ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ 2015 ರಿಂದ ಕರ್ತವ್ಯ ನಿರ್ವಹಿಸುತ್ತ, ಸದ್ಯ ಸಖರಾಯಪಟ್ಟಣ ಠಾಣೆಯಲ್ಲಿ ಪೇದೆಯಾಗಿರುವ ಪ್ರತಾಪ್, ಲುಕೆಮಿಯ/ಬ್ಲಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸ್ನೇಹಿತನನ್ನು ಉಳಿಸಿಕೊಳ್ಳುವ ಸಲುವಾಗಿ ಇಲಾಖೆಯಲ್ಲಿನ ಕೆಲ ಮಾತೃ ಹೃದಯಿ ಸಿಬ್ಬಂದಿಗಳು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಹಣ ಕ್ರೂಢೀಕರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

2015 ಸಾಲಿನ ಚಿಕ್ಕಮಗಳೂರು ನಾಗರೀಕ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದು, ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಾಪ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದವರಾಗಿದ್ದು, ಬಡ ಕುಟುಂಬದಿಂದ ಹಲವಾರು ಕನಸುಗಳನ್ನು ಹೊತ್ತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಮೊದಲು ಕರ್ತ್ಯವ ನಿರ್ವಹಿಸಿದ್ದಾರೆ.
ನಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಾಪ್ ತುಂಬಾ ಒಳ್ಳೆಯ ಹುಡುಗ. ನಾವೆಲ್ಲರೂ ಒಂದೇ ಕುಟುಂಬದವರಿದ್ದಂತೆ. ಕಷ್ಟ ಎನ್ನುವುದು ಯಾರಿಗೂ ಹಂಚಿಕೊಟ್ಟಿದ್ದಲ್ಲ, ಯಾರಿಗೂ ಬಿಡುವುದಿಲ್ಲ. ನಾವು ನಮ್ಮ ಹುಡುಗನನ್ನು ಉಳಿಸಿಕೊಳ್ಳುವುದಕ್ಕಾಗಿ ಮಾನವೀಯತೆಯ ದೃಷ್ಟಿಯಿಂದ ವಾಟ್ಸಾಪ್ ಗ್ರೂಪ್ ಮೂಲಕ ಹಣ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಈ ಮನವಿಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು, ಪ್ರತಾಪ್ ಶೀಘ್ರ ಗುಣಮುಖನಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ. – ಶರಣ ಬಸಪ್ಪ, ಪ್ರತಾಪ್ ಸ್ನೇಹಿತ
2019 ರ ಜೂನ್ 24 ರಂದು ಲಕ್ಯಾ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ಅಪಘಾತದಲ್ಲಿ 2 ವರ್ಷದ ಮಗು ಅನ್ವಿತ್ ಎಡಗಾಲಿನ ತೊಡೆಯ ಮೂಳೆ ಮುರಿದು, ಮೂತ್ರ ಕೋಶಕ್ಕೆ ಹಾನಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ವೇಳೆ ಮಗನ ಚಿಕಿತ್ಸೆಗಾಗಿ ಸುಮಾರು 2.5 ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದು, ಒಂದೂವರೆ ವರ್ಷ ವೇತನ ರಹಿತ ರಜೆ ಹೋಗಿದ್ದರು ಆ ಸಮಯದಲ್ಲಿ ಆರ್ಥಿಕವಾಗಿ ಬಲಹೀನನಾಗಿ ಕುಂದಿದ್ದರು.

ಕಳೆದ 4 ವರ್ಷಗಳಿಂದ ಇತ್ತ ತನ್ನ ಮಗುವಿಗೆ ತಾಯಿ, ತಂದೆ ಎರಡೂ ಆಗಿ ಸೇವೆ ಮಾಡುವುದರ ಜೊತೆ ಜೊತೆಯಲ್ಲೇ ಪ್ರತಾಪ್ ಇಲಾಖೆಯ ಕೆಲಸವನ್ನೂ ಮಾಡುತ್ತಾ ಬಂದಿದ್ದರು. ಅವರ ಮಗ ಸದ್ಯ ಒಂದನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದರೆ, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ವಿಧಿಯು ಮತ್ತೆ ಅವರ ಜೀವನದಲ್ಲಿ ಕರಾಳ ದಿನಗಳನ್ನು ತಂದೊಡ್ಡದ್ದು, ಲುಕೆಮಿಯ/ಬ್ಲಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇಲಾಖೆಯಲ್ಲಿ ಪ್ರತಾಪ್ ತುಂಬಾ ಒಳ್ಳೆಯ ಹುಡುಗ ಎಂಬ ಹೆಸರು ಉಳಿಸಿಕೊಂಡಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಇಲಾಖೆಯಲ್ಲಿ ಎಲ್ಲರೂ ತಮ್ಮ ಕೈಲಾದಷ್ಟು ನೀಡಿ ಸಹಕಾರ ಮಾಡುತ್ತಿದ್ದಾರೆ. ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಸರ್ಕಾರದಿಂದ ಬೇರೆ ಯಾವ ಯೋಜನೆ ಮೂಲಕ ಸಹಕಾರ ಮಾಡಬಹುದು ಎಂದು ಸರ್ಕಾರದಿಂದ ಮಾಹಿತಿ ಪಡೆದು ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ. ಪ್ರತಾಪ್ ಶಿಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಬರಲಿಬೆಂದು ಪ್ರಾರ್ಥಿಸಿಕೊಳ್ಳುತ್ತೇನೆ. – ಡಾ. ವಿಕ್ರಮ ಅಮಟೆ, ಎಸ್ಪಿ

ಇದೀಗ ಪ್ರತಾಪ್ ಬೆಂಗಳೂರಿನ ಹೆಲ್ತ್ ಕೇರ್ ಗ್ಲೋಬಲ್ ಕ್ಯಾನ್ಸರ್ ಆಸ್ಪತ್ರೆ (ಹೆಚ್ಸಿಜಿ)ಯಲ್ಲಿ ಕಿಮೋ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಇವರಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್ ನಡೆಯುತ್ತಿದ್ದು, ಇವರ ಚಿಕಿತ್ಸೆಗಾಗಿ 45 ರಿಂದ 50 ಲಕ್ಷದವರೆಗೂ ಹಣದ ಅವಶ್ಯಕತೆಯಿದೆ. ಈ ಕುರಿತು ಆಸ್ಪತ್ರೆಯಿಂದ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದ್ದು, ಪೇದೆ ಪ್ರತಾಪ್ ಮತ್ತು ಕುಟುಂಬಸ್ಥರು ಕಂಗಾಲಾಗಿದ್ದು, ನೆರವಿಗಾಗಿ ಕಾಯುತ್ತಿದ್ದಾರೆ.
ಪ್ರತಾಪ್ ಬ್ಯಾಂಕ್ ಖಾತೆ ವಿವರ:
Name : PRATAPA BT
A/C N0 : 73700100016569
IFSC CODE : BARB0VJCMLR
BANK OF BARODA, IG ROAD BRANCH
Phone pay, google pay : 9844552624
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶರಣ ಬಸಪ್ಪ ಸಂಚಾರಿ ಠಾಣೆ – 9945258543
ಪ್ರತಾಪ್ ತುಂಬಾ ಒಳ್ಳೆಯ ಹುಡುಗ ಬಡತನದಲ್ಲಿ ಬೆಳೆದು, ಪೊಲೀಸ್ ಇಲಾಖೆಯಲ್ಲೂ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ವಿಧಿಯಾಟದ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕಿತ್ತುಕೊಂಡಿತು. ತಾಯಿಯಿಲ್ಲದ ಮಗುವನ್ನು ತಾನೇ ತಾಯಿಯಾಗಿ ಹಾರೈಕೆ ಮಾಡುತ್ತಿದ್ದ ಹುಡುಗ ಇದೀಗ ಆಸ್ಪತ್ರೆಯಲ್ಲಿ ಅಸಹಾಯಕನಾಗಿ ಮಲಗಿದ್ದಾನೆ. ಪುಟ್ಟ ಮಗುವಿನ ಹಾರೈಕೆಗಾದರೂ ಪ್ರತಾಪ್ ಮತ್ತೆ ಚೇತರಿಸಿಕೊಳ್ಳಲಿ. ನಮ್ಮೂರು ಹುಡುಗ ಪ್ರತಾಪನನ್ನು ಉಳಿಸಿಕೊಳ್ಳಲು ನಮ್ಮ ಕೈಲಾದ ಸಹಕಾರ ಮಾಡುತ್ತೇವೆ.– ಗೋವಿಂದ ಶೆಟ್ಟಿ, ಎಸ್.ಬಿದರೆ ಗ್ರಾಮಸ್ಥ












