ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಬೆಲ್ಜಿಯಂ ದೇಶದ 13 ಕಾಫಿ ಉದ್ಯಮಿಗಳ ತಂಡವು ಭದ್ರಾ ಕಾಫಿ ಎಸ್ಟೇಟ್ಗೆ ಭೇಟಿ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖ್ಯಾತ ಭದ್ರಾ ಕಾಫಿ ಎಸ್ಟೇಟ್
ದೇಶದಲ್ಲೇ ಅತ್ಯಂತ ಉತ್ತಮವಾದ ಕಾಫಿ (Coffee) ಸಿಗುವ ಪ್ರದೇಶ ಅಂದರೆ ಅದು ಚಿಕ್ಕಮಗಳೂರು. ಈ ಕಾಫಿಗೆ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ (International Level) ಉತ್ತಮ ಹೆಸರಿದ್ದು, ಇಲ್ಲಿನ ರೋಬಸ್ಟಾ ಕಾಫಿಗೆ ಬೆಲ್ಜಿಯಂನಲ್ಲಿ ಬೇಡಿಕೆ ಇದೆ. ಒಂದು ಲಕ್ಷ ಟನ್ ಕಾಫಿಯನ್ನು ಬೆಳೆಯುವ ಚಿಕ್ಕಮಗಳೂರು ದೇಶದ ರಫ್ತಿನಲ್ಲಿ 7.74% ಭಾಗದಷ್ಟು ಕಾಫಿಯನ್ನು ಬೆಲ್ಜಿಯಂಗೆ ಕಳಿಸುತ್ತದೆ ಅನ್ನೋ ವಿಷಯ ನಿಮಗೆ ಗೊತ್ತೇ? ಈಗ ಆ ಕಾಫಿ ಘಮಕ್ಕೆ ಸೋತು ಅಲ್ಲಿನ ಉದ್ಯಮಿಗಳ ತಂಡ 9000 ಕಿ.ಮೀ ಪ್ರಯಾಣ ಬೆಳೆಸಿ ಚಿಕ್ಕಮಗಳೂರಿಗೆ ಬಂದಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖ್ಯಾತ ಭದ್ರಾ ಕಾಫಿ ಎಸ್ಟೇಟ್ಗೆ ಬೆಲ್ಜಿಯಂ ದೇಶದ 13 ಕಾಫಿ ಉದ್ಯಮಿಗಳ ತಂಡವು ಭೇಟಿ ನೀಡಿದೆ. ದೇಶದ ಅತ್ಯುತ್ತಮ ಕಾಫಿ ಸಂಸ್ಕರಣಾ ಕೇಂದ್ರಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಈ ಎಸ್ಟೇಟ್ನ ಕಾರ್ಯವೈಖರಿ ಮತ್ತು ಇಲ್ಲಿನ ರೋಬಸ್ಟಾ ಕಾಫಿಯ ಗುಣಮಟ್ಟವನ್ನು ವಿದೇಶಿ ತಜ್ಞರು ಶ್ಲಾಘಿಸಿದ್ದಾರೆ.
ಎಸ್ಟೇಟ್ನ ಕಾಫಿ ತೋಟಗಳು, ಆಧುನಿಕ ರೋಸ್ಟಿಂಗ್ ಮತ್ತು ಪಲ್ಪರಿಂಗ್ ಘಟಕಗಳನ್ನು ವೀಕ್ಷಿಸಿದ ತಂಡವು, ಕಾಫಿ ಹಣ್ಣಿನಿಂದ ಹಿಡಿದು ಪ್ಯಾಕಿಂಗ್ವರೆಗಿನ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದೆ. ಕಾಫಿ ಲೋಕದ ಅತ್ಯುನ್ನತ ಗೌರವವಾದ ‘ಫೈನ್ ಕಪ್ ಅವಾರ್ಡ್’ ಪಡೆದಿರುವ ಈ ಎಸ್ಟೇಟ್ನ ವಿಧಾನಗಳನ್ನು ವಿದೇಶಿ ಉದ್ಯಮಿಗಳು ಆಸಕ್ತಿಯಿಂದ ಗಮನಿಸಿದ್ದಾರೆ.












