
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಅಗಳಗಂಡಿ ಗ್ರಾಮ ಪಂಚಾಯಿತಿ ಹೆಗ್ಗಾರು ಗ್ರಾಮ ವ್ಯಾಪ್ತಿಯಲ್ಲಿ ಬರುವ ಹುಲ್ತಾಳ್, ಬಂಗಾಡಿ ಮತ್ತು ನಾಕೃಗೋಳಿ ಸುತ್ತಮುತ್ತಲಿನ ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಗಿಡ ನೆಡುವ ಯೋಜನೆಯಡಿಯನ್ನು ವಿರೋಧಿಸಿ ಇಂದಿನಿಂದ ( ಜ.31) ಸ್ಥಳದಲ್ಲಿ ಅನಿರ್ದಿಷ್ಟವಾದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹುಳ್ತಾಳು ನಿವಾಸಿ ಕೃಪಾ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಅರಣ್ಯ ಇಲಾಖೆ ನೈಸರ್ಗಿಕ ಕಾಡನ್ನು ಹಾಳುಮಾಡಿ ಪರಿಸರ ವಿನಾಶ ಕೃತ್ಯ ಮಾಡುತ್ತಿದ್ದಾರೆ. ಇಲಾಖೆಯ ನಡವಳಿಕೆಯನ್ನು ಖಂಡಿಸಿ ಗ್ರಾಮಸ್ಥರು ಕೆಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದರು. ಆದರೂ ಅದನ್ನು ಪರಿಗಣಿಸದೆ ಗಿಡ ನೆಡಲು ಗುಂಡಿ ತೆಗೆಯುವ ಕೆಲಸವನ್ನು ಮುಂದುವರಿಸಿದ್ದಾರೆ.ಈ ಯೋಜನಗೆ ನಮ್ಮ ತೀವ್ರ ವಿರೋಧ ಇದೆ.

ಕಾಡೋಳಗೆ ಗಿಡ ನೆಡುವ ಹಾಗೂ ಮಲೆನಾಡಿನ ನೀರು ಟ್ಯಾಂಕ್ ಎಂದು ಕರೆಸಿಕೊಳ್ಳುವ ಹುಲ್ಲು ಗುಡ್ಡದೊಳಗೆ ಅರಣ್ಯ ಇಲಾಖೆ ಈ ಯೋಜನೆಯನ್ನು ನಿಲ್ಲಿಸುವರೆಗೂ ಹಾಗೂ ಜಿಲ್ಲಾ ಆಡಳಿತ ಈ ಬಗ್ಗೆ ಅದಿವಾಸಿಗಳಿಗೆ ಭರವಸೆ ನೀಡುವ ತನಕವು ಸ್ಥಳದಲ್ಲೆ ಉಪವಾಸ ಸತ್ಯಾಗ್ರಹವನ್ನು ಮಾಡಲು ಹತ್ತಾರು ಹಳ್ಳಿಗಳ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಎಲ್ಲಾ ಅದಿವಾಸಿಗಳಿಂದ ಹಿಡಿದು, ರೈತರು, ಎಲ್ಲಾ ಸಂಘಟನೆಗಳು, ಎಲ್ಲಾ ಹೋರಾಟಗಾರರು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪರಿಸರದ ಜೊತೆಗೆ ಅದಿವಾಸಿಗಳ ಸಂವಿಧಾನಬದ್ಧ ಬದುಕಿನ ಹಕ್ಕುಗಳಿಗಾಗಿ ಪ್ರಜ್ಞಾವಂತ ನಾಗರಿಕರು, ಜನಪರ ಸಂಘಟನೆ, ಆಡಳಿತ ವರ್ಗ ಅದಿವಾಸಿಗಳ ನ್ಯಾಯಬದ್ಧ ಹೋರಾಟಕ್ಕೆ ಬೆಂಬಲಿಸಬೇಕು ಎಂದು ವಿನಂತಿಸಿದ್ದಾರೆ.
Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.














