ಪ್ರತಿಭಟನೆ ವೇಳೆ ಹೃದಯಾಘಾತಕ್ಕೆ ಒಳಗಾಗಿ ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ ನಿಧನ

ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿಯ ಹಿರಿಯ ನಾಯಕ, ಮಾಜಿ ಎಂಎಲ್ಸಿ ಎಂ.ಬಿ ಭಾನುಪ್ರಕಾಶ್ (68) ಅವರು ಇಂದು ನಿಧನರಾಗಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುಸ್ತಾಗುತ್ತಿದೆ ಎಂದು ಹೇಳಿ ಕಾರಿನಲ್ಲಿ ಕುಳಿತುಕೊಂಡರು, ನಂತರ ಆಸ್ಪತ್ರೆಗೆ ಸಾಗಿಸಲಾಯಿತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.


ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; 5 ಲಕ್ಷ ರೈತರ ಖಾತೆಗೆ ಬರ ಪರಿಹಾರ ಮೊತ್ತ ಜಮಾ


ಭಾನುಪ್ರಕಾಶ್ ಅವರು ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದವರಾಗಿದ್ದು ಬಿಜೆಪಿ ಸಂಘಟನೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. 2019ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಭಾನುಪ್ರಕಾಶ್ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಸರಳ, ಸಜ್ಜನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.


ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ► ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಕಟ್ಟಾಳುವಾಗಿದ್ದ ಅವರು ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಬಂಗಾರಪ್ಪ ಎದುರು ಸ್ಪರ್ಧಿಸಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸಿದವರಲ್ಲಿ ಇವರೂ ಒಬ್ಬರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಬಾಳೆಹೊನ್ನೂರು: ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ಹಣ ಎಗರಿಸಿದ ಖದೀಮರು

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ 4,50 ಲಕ್ಷ ಎಗರಿಸಿದ ಖದೀಮರನ್ನು ಬಂಧಿಸಿರುವ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಏನಿದು ಘಟನೆ:
ಮಹಂತೇಶ್ ಎಸ್ ಹಾಗೂ ಪ್ರಭುದೇವ್ ಎನ್ನುವವರಿಗೆ ಮಂಡ್ಯ ಮೂಲದ ರಾಜೇಂದ್ರ ಎನ್ನುವ ವ್ಯಕ್ತಿ ಪರಿಚಯವಾಗಿದ್ದು, ಮಠಕ್ಕೆ ಸೇರಿದ 100 ರೂ. ಮುಖಬೆಲೆಯ ಕೋಟಿ ಗಟ್ಟಲೆ ಹಣ ನಮ್ಮ ಬಳಿ ಇದೆ ಯಾರಾದರೂ 500 ರೂ. ಮುಖಬೆಲೆಯ ನೋಟುಗಳು ಇದ್ದರೆ, 1 ಲಕ್ಷ ಹಣವನ್ನು ಕೊಟ್ಟರೆ ಮಠದ ಹಣ 100 ರೂ. ಮುಖಬೆಲೆಯ 2 ಲಕ್ಷ ಹಣ ಕೊಡುವುದಾಗಿ ನಂಬಿಸಿದ್ದಾರೆ. ಆರೋಪಿಯ ಮಾತು ನಂಬಿದ ಇಬ್ಬರು ಸ್ನೇಹಿತರು 4,50 ಲಕ್ಷ ಹಣವನ್ನು ಬಾಳೆಹೊನ್ನೂರು ಸಮೀಪ ಪ್ಲೋರೀಂಜಾ ಹೋಂ ಸ್ಟೇ ಗೆ ಬರುವಂತೆ ತಿಳಿಸಿದ್ದಾರೆ.

ಅದರಂತೆ ಹೋಂ ಸ್ಟೇ ಹೋದ ವೇಳೆ ಬೆಂಗಳೂರಿನ ವಾಸಿಗಳಾದ ಮಂಜುನಾಥ ಮತ್ತು ಮುರುಳಿಧರ್ ಎಂಬ ವ್ಯಕ್ತಿಗಳಿಗೆ ಆರೋಪಿ ರಾಜೇಂದ್ರ ಸ್ನೇಹಿತ ನಂದೀಶ್ ಎಂಬ ವ್ಯಕ್ತಿ ಹಣ ತರುವಂತೆ ಹೇಳಿದ್ದಾರೆ. ನಂತರ ಮೂಡಿಗೆರೆ ಮೂಲದ ಚೇತನ್ ಎನ್ನುವ ವ್ಯಕ್ತಿ ತಂದಿರುವ ಹಣ ತೋರಿಸುವಂತೆ ತಿಳಿಸಿದ್ದು, ಹಣ ತೋರಿಸಿದ ನಂತರ ಇನ್ನೊರ್ವ ಮೂಡಿಗೆರೆ ಮೂಲದ ಗಜೇಂದ್ರ ಎನ್ನುವವರಿಗೆ ಫೋನ್ ಮೂಲಕ ಕರೆ ಮಾಡಿ ಮಠದ ಹಣ ತರುವಂತೆ ಸೂಚಿಸಿದ್ದಾನೆ. ಆರೋಪಿ ಗಜೇಂದ್ರ ಒಂದು ಮರದ ಪೆಟ್ಟಿಗೆ ತಂದು ಇದರಲ್ಲಿ ಮಠದ ಹಣವಿದೆ ಎಂದು ಹೇಳಿ ಮಹಂತೇಶ್ ಎಸ್, ಪ್ರಭುದೇವ್ ಹಾಗೂ ಬೆಂಗಳೂರು ಮೂಲದ ಮಂಜುನಾಥ ಹಾಗೂ ಮುರುಳಿಧರ್ ತಂದಿದ್ದ ಹಣದ ಬ್ಯಾಗ್ ಅನ್ನು ತೆಗೆದುಕೊಂಡು ಓಡಿ ಹೋಗಿದ್ದಾರೆ.

ಅನುಮಾನಗೊಂಡು ಆರೋಪಿಗಳು ತಂದಿದ್ದ ಮರದ ಪೆಟ್ಟಿಗೆ ತೆರೆದು ನೋಡಿದಾಗ ಅದರ ಎರಡು ಕಡೆಯಲ್ಲಿ 100 ರೂ. ಮುಖ ಬೆಲೆಯ ನೋಟುಗಳನ್ನು ಇಟ್ಟು ಅದರೊಳಗೆ ನ್ಯೂಸ್ ಪೇಪರ್ ಹಾಗೂ ಭತ್ತದ ಹೊಟ್ಟು ತುಂಬಿ ಬಾಕ್ಸ್ ಮಾಡಿದ್ದಾರೆ. 100 ರೂ. ಮುಖ ಬೆಲೆಯ ಹಣ ಎಣಿಸಿ ನೋಡಿದಾಗ 15.500 ರೂ. ಹಣ ಮಾತ್ರ ಇದ್ದು, ರಾಜೇಂದ್ರ ರವರ ಗ್ಯಾಂಗ್ ನಿಂದ ಮೋಸ ಹೋಗಿರುವುದಾಗಿ ತಿಳಿದಿದೆ.

ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿದ ರಾಜೇಂದ್ರ, ನಂದೀಶ್, ಗಜೇಂದ್ರ ಹಾಗೂ ಚೇತನ್ ಅವರುಗಳ ವಿರುದ್ಧ ದೂರು ದಾಖಲಿಸಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.

ಆದರೆ ಕೇವಲ ನಾಲ್ಕೂವರೆ ಲಕ್ಷ ಹಣಕ್ಕೆ ಇಷ್ಟೊಂದು ವ್ಯವಸ್ಥಿತ ಡೀಲ್ ಆಗಿತ್ತೇ ?, ಬೆಂಗಳೂರಿನಿಂದ ಬಂದ ಗ್ಯಾಂಗ್ ಇಷ್ಟೊಂದು ಕಡಿಮೆ ಮೊತ್ತಕ್ಕೆ ಡೀಲ್ ಕುದುರಿಸಿತ್ತೇ ಅಥವಾ ಭಾರೀ ಪ್ರಮಾಣದಲ್ಲಿ ಹಣದ ವ್ಯವಹಾರ ಆಗಿದೆಯಾ ಎಂಬ ಸಂಶಯವು ವ್ಯಕ್ತವಾಗಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಸತ್ಯಾಸತ್ಯತೆ ಹೊರಗೆಳೆಯಬೇಕಿದೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.