ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರವೂ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಹೌದು, ನಾಳೆಯಿಂದ ಅಂದರೆ 20.12.2025 ರಿಂದ 22.12.2025ರ ವರೆಗೆ 3 ದಿನಗಳ ಕಾಲ ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.
ದೆಹಲಿ ಮೂಲದ ಇವೆಂಟ್ ಮ್ಯಾನೇಜ್‌ಮೆಂಟ್ ತಂಡಕ್ಕೆ ಕಾರ್ಯಕ್ರಮದ ಉಸ್ತುವಾರಿ ನೀಡಿದ್ದು, ನೂರಾರು ಸಿಬ್ಬಂದಿ ಕಳೆದ ಒಂದು ವಾರದಿಂದ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುತ್ತಿದ್ದಾರೆ. ಮುಖ್ಯವೇದಿಕೆ, ಸಭಾಂಗಣ, ಬೆಳೆಗಾರರು, ಸಾರ್ವಜನಿಕರು ಕುಳಿತುಕೊಳ್ಳಲು ಆತ್ಯಾಧುನಿಕ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದೆ. ಪ್ರದರ್ಶನ ಮಳಿಗೆಗಳು, ಫುಡ್ ಕೋರ್ಟ್, ವ್ಯಾಪಾರ ಮಳಿಗೆಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಕಾಫಿ ಸಂಶೋಧನಾ ಕೇಂದ್ರದ ಹತ್ತಾರು ಎಕರೆ ಪ್ರದೇಶವನ್ನು ಸಂಪೂರ್ಣ ವಿದ್ಯುತ್ ದೀಪಾಲಂಕಾರವನ್ನು ಮಾಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಬಾಳೆಹೊನ್ನೂರು ಮುಖ್ಯರಸ್ತೆಯಿಂದ ಸೀಗೋಡು, ಸಿಸಿಆರ್‌ಐವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸ್ವಾಗತ ಕೋರುವ ಬ್ಯಾನರ್, ಬಣ್ಣ ಬಣ್ಣದ ಧ್ವಜಗಳು, ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಸಂಶೋಧನಾ ಪಟ್ಟೆಗಳು ಹಾಗೂ ಮುಖ್ಯರಸ್ತೆಗಳಲ್ಲಿ ಆಗಮಿಸಿದ ಸಾರ್ವಜನಿಕರು ಸೆಲ್ಪಿ ತೆಗೆದುಕೊಳ್ಳಲು ವಿಶೇಷ ಸೆಲಿ ಜೋನ್ ನಿರ್ಮಿಸಲಾಗಿದೆ.
ವಾಹನ ನಿಲುಗಡೆ ವ್ಯವಸ್ಥೆ:
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಕ್ರೀಡಾಂಗಣ, ಜವಾಹರ ನವೋದಯ ವಿದ್ಯಾಲಯದ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಅಲ್ಲಿಂದ ಸಾರ್ವಜನಿಕರನ್ನು ಕರೆತರಲು 15 ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಅತಿಥಿಗಳು, ವಿಐಪಿಗಳಿಗಾಗಿ ಸಿಆರ್‌ಎಸ್ ಬಿಸಿವಿ ಶಾಲೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಅತಿಥಿಗಳನ್ನು ಕರೆತರಲು 5 ಎಲೆಕ್ಟಿಕ್ ವಾಹನಗಳ ವ್ಯವಸ್ಥೆ ಕೈಗೊಳ್ಳಲಾಗಿದೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಕಾಫಿ ಕೃಷಿಗೆ ಸಂಬಂಧಿಸಿದ ಮಹತ್ವದ ಹಲವಾರು ವಿಚಾರಗಳ ಚರ್ಚೆ ಮತ್ತು ವಿಷಯ ಮಂಡನೆಗಳು ಆಗಲಿವೆ. ಇಲ್ಲಿ ಚರ್ಚೆಯಾಗುವ ವಿಚಾರಗಳು ಪ್ರತಿಯೊಬ್ಬ ಬೆಳೆಗಾರರ ಕೃಷಿ ವಿಧಾನಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ಸಾಧ್ಯತೆಗಳಿವೆ. ಈ ಕಾರ್ಯಕ್ರಮದ ಘೋಷವಾಕ್ಯ 7 ಬೀನ್ಸ್ ಟು 7 ಲ್ಯಾಕ್ ಟನ್ಸ್ ನಂತೆ, 2047ನೇ ಇಸವಿಯೊಳಗೆ ಈ ಗುರಿ ತಲುಪುವ ತಯಾರಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ 3 ದಿನಗಳು ಪ್ರತಿಯೊಬ್ಬ ಭಾರತೀಯ ಕಾಫಿ ಬೆಳೆಗಾರರ ಮತ್ತು ಪಾಲುದಾರರ ಆಲೋಚನೆ ಬದಲಿಸುವ ವಿಶೇಷ ಕಾರ್ಯಕ್ರಮ ಆಗಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ನೋಂದಣಿ ಅಗತ್ಯವಿದೆ. ಅದರ ಸಲುವಾಗಿ ಆನ್ ಲೈನ್ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.












