ಬಾಳೆಹೊನ್ನೂರು:(ನ್ಯೂಸ್ ಮಲ್ನಾಡ್ ವರದಿ) ಅಗಳಗಂಡಿ ಗ್ರಾಮ ಪಂಚಾಯಿತಿಯ ಹೆಗ್ಗಾರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹುಲ್ತಾಳ್, ನಕೃಗೋಳಿ, ಹಾಗೂ ಬಂಗಾಡಿ ಈ ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾಡೋಳಗೆ ಗಿಡ ನೆಡುವ ಯೋಜನೆಯನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆಯ ನಂತರವೂ ಮತ್ತೆ ಕಾಡೋಳಗೆ ಗಿಡ ನೆಡಲು ಗುಂಡಿ ತೊಡಲು ಮುಂದಾದಾಗ ನಿನ್ನೆ ಕೆಲಸ ತಡೆಯಲು ಹೋದಾಗ ಫಾರೆಸ್ಟ್ರ ಹಾಗೂ ಊರಿನ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಉಪವಾಸ ಸತ್ಯಾಗ್ರಹ ಮಾಡಲು ಹಲವು ಊರಿನ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ.
ಇವತ್ತು ಜನವರಿ 31 ತಾರೀಕು ಬೆಳಂ ಬೆಳಗ್ಗೆಯೇ ಅರಣ್ಯ ಇಲಾಖೆಯ ಕಾಡೋಳಗೆ ಗಿಡ ನೆಡುವ ಕೆಲಸವನ್ನು ಸ್ಥಗಿತಗೊಳಿಸಿದ್ದರಿಂದ ಸಂಕೇತಿಕಾ ಉಪವಾಸ ಧರಣಿ ಮಾಡಿ ಈ ಸಭೆಯಲ್ಲಿ ಈ ನಿರ್ಣಯವನ್ನು ಚರ್ಚಿಸಲಾಗಿದೆ.

ಅರಣ್ಯ ಇಲಾಖೆಯ ಕಾಡೋಳಗೆ ಗಿಡ ನೆಡುವ ಯೋಜನೆಯನ್ನು ಖಂಡಿಸಿ ನಾಲ್ಕೈದು ಗ್ರಾಮದ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮಲೆನಾಡಲ್ಲಿ ಇಂತಹ ಯೋಜನೆಗಳು ಅವೈಜ್ಞಾನಿಕವಾಗಿದ್ದು, ಅನಾದಿಕಾಲದಿಂದಲೂ ಕಾಡಿನ ನಡುವೆ ಹಾಗೂ ಕಾಡನ್ನು ಉಳಿಸುತ್ತ,ಇಲ್ಲೇ ಇದ್ದು ಬದುಕನ್ನು ಕಟ್ಟಿ ಜೀವನ ಮಾಡಿಕೊಂಡು ಬರುತ್ತಿರುವ ಈ ಹೊತ್ತಿನಲ್ಲಿ ಇಂತಹ ಯೋಜನೆಯನ್ನು ಜಾರಿ ತಂದು ಮಲೆನಾಡಿಗರ ಹಾಗೂ ಅದಿವಾಸಿ ಜನರ ನಿದ್ದೆ ಕೆಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಮಲೆನಾಡಿನ ಜನರು ನಾಗರ ಬನ, ದೇವರ ಬನ, ಸೊಪ್ಪಿನ ಹಾಡ್ಯಾ ಹಾಗೂ ಒಳಹಕ್ಲು ಎಂದು ಮನೆ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನು ರಕ್ಷಿಸಿಕೊಂಡು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಸೆಕ್ಷನ್ 4(1), ಕಾಯ್ದೆಯಡಿ ತಂದು ಈ ಎಲ್ಲಾ ಕಾಡು ಗುಡ್ಡಗಳನ್ನು ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ. ನಾವು ಶತಮಾನದಿಂದಲೂ ಹುಟ್ಟಿಬೆಳೆದ ಕಾಡಲ್ಲಿ ಅದಿವಾಸಿ ರೈತರ ಬದುಕನ್ನು ಕಟ್ಟಿಕೊಂಡಿದ್ದರು, ಕನಿಷ್ಠ ಬದುಕನ್ನು ಕಟ್ಟಿಕೊಳ್ಳಲು ಮಾಡಿಕೊಂಡಿದ್ದ ಸಾಗುವಳಿ ಭೂಮಿಗೆ ಹಕ್ಕುಪತ್ರವನ್ನು ಈ ಕಾಯ್ದೆಗಳಿಂದ ಕೊಡಲಾಗುತ್ತಿಲ್ಲ.

ತಕ್ಷಣ ಈ ರೀತಿಯ ಯೋಜನೆ ಕೈ ಬಿಟ್ಟು ಇಲ್ಲಿನ ಮೂಲನಿವಾಸಿಗಳಿಗೆ ಸಾಗುವಳಿ ಭೂಮಿಗೆ ಮತ್ತು ವಾಸಿಸುವ ಮನೆಗೆ ಹಕ್ಕುಪತ್ರವನ್ನು ನೀಡುವುದರೊಂದಿಗೆ ನೈಸರ್ಗಿಕವಾಗಿರುವ ಮಲೆನಾಡಿನ ಗುಡ್ಡ, ಕಾಡುಗಳನ್ನು ಅಲ್ಲಿನ ಜನರು ಹಿಂದೆ ಹೇಗೆ ರಕ್ಷಣೆ ಮಾಡಿಕೊಂಡು ಬಂದಿದ್ದರೋ ಹಾಗೆ ಅ ಹಕ್ಕು ಅಲ್ಲಿನ ಜನರಿಗೆ ನೀಡಬೇಕು. ಇಲಾಖೆಯ ಬೇರೆ ಬೇರೆ ಜನಪರ ಪರಿಸರ ಯೋಜನೆಗೆ ಇಲ್ಲಿನ ಜನರ ಸಹಕಾರ ಇರುತ್ತೆ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ರೀತಿಯ ಕಾಡುಪ್ರದೇಶದಲ್ಲಿ ಗಿಡ ನೆಡುವ ಯೋಜನೆಯನ್ನು ಮಲೆನಾಡಿನ ರೈತರೊಂದಿಗೆ ಸೇರಿ ವಿರೋಧಿಸುವುದಲ್ಲದೆ,
ಸ್ಥಗಿತಗೊಳಿಸಿರುವ ಈ ಕಾಮಗಾರಿಯನ್ನು ಇವತ್ತು ನಿಲ್ಲಿಸಿದ್ದರು ಮುಂದೆ ಶಾಶ್ವತವಾಗಿ ನಿಲ್ಲಿಸಬೇಕು. ತಪ್ಪಿದಲ್ಲಿ ಹತ್ತಾರು ಮಲೆನಾಡಿಗರೊಂದಿಗೆ ಹೋರಾಟವನ್ನು ತೀರ್ವಗೊಳಿಸುವುದೆಂದು ನಿರ್ಣಯಿಸಲಾಗಿದೆ.
ಈ ಧರಣಿಯಲ್ಲಿ ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಕಲ್, ಕರ್ನಾಟಕ ಜನಶಕ್ತಿಯ ಮಹಿಳಾ ಮುನ್ನಡೆ ರಾಧ ಹಾಗಲಗಂಚಿ,ಪರಿಸರವಾದಿ ಗುರುಮೂರ್ತಿ ಜೋಗಿಬೈಲು, ಸುಲೋಚನಾ ಹುಲ್ತಾಳ್, ಲೀಲಾವತಿ, ಸುಶೀಲ,ಹೇಮಾ,ರಾಜೇಶ್,ವಿನಯ್, ಹರೀಶ್ ಹಾಗೂ ಗೋಪಾಲಗೌಡ ಮುಂತಾದವರು ಭಾಗವಹಿಸಿದ್ದರು.












