ದೆಹಲಿ (ನ್ಯೂಸ್ ಮಲ್ನಾಡ್ ವರದಿ) FKCCI ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರು ಇಂದು ಜನತಾ ದಳ (ಸೇಕ್ಯುಲರ್) ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರ ದೆಹಲಿಯ ನಿವಾಸದಲ್ಲಿ ಸುಧಾಕರ್ ಎಸ್ ಶೆಟ್ಟಿಯವ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡರು, ಸಾರ್ವಜನಿಕ ಜೀವನದಲ್ಲಿ ದೀರ್ಘಕಾಲದ ಅನುಭವ, ಜ್ಞಾನ ಮತ್ತು ಬದ್ಧತೆಯನ್ನು ಹೊಂದಿರುವ ಸುಧಾಕರ್ ಎಸ್ ಶೆಟ್ಟಿಯವರು ಪಕ್ಷದ ನೀತಿಗಳು ಮತ್ತು ದೃಷ್ಟಿಕೋಣವನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೊಸ ಜವಾಬ್ದಾರಿಯಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಪಕ್ಷದ ನಾಯಕತ್ವಕ್ಕಿದೆ ಎಂದು ಹೇಳಿದರು.
ಗೌರವದ ನೇಮಕಾತಿಗೆ ಕೃತಜ್ಞತೆ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿಯವರು, ಪಕ್ಷದ ನಾಯಕತ್ವ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆ, ಸಮರ್ಪಣೆ ಮತ್ತು ನಿಷ್ಠೆಯಿಂದ ನಿರ್ವಹಿಸುವುದಾಗಿ ಭರವಸೆ ನೀಡಿದರು. ದೇಶದಾದ್ಯಂತ ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಬಲಪಡಿಸುವ ದಿಶೆಯಲ್ಲಿ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.

ಇನ್ನು ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಸಚಿವರಾದ ಎಚ್. ಜಿ. ಗೋವಿಂದೇಗೌಡರ ಸುಪುತ್ರ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಸ್ಪರ್ಧಿಸಿದ್ದ ಹಿರಿಯ ನಾಯಕರು ಹೆಚ್. ಜಿ. ವೆಂಕಟೇಶ್ (ಕೊಪ್ಪ), ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹಾಗೂ ಶೃಂಗೇರಿ ತಾಲೂಕು ಘಟಕದ ಮಾಜಿ ಅಧ್ಯಕ್ಷರು ವಿವೇಕಾನಂದ ಭಟ್ (ಶೃಂಗೇರಿ), ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹಾಗೂ ಶೃಂಗೇರಿ ತಾಲೂಕು ಘಟಕದ ಮಾಜಿ ಅಧ್ಯಕ್ಷರು ಮಂಜುನಾಥ್ ಗೌಡ (ಗಂಡಗಟ್ಟ), ನರಸಿಂಹರಾಜಪುರ ತಾಲೂಕು ಘಟಕದ ಮಾಜಿ ಅಧ್ಯಕ್ಷರು
ಪ್ರಬಲ ನಾಯಕರು ಕಣಿವೆ ವಿನಯ್ ಗೌಡ, ಬಾಳೆಹೊನ್ನೂರು ಘಟಕದ ಅಧ್ಯಕ್ಷರು ದೀಪಕ್ ಕೊಳೆಲೆ, ನರಸೀಪುರ ಪಂಚಾಯಿತಿಯಲ್ಲಿ ಸತತವಾಗಿ 20 ವರ್ಷಗಳ ಕಾಲ ಜಯಗಳಿಸಿರುವ ಹಿಂದುಳಿದ ವರ್ಗದ ಪ್ರಬಲ ನಾಯಕರು ಹಾಗೂ ಜೆಡಿಎಸ್ ಪಕ್ಷದ ನಾಯಕರು ವಾಸಪ್ಪ, ಗುರುಪ್ರಸಾದ್ ಭಟ್, ಕೊಪ್ಪ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಜೆಡಿಎಸ್ ಪಕ್ಷದ ನಾಯಕರು ಉದಯ ಸುವರ್ಣ, ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಖಾಂಡ್ಯ ಹೋಬಳಿಯ ಜೆಡಿಎಸ್ ಪಕ್ಷದ ನಾಯಕರು ಗೋರಿಗಂಡಿ ಶಿವಶಂಕರ್, ಶೃಂಗೇರಿ ಘಟಕದ ಅಧ್ಯಕ್ಷರು ಹಾಗೂ ಪೂಜ್ಯರ ಆತ್ಮೀಯರಾದ ಗೆಣಕಲ್ ಸುರೇಂದ್ರ ರವರ ಪುತ್ರ ಭರತ್ ಇತರರು ಇದ್ದರು.













