ಬಾಳೆಹೊನ್ನೂರು: ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ಹಣ ಎಗರಿಸಿದ ಖದೀಮರು

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ 4,50 ಲಕ್ಷ ಎಗರಿಸಿದ ಖದೀಮರನ್ನು ಬಂಧಿಸಿರುವ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.


ಇದನ್ನೂ ಓದಿ: ಮತ್ತೆ ಏರಿಕೆಯಾದ ಅಡಿಕೆ ದರ; ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ


ಏನಿದು ಘಟನೆ:
ಮಹಂತೇಶ್ ಎಸ್ ಹಾಗೂ ಪ್ರಭುದೇವ್ ಎನ್ನುವವರಿಗೆ ಮಂಡ್ಯ ಮೂಲದ ರಾಜೇಂದ್ರ ಎನ್ನುವ ವ್ಯಕ್ತಿ ಪರಿಚಯವಾಗಿದ್ದು, ಮಠಕ್ಕೆ ಸೇರಿದ 100 ರೂ. ಮುಖಬೆಲೆಯ ಕೋಟಿ ಗಟ್ಟಲೆ ಹಣ ನಮ್ಮ ಬಳಿ ಇದೆ ಯಾರಾದರೂ 500 ರೂ. ಮುಖಬೆಲೆಯ ನೋಟುಗಳು ಇದ್ದರೆ, 1 ಲಕ್ಷ ಹಣವನ್ನು ಕೊಟ್ಟರೆ ಮಠದ ಹಣ 100 ರೂ. ಮುಖಬೆಲೆಯ 2 ಲಕ್ಷ ಹಣ ಕೊಡುವುದಾಗಿ ನಂಬಿಸಿದ್ದಾರೆ. ಆರೋಪಿಯ ಮಾತು ನಂಬಿದ ಇಬ್ಬರು ಸ್ನೇಹಿತರು 4,50 ಲಕ್ಷ ಹಣವನ್ನು ಬಾಳೆಹೊನ್ನೂರು ಸಮೀಪ ಪ್ಲೋರೀಂಜಾ ಹೋಂ ಸ್ಟೇ ಗೆ ಬರುವಂತೆ ತಿಳಿಸಿದ್ದಾರೆ.


ಇದನ್ನೂ ಓದಿ: ರಾಜ್ಯದ ವಾಹನ ಸವಾರರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ; ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿಢೀರ್ ಏರಿಕೆ


ಅದರಂತೆ ಹೋಂ ಸ್ಟೇ ಹೋದ ವೇಳೆ ಬೆಂಗಳೂರಿನ ವಾಸಿಗಳಾದ ಮಂಜುನಾಥ ಮತ್ತು ಮುರುಳಿಧರ್ ಎಂಬ ವ್ಯಕ್ತಿಗಳಿಗೆ ಆರೋಪಿ ರಾಜೇಂದ್ರ ಸ್ನೇಹಿತ ನಂದೀಶ್ ಎಂಬ ವ್ಯಕ್ತಿ ಹಣ ತರುವಂತೆ ಹೇಳಿದ್ದಾರೆ. ನಂತರ ಮೂಡಿಗೆರೆ ಮೂಲದ ಚೇತನ್ ಎನ್ನುವ ವ್ಯಕ್ತಿ ತಂದಿರುವ ಹಣ ತೋರಿಸುವಂತೆ ತಿಳಿಸಿದ್ದು, ಹಣ ತೋರಿಸಿದ ನಂತರ ಇನ್ನೊರ್ವ ಮೂಡಿಗೆರೆ ಮೂಲದ ಗಜೇಂದ್ರ ಎನ್ನುವವರಿಗೆ ಫೋನ್ ಮೂಲಕ ಕರೆ ಮಾಡಿ ಮಠದ ಹಣ ತರುವಂತೆ ಸೂಚಿಸಿದ್ದಾನೆ. ಆರೋಪಿ ಗಜೇಂದ್ರ ಒಂದು ಮರದ ಪೆಟ್ಟಿಗೆ ತಂದು ಇದರಲ್ಲಿ ಮಠದ ಹಣವಿದೆ ಎಂದು ಹೇಳಿ ಮಹಂತೇಶ್ ಎಸ್, ಪ್ರಭುದೇವ್ ಹಾಗೂ ಬೆಂಗಳೂರು ಮೂಲದ ಮಂಜುನಾಥ ಹಾಗೂ ಮುರುಳಿಧರ್ ತಂದಿದ್ದ ಹಣದ ಬ್ಯಾಗ್ ಅನ್ನು ತೆಗೆದುಕೊಂಡು ಓಡಿ ಹೋಗಿದ್ದಾರೆ.


ಇದನ್ನೂ ಓದಿ: ರೈತರು ಸೇರಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ; ವಿವಿಧ ಯೋಜನೆಯಡಿ ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ


ಅನುಮಾನಗೊಂಡು ಆರೋಪಿಗಳು ತಂದಿದ್ದ ಮರದ ಪೆಟ್ಟಿಗೆ ತೆರೆದು ನೋಡಿದಾಗ ಅದರ ಎರಡು ಕಡೆಯಲ್ಲಿ 100 ರೂ. ಮುಖ ಬೆಲೆಯ ನೋಟುಗಳನ್ನು ಇಟ್ಟು ಅದರೊಳಗೆ ನ್ಯೂಸ್ ಪೇಪರ್ ಹಾಗೂ ಭತ್ತದ ಹೊಟ್ಟು ತುಂಬಿ ಬಾಕ್ಸ್ ಮಾಡಿದ್ದಾರೆ. 100 ರೂ. ಮುಖ ಬೆಲೆಯ ಹಣ ಎಣಿಸಿ ನೋಡಿದಾಗ 15.500 ರೂ. ಹಣ ಮಾತ್ರ ಇದ್ದು, ರಾಜೇಂದ್ರ ರವರ ಗ್ಯಾಂಗ್ ನಿಂದ ಮೋಸ ಹೋಗಿರುವುದಾಗಿ ತಿಳಿದಿದೆ.


ಇದನ್ನೂ ಓದಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗ; 13,000 ದಿಂದ 30,000 ವರೆಗೆ ವೇತನ


ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿದ ರಾಜೇಂದ್ರ, ನಂದೀಶ್, ಗಜೇಂದ್ರ ಹಾಗೂ ಚೇತನ್ ಅವರುಗಳ ವಿರುದ್ಧ ದೂರು ದಾಖಲಿಸಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ವಿದ್ಯಾರ್ಥಿಗಳಿಗೆ ಸಿಗಲಿದೆ ವಾರ್ಷಿಕ 50,000 ಸ್ಕಾಲರ್ ಶಿಪ್


ಆದರೆ ಕೇವಲ ನಾಲ್ಕೂವರೆ ಲಕ್ಷ ಹಣಕ್ಕೆ ಇಷ್ಟೊಂದು ವ್ಯವಸ್ಥಿತ ಡೀಲ್ ಆಗಿತ್ತೇ ?, ಬೆಂಗಳೂರಿನಿಂದ ಬಂದ ಗ್ಯಾಂಗ್ ಇಷ್ಟೊಂದು ಕಡಿಮೆ ಮೊತ್ತಕ್ಕೆ ಡೀಲ್ ಕುದುರಿಸಿತ್ತೇ ಅಥವಾ ಭಾರೀ ಪ್ರಮಾಣದಲ್ಲಿ ಹಣದ ವ್ಯವಹಾರ ಆಗಿದೆಯಾ ಎಂಬ ಸಂಶಯವು ವ್ಯಕ್ತವಾಗಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಸತ್ಯಾಸತ್ಯತೆ ಹೊರಗೆಳೆಯಬೇಕಿದೆ

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.