ಶ್ರೀ ಭಾರತೀತೀರ್ಥ ಸದ್ಭಕ್ತ ಯುವಕ ಸಂಘ ಸಹಯೋಗ ಗ್ರಾಮ ಭಾರತ್ ವೇದಿಕೆ ಟ್ರಸ್ಟ್(ರಿ) ಇವರ ವತಿಯಿಂದ ಶ್ರೀ ಜಗದ್ಗುರು ಭಾರತೀತೀರ್ಥ ಮಹಾಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ಭಾರತೀ ಶೀರ್ಷಿಕೆಯಡಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ; ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ; ಈ ನಿಯಮ ಪಾಲನೆ, ದಾಖಲೆಗಳು ಕಡ್ಡಾಯ!

ಕಿಗ್ಗಾದ ಪ್ರಾಥಮಿಕ ಶಾಲೆ ಆವರಣದಲ್ಲಿ ಶೃಂಗೇರಿ ಶ್ರೀಮಠದ ಪೇಶ್ಕಾರರಾದ ಶ್ರೀಯುತ ಶಿವಶಂಕರ್ ಭಟ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸ್ಥಳೀಯ ಯುವ ಸಮುದಾಯವು ವಿಶೇಷ ಸಹಕಾರ ನೀಡಿದರು

ಗಿರೀಶ್ ಉಳುವೆ ಅವರು ಶ್ರೀಗಳ ಆಧ್ಯಾತ್ಮಿಕ ಸಾಧನೆ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.
ತಾಯಿ ಶಾರದೆಯ ಪ್ರತಿರೂಪವಾಗಿರುವ ಶ್ರೀ ಭಾರತೀತೀರ್ಥರು ಹಾಕಿಕೊಟ್ಟ ಧರ್ಮದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು, ಅವರ ಆಶೀರ್ವಾದವು ನಮ್ಮ ಬದುಕನ್ನು ಸಾರ್ಥಕತೆ ತಂದುಕೊಡುತ್ತದೆ ಎಂದರು

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ಆ ನಂತರ, ಕಾಂಚೀನಗರ ಪ್ರಾಥಮಿಕ ಶಾಲೆ, ಹಾಗೂ ಅಡ್ಡಗದ್ದೆ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡಲಾಯಿತು.
ಈ ಸಂದರ್ಭದಲ್ಲಿ ಅಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲಾ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಆಗಮಿಸಿ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ತೊರೆಹಡ್ಲು ಪ್ರೌಢಶಾಲೆ, ವಿದ್ಯಾನಗರ ಪ್ರಾಥಮಿಕ ಶಾಲೆ, ಕೆಳಕೊಪ್ಪ ಪ್ರಾ. ಶಾಲೆ, ಸಿಂಧುವಳ್ಳಿ ಪ್ರಾ. ಶಾಲೆ, ಹಾಗೂ ಕಾವಡಿ ಅಂಗನವಾಡಿಗೆ ಸಹ ಗಿಡಗಳನ್ನು ವಿತರಿಸಲಾಯಿತು.

ಶ್ರೀ ಭಾರತೀತೀರ್ಥ ಸದ್ಭಕ್ತ ಯುವಕ ಸಂಘವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗುರುಗಳ ಹೆಸರಿನಲ್ಲಿನ ಸೇವಾ ಕಾರ್ಯಕ್ಕೆ ಪರಸ್ಪರ ಕೈ ಜೋಡಿಸಿ ಮುಂದಿನ ದಿನಗಳಲ್ಲಿಯೂ ಪರಮಪೂಜ್ಯ ಸ್ವಾಮೀಜಿಯವರ ಹೆಸರಿನಲ್ಲಿ ತಿಂಗಳಿಗೆ ಒಂದರಂತೆ ವಿಶೇಷ ಸೇವಾ ಕಾರ್ಯಗಳನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಸದಸ್ಯರುಗಳು ತಿಳಿಸಿದರು.

ಈ ಸಂದರ್ಭದಲ್ಲಿ ಅಶ್ವಿನ್ , ರಂಜಿತ್, ಆಶೀಶ್, ವಿಠಲ್ ಆಚಾರ್, ಪ್ರಜ್ವಲ್ ಸಚಿನ್ , ನಿರಂಜನ್, ಕೌಶಿಕ್, ಸಚಿನ್, ಅಖಿಲೇಶ್, ಸುಂದರೇಶ್, ಅನಿಲ್, ನಾಗರಾಜ್ ಶೆಟ್ಟಿ, ಕೃಷ್ಣಮೂರ್ತಿ , ಕಾರ್ತಿಕ್, ಹರಿಪ್ರಸಾದ್, ಪ್ರಸಾದ್, ಪ್ರದೀಪ್, ಮುರುಳಿ, ನೂತನ್, ರತನ್, ಸುದೀಪ್, ನವೀನ್ ಹಾಗೂ ಹಲವರು ಇದ್ದರು.
ಇದನ್ನೂ ಓದಿ; ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡದೆ ಇರುವವರ ರೇಷನ್ ಸ್ಥಗಿತ













