ಶೃಂಗೇರಿ: ದಕ್ಷಿಣ ವಲಯದ ಯುವಮಹೊತ್ಸವ ಕಾರ್ಯಕ್ರಮ ಉದ್ಘಾಟನೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಮೆಣಸೆಯ ರಾಜೀವಗಾಂಧಿ ಪರಿಸರದಲ್ಲಿ ಮೂರು ದಿನದ ದಕ್ಷಿಣ ವಲಯದ ಯುವಮಹೊತ್ಸವ ಕಾರ್ಯಕ್ರಮವನ್ನು ಶುಕ್ರವಾರ ವಾರಾಣಸಿಯ ಕರಪಾತ್ರಿ ಸ್ವಾಮಿ ಅಭಿಷೇಕ ಬ್ರಹ್ಮಚಾರಿಯವರು ಉದ್ಘಾಟಿಸಿದರು.

 

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ಉದ್ಘಾಟನಾ ಭಾಷಣ ಮಾಡಿದ ಅವರು, ಯುವಶಕ್ತಿ ಜಾಗೃತವಾದರೆ ಮಾತ್ರ ದೇಶ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಹಾಗಾಗಿ ಯುವಕರು ಭಾರತೀಯ ಸಂಸ್ಕೃತಿಯ ಆಧಾರವಾದ ವೇದ, ಉಪನಿಷತ್, ಪುರಾಣ ಮೊದಲಾದವುಗಳಲ್ಲಿ ಚಿತ್ರಿಸಲ್ಪಟ್ಟ ನಚಿಕೇತ, ಪ್ರಹ್ಲಾದ ಮೊದಲಾದವರಿಂದ ಹಾಗೂ ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರೇ ಮೊದಲಾದ ಐತಿಹಾಸಿಕ ಪುರುಷರಿಂದ ಸ್ಪೂರ್ತಿಯನ್ನು ಪಡೆದು ದೇಶವನ್ನು ಕಟ್ಟುವಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ; ರಾಜೌರಿಯಲ್ಲಿ ಗುಂಡಿನ ಕಾಳಗ; ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ

ಕ್ರೀಡಾಸ್ಪರ್ಧೆಗಳಿಗೆ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆಯನ್ನು ನೀಡಿದ ಯುವಚೇತನ ಸಂಘಟನೆಯ ರಾಷ್ಟ್ರೀಯ ಸಮನ್ವಯಕರಾದ ಶ್ರೀ ರೋಹಿತ್ ಕುಮಾರ್ ಸಿಂಗ್ ಮಾತನಾಡಿ, ಮೆಕಾಲೆ ಶಿಕ್ಷಣವು ಭಾರತೀಯರಲ್ಲಿ ದಾಸ್ಯ ಮನೋಭಾವವನ್ನು ಉಂಟುಮಾಡಿದೆ. ಹಾಗಾಗಿ ಯುವಕರಲ್ಲಿ ಪುನಃ ಭಾರತೀಯತೆಯನ್ನು ಹೆಚ್ಚಿಸುವ ಕೆಲಸವಾಗಬೇಕಿದೆ. ಶ್ರೀ ಶಂಕರಾಚಾರ್ಯರೇ ಮೊದಲಾದ ಭಾರತೀಯ ಅಧ್ಯಾತ್ಮ ಚಿಂತಕರು, ಭಗತ್ ಸಿಂಗ್ ಮೊದಲಾದ ಕ್ರಾಂತಿಕಾರಿಗಳ ವಿಚಾರಗಳನ್ನು ಅಧ್ಯಯನವನ್ನು ನಡೆಸಿ ರಾಷ್ಟ್ರೀಯ ಮನೋಭಾವವನ್ನು ಜಾಗೃತಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವಮಹೋತ್ಸವಗಳಂತ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

 

ದಕ್ಷಿಣವಲಯದ ಯುವಮಹೋತ್ಸವದ ಅಂಗವಾಗಿ ಮೆಣಸೆ ವೃತ್ತದಿಂದ ರಾಜೀವಗಾಂಧಿ ಪರಿಸರದವರೆಗೆ ಶೋಭಾಯಾತ್ರೆಯನ್ನು ನಡೆಸಲಾಯಿತು. ಪಾರಂಪರಿಕ ಚಂಡೆ ವಾದನದ ಜೊತೆಗೆ ಸಾಗಿಬಂದ ಶೋಭಾಯಾತ್ರೆಯಲ್ಲಿ, ನಾನಾ ರಾಜ್ಯಗಳಿಂದ ಬಂದ 250 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಈ ಸಂದರ್ಭದಲ್ಲಿ ಯುವಮಹೋತ್ಸವದ ಪ್ರಧಾನ ಸಂಚಾಲಕರಾದ ಪ್ರೊ.ಚಂದ್ರಕಾಂತ, ಪ್ರೊ.ಸೂರ್ಯನಾರಾಯಣ ಭಟ್, ಪ್ರೊ.ಗಣೇಶ ಈಶ್ವರ ಭಟ್, ಪ್ರೊ.ಆರ್. ಬಾಲಾಜಿ ಮೊದಲಾದವರು ಇದ್ದರು.

 

ಬೆನ್ನು ಹುರಿ ಮುರಿದು ಹಾಸಿಗೆ ಹಿಡಿದ ವಿದ್ಯಾರ್ಥಿನಿ | ಬಾಲಕಿಯ ಚಿಕಿತ್ಸೆಗೆ ನೆರವು ಕೋರಿದ ಪೋಷಕರು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಹಾರ್ಗೋಡು ಗ್ರಾಮದ 5ನೇ ತರಗತಿ ಬಾಲಕಿ ನಿಶಿತಾ ಆಟವಾಡುವಾಗ ಬಿದ್ದು ಬೆನ್ನ ಹುರಿ (ಸ್ಪೈನಲ್ ಕಾರ್ಡ್) ಮುರಿದು ಹಾಸಿಗೆ ಹಿಡಿದಿರುವ ಕರಣಾಜನಕ ಘಟನೆ ನಡೆದಿದೆ.

ಬಾನಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ನಿಶಿತಾ ಪ್ರತಿಭಾವಂತೆಯಾಗಿದ್ದು, ಶಾಲೆಯಲ್ಲಿ ಓದುವುದರಲ್ಲೂ ಮುಂದಿದ್ದಳು. ಅರಳು ಹುರಿದಂತೆ ಮಾತನಾಡುವ ಬಾಲಕಿಗೆ ಶಾಲೆಯ ಒಂದು ದಿನದ ರಜೆ ತನ್ನ ಜೀವನವನ್ನೇ ಕೊರಗಿಸುವಂತೆ ಮಾಡಿದೆ.

ಮನೆಯ ಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ತಲೆಕೆಳಗಾಗಿ ಬಿದ್ದು ತನ್ನ ದೇಹದ ಕೈಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ಬಾಲಕಿ ಹಾರ್ ಗೋಡಿನ ಕೆ.ಆರ್. ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿಯಾಗಿದ್ದು ಇವರು ಕೂಲಿ ಕಾರ್ಮಿಕರಾಗಿದ್ದು, ದಿನದ ಒಪ್ಪತ್ತಿಗೂ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ.

ಮಗಳ ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದು, ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಶೇ ನೂರರಷ್ಟು ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಔಷಧಿಗೆ ಶೇ 50 ರಷ್ಟು ಸ್ಪಂಧಿಸಿರುವ ಬಾಲಕಿ ಈಗ ಒಂದು ಕೈ ಹಾಗೂ ಕಾಲುಗಳಿಗೆ ಸ್ಪರ್ಷ ಬಂದಿದೆ.

ಬಣಕಲ್ ನ ಶ್ರೀ ಕೃಷ್ಣ ಕ್ಲಿನಿಕ್ ವೈದ್ಯರು ಅವಳಿಗೆ ಪಿಸಿಯೋತೆರಫಿ ನೀಡುತ್ತಿದ್ದಾರೆ. ಬಾಲಕಿಯು ಗುಣವಾಗುತ್ತೇನೆಂಬ ಆತ್ಮವಿಶ್ವಾಸದಿಂದ ಮುಂದಿನ ಕನಸು ಕಾಣುತ್ತಿದ್ದಾಳೆ. ನಿಲ್ಲಲು ಆಗದ ಕೈಯನ್ನು ಎತ್ತಲು ಆಗದ ಸ್ಥಿತಿಯಿಂದ ಇರುವ ಬಾಲಕಿ ನಿಶಿತಾಗೆ ಪೋಷಕರು ಚಿಕಿತ್ಸೆಗೆ ನೆರವು ಕೋರಿ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಗುವಿನ ಚಿಕಿತ್ಸೆಗೆ ಸುಮಾರು 5 ಲಕ್ಷ ಖರ್ಚಿದ್ದು, ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಹೆಚ್ಚಿನ ಮಾಹಿತಿಗೆ ಪೋಷಕರ ದೂರವಾಣಿ ಸಂಖ್ಯೆ 9980430710 ಕರೆ ಮಾಡಬಹುದು. ಅಥವಾ

ದಾನಿಗಳು ಖಾತೆ ಸಂಖ್ಯೆ 0692500136635601
IFSC CODE: KARB0000069 ಅವರ ಖಾತೆಗೆ ಹಣ ಹಾಕಬಹುದು ಅಥವಾ ಪೋನ್ ಪೇ ಮಾಡುವ ಮೂಲಕ ನೆರವು ನೀಡಬಹುದು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.