ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಮಾಡಿದ ಆರೋಪದ ಮೇಲೆ ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಕಳಸ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ಪ್ರಭಾರಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುವಾಗ 50 ಕ್ಕೂ ಹೆಚ್ಚು ಸಾಗುವಳಿ ಚೀಟಿ ಅಕ್ರಮವಾಗಿ ನೀಡಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

2022 ರ ಫೆಬ್ರವರಿ ತಿಂಗಳಲ್ಲಿ ಕಳಸ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ 1 ತಿಂಗಳು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ
ಆಡಳಿತಾತ್ಮಕ ಹಿತ ದೃಷ್ಠಿಯಿಂದ ಕಚೇರಿ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದರೂ ಹೇಮಂತ್ ಕುಮಾರ್ ಕಾನೂನುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿದ್ದಾರೆ. ಅಕ್ರಮವಾಗಿ 50 ಕ್ಕೂ ಹೆಚ್ಚು ಸಾಗುವಳಿ ಪತ್ರ ನೀಡಿದ್ದು, ಇದು ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಎಂ. ಎ. ಸಲಾವುದ್ದೀನ್ ಒತ್ತಾಯಿಸಿದ್ದಾರೆ.
ಹೇಮಂತ್ ಕುಮಾರ್ 2017 ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿ ನ್ಯಾಯಾಂಗದ ಬಂಧನದಲ್ಲಿದ್ದರು. ಆಗ ರಾಜಸ್ವ ನಿರೀಕ್ಷಕರು ಆಗಿದ್ದರು ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆ ಇದ್ದಾಗ ಬಡ್ತಿ ನೀಡಲು ಅವಕಾಶ ಇರುವುದಿಲ್ಲ ಅದರು ಇವರಿಗೆ ಶಿರಸ್ಥೆದಾರರಾಗಿ ಬಡ್ತಿ ನೀಡಲಾಗಿದೆ.
ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್
ಅಕ್ರಮ ಸಾಗುವಳಿ ಚೀಟಿ ಪ್ರಕರಣದಲ್ಲಿ ಕಳಸ ತಾಲ್ಲೂಕು ಕಛೇರಿಯ ಸಿಬ್ಬಂದಿ ಪ್ರಕಾಶ್ ಮತ್ತು ಶರತ್ ರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಮುಖ್ಯ ಆರೋಪಿ ಹೇಮಂತ್ ಕುಮಾರ್ ರ ಮೇಲೆ ಕ್ರಮ ಆಗದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತಿದೆ. ಕಳಸ ತಾಲ್ಲೂಕು ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿನ ತಹಶೀಲ್ದಾರರು ದಾಖಲೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಲೋಕಾಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.













