ಶೃಂಗೇರಿ ಪಟ್ಟಣ ಪಂಚಾಯಿತಿ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ತೆರೆಮರೆಯಲ್ಲಿ ಪ್ರಯತ್ನ !

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣ ಪಂಚಾಯಿತಿ ಜಾಗವನ್ನು ಏಕಾಏಕಿ ಕಂದಾಯ ಇಲಾಖೆಗೆ ಹಸ್ತಾಂತರಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪವು ಬಂದಿದೆ.

ಶೃಂಗೇರಿ ಪಟ್ಟಣ ಸಣ್ಣ ಊರಾಗಿದ್ದು ಗಾಂಧಿ ಮೈದಾನದ ಪ್ರವಾಸಿಗರ ವಾಹನ ಪಾರ್ಕಿಂಗ್ ಶುಲ್ಕವೇ ಪಂಚಾಯಿತಿಗೆ ಮುಖ್ಯ ಆದಾಯವಾಗಿದೆ, ವರ್ಷಕ್ಕೆ 80 ಲಕ್ಷದಿಂದ 1 ಕೋಟಿ ಆದಾಯವನ್ನು ಪಾರ್ಕಿಂಗ್ ಶುಲ್ಕದಿಂದ ಸಂಗ್ರಹಿಸಲಾಗುತ್ತಿದೆ, ಗಾಂಧಿ ಮೈದಾನ ಜಾಗವು 1960ರಿಂದಲೂ ಪಟ್ಟಣ ಪಂಚಾಯಿತಿ ಸುಪರ್ದಿಯಲ್ಲಿ ಇದ್ದು ಅಸೆಸ್ಮೆಂಟ್ ಸಹ ಇರುತ್ತದೆ, ಆದರೆ ಈಗ ಏಕಾಏಕಿ ಗಾಂಧಿ ಮೈದಾನ ಜಾಗವನ್ನು ಪಟ್ಟಣ ಪಂಚಾಯಿತಿಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಲು ರಾತ್ರೋರಾತ್ರಿ ಪ್ರಕ್ರಿಯೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..

ಇತ್ತೀಚೆಗೆ ಪಟ್ಟಣ ಪಂಚಾಯಿತಿ V/S ಗಾಂಧಿ ಮೈದಾನದ ಅಂಗಡಿ ಮಾಲೀಕರ ನಡುವಿನ ಪ್ರಕರಣದಲ್ಲಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶವಾಗಿತ್ತು, ಪಟ್ಟಣ ಪಂಚಾಯಿತಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಆದರೆ ಆ ಪ್ರಕ್ರಿಯೆ ಚಾಲನೆಯಲ್ಲಿ ಇರುವಾಗಲೇ ಅದು ಪಟ್ಟಣ ಪಂಚಾಯಿತಿ ಸುಪರ್ದಿಗೆ ಒಳಪಡುವ ಜಾಗವಲ್ಲ, ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಹೊಸ ವರಸೆ ಪ್ರಾರಂಭಿಸಲಾಗಿದೆ.

ಉಪವಿಭಾಗಾಧಿಕಾರಿ ಸ್ಪಷ್ಟನೆ: ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಉಪವಿಭಾಗಾಧಿಕಾರಿಯವರು ಎಲ್ಲಾ ಹೊಳೆ ಖರಾಬು ಭೂಮಿ ಕಂದಾಯ ಇಲಾಖೆಗೆ ಒಳಪಡುವ ಜಾಗವೇ ಆಗಿರುತ್ತದೆ, ಆದರೆ ಅದರಿಂದ ಬರುವ ಆದಾಯವು ಮೊದಲಿನಂತೆ ಪಟ್ಟಣ ಪಂಚಾಯಿತಿಗೇ ಸೇರುತ್ತದೆ. ಅದರಲ್ಲಿ ವ್ಯತ್ಯಾಸ ಆಗುವುದಿಲ್ಲ ಎಂದಿದ್ದಾರೆ.

ಆದರೆ ಹೊಳೆ ಖರಾಬಿನಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂಬ ಕೋರ್ಟ್ ಆದೇಶ ಜಾರಿಗೆ ಬಂದಲ್ಲಿ, ಗಾಂಧಿ ಮೈದಾನದ ಅಂಗಡಿಗಳ ತೆರವಿನ ಜೊತೆಗೆ ಭವಿಷ್ಯದಲ್ಲಿ ಪಾರ್ಕಿಂಗ್ ಚಟುವಟಿಕೆಗಳಿಗೆ ಸಹ ನಿಷೇಧ ಬೀಳುವ ಸಂದರ್ಭವಿದೆ.

ಕಳಸದಲ್ಲಿ ಕಂದಾಯ ಇಲಾಖೆ ದ್ವಿನೀತಿ:
ಇನ್ನು ಭೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಕಳಸದಲ್ಲಿ ಮುಂದಾಗಿದ್ದ ಕಂದಾಯ ಇಲಾಖೆ ಸಣ್ಣಪುಟ್ಟ ಜಮೀನುದಾರರು ಹಾಗೂ ಮಧ್ಯಮ ವರ್ಗದವರ ಭೂಮಿ ತೆರವಿಗೆ ಸಿದ್ಧತೆ ನಡೆಸಿದ ನಡುವೆ ವರದಿಯಲ್ಲಿ ಪ್ರಭಾವಿ ಸಂಸ್ಥಾನದ ಪ್ರಮುಖರ ನೂರಾರು ಎಕರೆ ಬೇನಾಮಿ ಭೂಮಿಯನ್ನು ಹಾಗೂ ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಭೂಮಿಯನ್ನು ಸಹ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಬಿಟ್ಟಿರುವ ಆರೋಪ ಸಹ ಕೇಳಿಬಂದಿದೆ. ಅಷ್ಟೇ ಅಲ್ಲದೆ 53,57 ಅಡಿಯಲ್ಲಿ ಅರ್ಜಿ ಸಲ್ಲಿಸದೆ ಪೂರಕ ದಾಖಲೆಗಳೂ ಇಲ್ಲದೆ ಮಂಜೂರಾತಿ ಮಾಡಿರುವುದು ಸಹ ಬೆಳಕಿಗೆ ಬಂದಿದ್ದರೂ ಕಂದಾಯ ಇಲಾಖೆ ಪ್ರಭಾವಿಗಳ ಎದುರು ಮಂಡಿಯೂರಿದೆ. ಜಿಲ್ಲೆಯಾದ್ಯಂತ ಕಂದಾಯ ಇಲಾಖೆಯ ಈ ಇಬ್ಬಗೆಯ ನೀತಿಗೆ ಜನಸಾಮಾನ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ವೀರ ಸಾವರ್ಕರ್ ಬದುಕಿನ ಕಥಾನಕವನ್ನು ಪ್ರಸ್ತುತ ಪಡಿಸುವ “ಕರಿನೀರ ವೀರ” ನಾಟಕ ಪ್ರದರ್ಶನ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನಭಾರತೀ ಟ್ರಸ್ಟ್(ರಿ) ಶೃಂಗೇರಿ ಇವರ ಸಹಯೋಗದಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಇವರು ಪ್ರಸ್ತುತಪಡಿಸುವ ಖ್ಯಾತ ನಿರ್ದೇಶಕರಾದ ಅದ್ದಂಡ ಕಾರ್ಯಪ್ಪನವರ ನಿರ್ದೇಶನದಲ್ಲಿ ಕರಿನೀರ ವೀರ ಎಂಬ ವೀರ ಸಾವರ್ಕರ್ ಅವರ ಬದುಕಿನ ಕಥಾನಕವನ್ನು ಪ್ರಸ್ತುತಪಡಿಸುವ ಅದ್ಬುತ ನಾಟಕವು ಶೃಂಗೇರಿಯ ಡಾ|| ವಿ. ಆರ್ ಗೌರೀಶಂಕರ್ ಸಭಾಂಗಣದಲ್ಲಿ ಇದೇ ಡಿಸೆಂಬರ್ 1ನೇ ತಾರೀಖು ಶುಕ್ರವಾರ ಸಂಜೆ 6 ರಿಂದ 9ರವರಗೂ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಅಭಿರಾಮ್ ಶೃಂಗೇರಿ ಮತ್ತು ಜ್ಞಾನ ಭಾರತೀ ಟ್ರಸ್ಟ್ ಶೃಂಗೇರಿಯ ಹೆಚ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.

ಈ ಪ್ರದರ್ಶನದ ಪ್ರವೇಶ ದರ ರೂ 100/- ಇರಲಿದ್ದು.. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ:-9483634964, 9481651001 ಇದಕ್ಕೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ..

ಹಾಗೆಯೇ ಭಾರತೀ ಜಾಗೃತ ಪ್ರತಿಷ್ಠಾನ (ರಿ.) ನಾದ ಚೈತನ್ಯ (ರಿ.) ಸಂಗೀತ ಗಂಗಾ(ರಿ.), ಚಿಕ್ಕಮಗಳೂರು ಇವರ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿಯೂ ದಿನಾಂಕ 03 ಡಿಸೆಂಬರ್ 2023ರ ಭಾನುವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.