ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹೆದ್ದಾರಿ 17ರ ವಸ್ತಾರೆ ಸಮೀಪ ಮಂಗಳವಾರ ರಾತ್ರಿ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ.
ಇದನ್ನೂ ಓದಿ; ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ

ಮಂಗಳವಾರ ರಾತ್ರಿ 11.30ರ ಸಮಯದಲ್ಲಿ ವಸ್ತಾರೆ ಶನೈಶ್ಚರ ಸ್ವಾಮಿ ದೇವಸ್ಥಾನದ ಮುಂದಿನ ಬಾಗಿಲ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಬಂದ ಗ್ರಾಮದ ವ್ಯಕ್ತಿಯೊಬ್ಬರು ಅನುಮಾನಗೊಂಡು ದೇವಸ್ಥಾನದ ಬಳಿ ವಿಚಾರಿಸಲು ಹೋದಾಗ ಕಳ್ಳರು ಕಾಂಪೌಂಡು ಹಾರಿ ಪರಾರಿಯಾಗಿದ್ದಾರೆ.

ಬೈಕ್ ಅನ್ನು ದೇವಸ್ಥಾನದ ಮುಂಭಾಗ ಬಿಟ್ಟು ದೇವಾಲಯ ಪ್ರವೇಶಿಸಿರುವ ಕಳ್ಳರು ದೇವಾಲಯದ ಮುಂಭಾಗದ ಬಾಗಿಲಿನ ಬೀಗವನ್ನು ಕಲ್ಲಿನಿಂದ ಒಡೆದು ನಂತರ ಡೋರ್ ಲಾಕ್ ಒಡೆಯುತ್ತಿದ್ದ ವೇಳೆ ಗ್ರಾಮದ ವ್ಯಕ್ತಿ ಸ್ಥಳಕ್ಕೆ ಬಂದಿದ್ದರಿಂದ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ಕಳ್ಳತನಕ್ಕೆ ನಂಬರ್ ಪ್ಲೇಟ್ ಇಲ್ಲದ ಬೈಕ್ ಬಳಸಲಾಗಿದೆ. ಬೈಕ್ ನ ಬ್ಯಾಗ್ ನಲ್ಲಿ ನಾಡ ಬಾಂಬ್ ಗಳು ಪತ್ತೆಯಾಗಿದೆ. ಒಂದು ನಾಡಬಾಂಬ್ ಸಿಡಿದು ಒಬ್ಬರ ಕೈಗೆ ಗಾಯವಾಗಿದೆ ಎನ್ನಲಾಗಿದೆ.
ಘಟನೆ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.















