ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಚೌಳಹಿರಿಯೂರಿನ ಮೈತ್ರಿ ನಾಟಕ ಸಂಘ ಆಯೋಜಿಸಿರುವ ಹಳ್ಳಿ ಹುಡುಗಿ ಮೊಸರ ಗಡಿಗೆ ಎಂಬ ಹಾಸ್ಯ ನಾಟಕ ಇದೇ 25 ಮತ್ತು 26 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಎಂಬ ಪ್ರದರ್ಶನವಾಗಲಿದೆ ಎಂದು ರಂಗಕಲಾವಿದ ಎಚ್.ಪಿ.ಮಲ್ಲಿಕಾರ್ಜುನ್ ತಿಳಿಸಿದರು.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಕಾ ಹಿರಿಯೂರು ನಿರ್ದೇಶನದ ನಾಟಕದಲ್ಲಿ ಗದಗ ಜಿಲ್ಲೆಯ ಮಾನಸ ಕಲಾ ತಂಡದ ಕಲಾವಿದರು ಅಭಿನಯಿಸಲಿದ್ದಾರೆ. ಕುಂಟಕೋಣ ಮೂಕಜಾಣ ನಾಟಕದ ಖ್ಯಾತಿಯ ಹರೀಶ್ ಹಿರಿಯೂರು ಹಾಗೂ ಪ್ರಿಯಾಂಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ; ರಾಜೌರಿಯಲ್ಲಿ ಗುಂಡಿನ ಕಾಳಗ; ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ
ಆಧುನಿಕತೆಯಲ್ಲಿ ರಂಗಭೂಮಿ ಅಳಿನತ್ತ ಸಾಗುತ್ತಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಾಟಕ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ 200 ನಿಗದಿಪಡಿಸಿದ್ದು ಒಟ್ಟು ಎರಡು ದಿನ ಮಧ್ಯಾಹ್ನ 2.45 ಹಾಗೂ 6.15 ಕ್ಕೆ ನಾಟಕ ಪ್ರದರ್ಶನವಾಗಲಿದೆ. ಸಾರ್ವಜನಿಕರು, ಕಲಾಸಕ್ತರು ಪ್ರೋತ್ಸಾಹಿಸುವಂತೆ ಕೋರಿದರು.
ವೀರ ಸಾವರ್ಕರ್ ಬದುಕಿನ ಕಥಾನಕವನ್ನು ಪ್ರಸ್ತುತ ಪಡಿಸುವ “ಕರಿನೀರ ವೀರ” ನಾಟಕ ಪ್ರದರ್ಶನ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನಭಾರತೀ ಟ್ರಸ್ಟ್(ರಿ) ಶೃಂಗೇರಿ ಇವರ ಸಹಯೋಗದಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಇವರು ಪ್ರಸ್ತುತಪಡಿಸುವ ಖ್ಯಾತ ನಿರ್ದೇಶಕರಾದ ಅದ್ದಂಡ ಕಾರ್ಯಪ್ಪನವರ ನಿರ್ದೇಶನದಲ್ಲಿ ಕರಿನೀರ ವೀರ ಎಂಬ ವೀರ ಸಾವರ್ಕರ್ ಅವರ ಬದುಕಿನ ಕಥಾನಕವನ್ನು ಪ್ರಸ್ತುತಪಡಿಸುವ ಅದ್ಬುತ ನಾಟಕವು ಶೃಂಗೇರಿಯ ಡಾ|| ವಿ. ಆರ್ ಗೌರೀಶಂಕರ್ ಸಭಾಂಗಣದಲ್ಲಿ ಇದೇ ಡಿಸೆಂಬರ್ 1ನೇ ತಾರೀಖು ಶುಕ್ರವಾರ ಸಂಜೆ 6 ರಿಂದ 9ರವರಗೂ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಅಭಿರಾಮ್ ಶೃಂಗೇರಿ ಮತ್ತು ಜ್ಞಾನ ಭಾರತೀ ಟ್ರಸ್ಟ್ ಶೃಂಗೇರಿಯ ಹೆಚ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.
ಈ ಪ್ರದರ್ಶನದ ಪ್ರವೇಶ ದರ ರೂ 100/- ಇರಲಿದ್ದು.. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ:-9483634964, 9481651001 ಇದಕ್ಕೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ..
ಹಾಗೆಯೇ ಭಾರತೀ ಜಾಗೃತ ಪ್ರತಿಷ್ಠಾನ (ರಿ.) ನಾದ ಚೈತನ್ಯ (ರಿ.) ಸಂಗೀತ ಗಂಗಾ(ರಿ.), ಚಿಕ್ಕಮಗಳೂರು ಇವರ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿಯೂ ದಿನಾಂಕ 03 ಡಿಸೆಂಬರ್ 2023ರ ಭಾನುವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.












