
ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡ ಬಯಲುಸೀಮೆ ಭಾಗದ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವ ವೇಳೆ ಕಾವಲಿಗೆ ನಿಂತ ಇನ್ಸ್ ಪೆಕ್ಟರ್ ಮೇಲೆ ಎತ್ತಿನ ಗಾಡಿ ಹರಿದಿರುವ ಘಟನೆ ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕಾಫಿನಾಡಲ್ಲಿ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವ ನಡೆಯವ ಸಂದರ್ಭದಲ್ಲಿ ಸಾವಿರಾರು ಎತ್ತಿನಗಾಡಿಯಲ್ಲಿ ಜಾತ್ರೆಗೆ ಬರುವಂತ ಭಕ್ತರ ಕಾವಲಿಗೆ ನಿಂತ ಸರ್ಕಲ್ ಇನ್ಸ್ ಪೆಕ್ಟರ್ ವೀರೇಂದ್ರ ಮೇಲೆ ಎತ್ತಿನ ಗಾಡಿ ಹರಿದಿದೆ.

ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಹಿಂದಿನಿಂದ ಬಂದ ಗಾಡಿ ನೋಡಿ ಓಡುವಷ್ಟರಲ್ಲಿ ಮೈಮೇಲೆ ಎತ್ತಿನಗಾಡಿ ನುಗಿದ್ದು, ಸಿಪಿಐ ಕೆಳಗೆ ಬಿದ್ದಿದ್ದಾರೆ.ಎತ್ತಿನ ಗಾಡಿ ಮೈಮೇಲೆ ಹರಿದಿದೆ. ಎತ್ತಿನ ಗಾಡಿಯ ಚಕ್ರ ಟೈರ್ ಆದ ಕಾರಣ ಭಾರೀ ಅನಾಹುತ ತಪ್ಪಿದೆ. ಇನ್ಸ್ ಪೆಕ್ಟರ್ ವೀರೇಂದ್ರ ಗಂಭೀರ ಗಾಯಗೊಂಡಿದ್ದು, ತಕ್ಷಣ ಅಜ್ಜಂಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಿಪಿಐ ರವಾನೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.













