ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಹಾರ್ಗೋಡು ಗ್ರಾಮದ 5ನೇ ತರಗತಿ ಬಾಲಕಿ ನಿಶಿತಾ ಆಟವಾಡುವಾಗ ಬಿದ್ದು ಬೆನ್ನ ಹುರಿ (ಸ್ಪೈನಲ್ ಕಾರ್ಡ್) ಮುರಿದು ಹಾಸಿಗೆ ಹಿಡಿದಿರುವ ಕರಣಾಜನಕ ಘಟನೆ ನಡೆದಿದೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ಬಾನಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ನಿಶಿತಾ ಪ್ರತಿಭಾವಂತೆಯಾಗಿದ್ದು, ಶಾಲೆಯಲ್ಲಿ ಓದುವುದರಲ್ಲೂ ಮುಂದಿದ್ದಳು. ಅರಳು ಹುರಿದಂತೆ ಮಾತನಾಡುವ ಬಾಲಕಿಗೆ ಶಾಲೆಯ ಒಂದು ದಿನದ ರಜೆ ತನ್ನ ಜೀವನವನ್ನೇ ಕೊರಗಿಸುವಂತೆ ಮಾಡಿದೆ.

ಮನೆಯ ಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ತಲೆಕೆಳಗಾಗಿ ಬಿದ್ದು ತನ್ನ ದೇಹದ ಕೈಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ಬಾಲಕಿ ಹಾರ್ ಗೋಡಿನ ಕೆ.ಆರ್. ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿಯಾಗಿದ್ದು ಇವರು ಕೂಲಿ ಕಾರ್ಮಿಕರಾಗಿದ್ದು, ದಿನದ ಒಪ್ಪತ್ತಿಗೂ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ.
ಮಗಳ ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದು, ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಶೇ ನೂರರಷ್ಟು ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಔಷಧಿಗೆ ಶೇ 50 ರಷ್ಟು ಸ್ಪಂಧಿಸಿರುವ ಬಾಲಕಿ ಈಗ ಒಂದು ಕೈ ಹಾಗೂ ಕಾಲುಗಳಿಗೆ ಸ್ಪರ್ಷ ಬಂದಿದೆ.
ಇದನ್ನೂ ಓದಿ; ರಾಜೌರಿಯಲ್ಲಿ ಗುಂಡಿನ ಕಾಳಗ; ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ
ಬಣಕಲ್ ನ ಶ್ರೀ ಕೃಷ್ಣ ಕ್ಲಿನಿಕ್ ವೈದ್ಯರು ಅವಳಿಗೆ ಪಿಸಿಯೋತೆರಫಿ ನೀಡುತ್ತಿದ್ದಾರೆ. ಬಾಲಕಿಯು ಗುಣವಾಗುತ್ತೇನೆಂಬ ಆತ್ಮವಿಶ್ವಾಸದಿಂದ ಮುಂದಿನ ಕನಸು ಕಾಣುತ್ತಿದ್ದಾಳೆ. ನಿಲ್ಲಲು ಆಗದ ಕೈಯನ್ನು ಎತ್ತಲು ಆಗದ ಸ್ಥಿತಿಯಿಂದ ಇರುವ ಬಾಲಕಿ ನಿಶಿತಾಗೆ ಪೋಷಕರು ಚಿಕಿತ್ಸೆಗೆ ನೆರವು ಕೋರಿ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಗುವಿನ ಚಿಕಿತ್ಸೆಗೆ ಸುಮಾರು 5 ಲಕ್ಷ ಖರ್ಚಿದ್ದು, ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಹೆಚ್ಚಿನ ಮಾಹಿತಿಗೆ ಪೋಷಕರ ದೂರವಾಣಿ ಸಂಖ್ಯೆ 9980430710 ಕರೆ ಮಾಡಬಹುದು. ಅಥವಾ
ದಾನಿಗಳು ಖಾತೆ ಸಂಖ್ಯೆ 0692500136635601
IFSC CODE: KARB0000069 ಅವರ ಖಾತೆಗೆ ಹಣ ಹಾಕಬಹುದು ಅಥವಾ ಪೋನ್ ಪೇ ಮಾಡುವ ಮೂಲಕ ನೆರವು ನೀಡಬಹುದು.
ಶೃಂಗೇರಿ: 24 ರಿಂದ ದಕ್ಷಿಣ ವಲಯ ಮಟ್ಟದ ಯುವಮಹೋತ್ಸವ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕಿನ ಮೆಣಸೆ ರಾಜೀವ್ ಗಾಂಧಿ ಸಂಸ್ಕೃತ ವಿಶ್ವ ವಿದ್ಯಾನಿಲಯದಲ್ಲಿ ನವೆಂಬರ್ 24 ರಿಂದ ಮೂರು ದಿನಗಳ ಕಾಲ ದಕ್ಷಿಣ ವಲಯ ಮಟ್ಟದ ಯುವ ಮಹೋತ್ಸವ ನಡೆಯಲಿದೆ ಎಂದು ಮಹೋತ್ಸವದ ಸಂಯೋಜಕ ಪ್ರೊ| ಚಂದ್ರಕಾಂತ್ ಭಟ್ ಹೇಳಿದರು.
ಮೆಣಸೆಯ ಸಂಸ್ಕೃತ ವಿವಿಯಲ್ಲಿ ಮಂಗಳವಾರ ಯುವ ಮಹೋತ್ಸವದ ಪಾರಿತೋಷಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಮಹೋತ್ಸವದಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯದ 7 ವಿವಿಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 40 ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಜಯ ವೈಜಯಂತಿ ಪಾರಿತೋಷಕವನ್ನು ಸಮಗ್ರ ಪ್ರಶಸ್ತಿಯಾಗಿ ನೀಡಲಾಗುತ್ತದೆ. ಮಹೋತ್ಸವದಲ್ಲಿ ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ಸ್ಪರ್ಧೆ ನಡೆಯಲಿದ್ದು, 50 ಕ್ಕೂ ಹೆಚ್ಚು ನಿರ್ಣಾಯಕರು ವಿವಿಧ ವಿವಿಯಿಂದ ಬರಲಿದ್ದಾರೆ.
ಮಹೋತ್ಸವದ ಅಂಗವಾಗಿ ನ.24 ರಂದು ಬೆಳಗ್ಗೆ 8 ಕ್ಕೆ ಮೆಣಸೆಯ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆ ನಡೆಯಲಿದೆ. ಕ್ರೀಡೋತ್ಸವದ ಉದ್ಯೋಷಣೆಯನ್ನು ಯುವ ಚೇತನ ಸಂಘಟನೆಯ ರಾಷ್ಟ್ರೀಯ ಸಮನ್ವಯಕಾರ ರೋಹಿತ್ ಕುಮಾರ್ ಸಿಂಹ ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ವಾರಣಾಸಿಯ ಸ್ವಾಮಿ ಅಭಿಷೇಕ ಬ್ರಹ್ಮಚಾರಿ ಮಾಡಲಿದ್ದು, ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಉಪಸ್ಥಿತರಿರಲಿದ್ದಾರೆ ಎಂದರು.
ವಿಶ್ವ ವಿದ್ಯಾನಿಲಯದ ನಿರ್ದೇಶಕ ಹಂಸಧರ್ ಝಾ ಮಾತನಾಡಿ, ಕೇಂದ್ರೀಯ ಸಂಸ್ಕೃತ ವಿವಿಯ ಅಧೀನದಲ್ಲಿರುವ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಸರ್ವತೋಮುಖ ಹಾಗೂ ಪಠೇತರ ಪ್ರೋತ್ಸಾಹಿಸುತ್ತಿರುವ ಅಭಿವೃದ್ಧಿ ಚಟುವಟಿಕೆಗೆ ದೃಷ್ಟಿಯಿಂದ ಮಹೋತ್ಸವ ಆಯೋಜಿಸಲಾಗುತ್ತದೆ ಎಂದರು.
ಗಣೇಶ್ ಈಶ್ವರ ಭಟ್ ಮಾತನಾಡಿ, 3 ದಿನದ ಮಹೋತ್ಸವದ ಸಮಾರೋಪ ಸಮಾರಂಭವು ನ.26 ರಂದು ಸಂಜೆ ನಡೆಯಲಿದ್ದು, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿಶ್ರಾಂತ ಕುಲಪತಿ ಎ.ಪಿ.ಸಚ್ಚಿದಾನಂದ ಭಾಗವಹಿಸಲಿದ್ದಾರೆ ಎಂದರು.












