ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಹಾಗೂ ಕಾರೇಹಳ್ಳಿ ಭಾಗದಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಕೆಲವು ದಿನಗಳಿಂದ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಬೆನ್ನು ಹುರಿ ಮುರಿದು ಹಾಸಿಗೆ ಹಿಡಿದ ವಿದ್ಯಾರ್ಥಿನಿ | ಬಾಲಕಿಯ ಚಿಕಿತ್ಸೆಗೆ ನೆರವು ಕೋರಿದ ಪೋಷಕರು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಹಾರ್ಗೋಡು ಗ್ರಾಮದ 5ನೇ ತರಗತಿ ಬಾಲಕಿ ನಿಶಿತಾ ಆಟವಾಡುವಾಗ ಬಿದ್ದು ಬೆನ್ನ ಹುರಿ (ಸ್ಪೈನಲ್ ಕಾರ್ಡ್) ಮುರಿದು ಹಾಸಿಗೆ ಹಿಡಿದಿರುವ ಕರಣಾಜನಕ ಘಟನೆ ನಡೆದಿದೆ.
ಮನೆಯ ಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ತಲೆಕೆಳಗಾಗಿ ಬಿದ್ದು ತನ್ನ ದೇಹದ ಕೈಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ಬಾಲಕಿ ಹಾರ್ ಗೋಡಿನ ಕೆ.ಆರ್. ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿಯಾಗಿದ್ದು ಇವರು ಕೂಲಿ ಕಾರ್ಮಿಕರಾಗಿದ್ದು, ದಿನದ ಒಪ್ಪತ್ತಿಗೂ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ.
ಮಗಳ ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದು, ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಶೇ ನೂರರಷ್ಟು ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಔಷಧಿಗೆ ಶೇ 50 ರಷ್ಟು ಸ್ಪಂಧಿಸಿರುವ ಬಾಲಕಿ ಈಗ ಒಂದು ಕೈ ಹಾಗೂ ಕಾಲುಗಳಿಗೆ ಸ್ಪರ್ಷ ಬಂದಿದೆ.
ಬಣಕಲ್ ನ ಶ್ರೀ ಕೃಷ್ಣ ಕ್ಲಿನಿಕ್ ವೈದ್ಯರು ಅವಳಿಗೆ ಪಿಸಿಯೋತೆರಫಿ ನೀಡುತ್ತಿದ್ದಾರೆ. ಬಾಲಕಿಯು ಗುಣವಾಗುತ್ತೇನೆಂಬ ಆತ್ಮವಿಶ್ವಾಸದಿಂದ ಮುಂದಿನ ಕನಸು ಕಾಣುತ್ತಿದ್ದಾಳೆ. ನಿಲ್ಲಲು ಆಗದ ಕೈಯನ್ನು ಎತ್ತಲು ಆಗದ ಸ್ಥಿತಿಯಿಂದ ಇರುವ ಬಾಲಕಿ ನಿಶಿತಾಗೆ ಪೋಷಕರು ಚಿಕಿತ್ಸೆಗೆ ನೆರವು ಕೋರಿ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಗುವಿನ ಚಿಕಿತ್ಸೆಗೆ ಸುಮಾರು 5 ಲಕ್ಷ ಖರ್ಚಿದ್ದು, ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಹೆಚ್ಚಿನ ಮಾಹಿತಿಗೆ ಪೋಷಕರ ದೂರವಾಣಿ ಸಂಖ್ಯೆ 9980430710 ಕರೆ ಮಾಡಬಹುದು. ಅಥವಾ
ದಾನಿಗಳು ಖಾತೆ ಸಂಖ್ಯೆ 0692500136635601
IFSC CODE: KARB0000069 ಅವರ ಖಾತೆಗೆ ಹಣ ಹಾಕಬಹುದು ಅಥವಾ ಪೋನ್ ಪೇ ಮಾಡುವ ಮೂಲಕ ನೆರವು ನೀಡಬಹುದು.












