ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪೊಲೀಸ್ ಸರ್ಪಗಾವಲಿನೊಂದಿಗೆ ಶೃಂಗೇರಿಯ ಗಾಂಧಿ ಮೈದಾನದಲ್ಲಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ಆದರೆ ಅಂಗಡಿ ಮಳಿಗೆಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಅಂಗಡಿ ತೆರವಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಾಂಧಿ ಮೈದಾನದ 4 ಜನ ಬೀದಿಬದಿ ವ್ಯಾಪಾರಿಗಳಿಗೆ ಪಪಂ ಮುಖ್ಯಾಧಿಕಾರಿ ನೊಟೀಸ್ ನೀಡಿದ್ದರು.
ಕಳೆದ 3-4 ದಶಕಗಳಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನೆಲಬಾಡಿಗೆ ನೀಡಿ 4 ಮಂದಿ ಅಂಗಡಿ, ಹೋಟೆಲ್ ಉದ್ಯಮ ನಡೆಸುತ್ತಿದ್ದು 2006 ರಲ್ಲಿ ಪಪಂ ಈ ಜಾಗವನ್ನು ಖುದ್ದು ವಶಕ್ಕೆ ಪಡೆಯಲು ಯಾವುದೇ ನೋಟಿಸ್ ನೀಡದೇ ತೆರವುಗೊಳಿಸಲು ಬಲತ್ಕಾರವಾಗಿ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಪಪಂಗ ನೆಲಬಾಡಿಗೆ ನೀಡಿ ನಡೆಸಲಾಗುತ್ತಿದ್ದು, ಕಾನೂನು ರೀತ್ಯ ನಮ್ಮನ್ನು ಹೊರ ಹಾಕಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಶೃಂಗೇರಿ ಮುನ್ ಸಿಪ್ ನ್ಯಾಯಾಲಯ ಹಾಗೂ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಇವರ ದಾವೆಯನ್ನು ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ದಾವೆ ಹೂಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ಆಗಸ್ಟ್ ನಲ್ಲಿ ತೀರ್ಪು ನೀಡಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ಜಾಗದ ವ್ಯವಸ್ಥೆ ಮಾಡಿ ಕಾನೂನು ರೀತ್ಯ ಅವರನ್ನು ಹೊರಹಾಕಬೇಕು ಎಂದು ಆದೇಶಿಸಿತ್ತು.
ಈ ನಡುವೆ 60ಕ್ಕೂ ಅಧಿಕ ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಸೇರಿದ ಈ ಜಾಗವನ್ನು ಒಂದೇ ದಿನದಲ್ಲಿ ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು.
ವೀರ ಸಾವರ್ಕರ್ ಬದುಕಿನ ಕಥಾನಕವನ್ನು ಪ್ರಸ್ತುತ ಪಡಿಸುವ “ಕರಿನೀರ ವೀರ” ನಾಟಕ ಪ್ರದರ್ಶನ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನಭಾರತೀ ಟ್ರಸ್ಟ್(ರಿ) ಶೃಂಗೇರಿ ಇವರ ಸಹಯೋಗದಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಇವರು ಪ್ರಸ್ತುತಪಡಿಸುವ ಖ್ಯಾತ ನಿರ್ದೇಶಕರಾದ ಅದ್ದಂಡ ಕಾರ್ಯಪ್ಪನವರ ನಿರ್ದೇಶನದಲ್ಲಿ ಕರಿನೀರ ವೀರ ಎಂಬ ವೀರ ಸಾವರ್ಕರ್ ಅವರ ಬದುಕಿನ ಕಥಾನಕವನ್ನು ಪ್ರಸ್ತುತಪಡಿಸುವ ಅದ್ಬುತ ನಾಟಕವು ಶೃಂಗೇರಿಯ ಡಾ|| ವಿ. ಆರ್ ಗೌರೀಶಂಕರ್ ಸಭಾಂಗಣದಲ್ಲಿ ಇದೇ ಡಿಸೆಂಬರ್ 1ನೇ ತಾರೀಖು ಶುಕ್ರವಾರ ಸಂಜೆ 6 ರಿಂದ 9ರವರಗೂ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಅಭಿರಾಮ್ ಶೃಂಗೇರಿ ಮತ್ತು ಜ್ಞಾನ ಭಾರತೀ ಟ್ರಸ್ಟ್ ಶೃಂಗೇರಿಯ ಹೆಚ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.
ಈ ಪ್ರದರ್ಶನದ ಪ್ರವೇಶ ದರ ರೂ 100/- ಇರಲಿದ್ದು.. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ:-9483634964, 9481651001 ಇದಕ್ಕೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ..
ಹಾಗೆಯೇ ಭಾರತೀ ಜಾಗೃತ ಪ್ರತಿಷ್ಠಾನ (ರಿ.) ನಾದ ಚೈತನ್ಯ (ರಿ.) ಸಂಗೀತ ಗಂಗಾ(ರಿ.), ಚಿಕ್ಕಮಗಳೂರು ಇವರ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿಯೂ ದಿನಾಂಕ 03 ಡಿಸೆಂಬರ್ 2023ರ ಭಾನುವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.












