಮೇಸ್ತ್ರಿ ದೇಜಪ್ಪ, ಸೀನ, ಬಾಳೂರಿನ ಸುಂದ್ರೇಶ್, ದಿಲೀಪ್, ಕಲ್ಪನೆ ಎಸ್ಟೇಟ್ ಮಾಲೀಕ ಧೀರಜ್ ಎಲ್ಲರೂ ಸೇರಿ ಮಾಂಸ ಹಂಚಿಕೊಂಡಿರುವುದು ಖಚಿತವಾಗಿದೆ

ಮರ್ಕಲ್ ಕೆರೆಯ ಸುತ್ತ ಪರಿಶೀಲಿಸಿದಾಗ ನೀರಿನಲ್ಲಿ ತಲೆಬುರುಡೆ ತೇಲುತ್ತಿರುವುದು ಕಂಡುಬಂದಿದ್ದು ವಶಕ್ಕೆ ಪಡೆಯಲಾಗಿದೆ. ಮಂಜಯ್ಯನ ಮನೆಯಲ್ಲಿ ದೊರೆತ ಅರೆಬೇಯಿಸಿದ ಸುಮಾರು 1 ಕೆ.ಜಿ. ಕಾಡುಕೋಣದ ಮಾಂಸ, ಕಳ್ಳ ಬೇಟೆಗೆ ಉಪಯೋಗಿಸಿದ ಡಿ.ಬಿ.ಬಿ.,ಎಲ್.ಬಂದೂಕನ್ನು ವಶಕ್ಕೆ ಪಡೆದು ವನ್ಯಪ್ರಾಣಿ ಹತ್ಯೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.


ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ


ಕಳ್ಳ ಬೇಟೆ ಆರೋಪದಡಿ ರವೀಶ್, ಪ್ರದೀಪ್, ದೇಜಪ್ಪ, ಸೀನ, ಮಂಜಯ್ಯ, ಸುಂದರ, ರವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸುಂದರೇಶ್, ದಿಲೀಪ್, ಜೀವನ್, ಎಸ್ಟೇಟ್ ಮಾಲೀಕ ಧೀರಜ್ ಪ್ರಭು ತಲೆಮರೆಸಿಕೊಂಡಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಟಿ ಎಂ ಮಾರ್ಗದರ್ಶನದಲ್ಲಿ ವಲಯ ಅರಣ್ಯಯಾಧಿಕಾರಿ ಜಿ.ಮಂಜುನಾಥ್ ನೇತೃತ್ವದಲ್ಲಿ ನಡೆಸಲಾಗಿದ್ದು, DRFO ಸುಹಾಸ್, ಲಕ್ಷ್ಮಣ್, ಉಮೇಶ್, ಅಶ್ವತ್, ಸುಧೀರ್, ಕೃಷ್ಣ ಮೂರ್ತಿ, ಗಿರೀಶ್ ಮತ್ತು ಇತರರು ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.