ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ. ಈ ವೇಳೆ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ ಸಿಕ್ಕಿರಲಿಲ್ಲ. ಸಂಜೆ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ












