ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು, 15,397 ಸಂಬಳ

ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪರಮೇಶ್ವರ ಆಚಾರಿ ಎಂಬುವವರು ತಮ್ಮ ಪತ್ನಿಯೊಂದಿಗೆ ಎಂದಿನಂತೆ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಅವರ ಪುತ್ರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೊಪ್ಪ ಪೇಟೆಗೆ ತೆರಳಿದ ವೇಳೆ ಕಳ್ಳರು ಮನೆಯ ಮೇಲ್ಪಾವಣಿಯ ಹಂಚುಗಳನ್ನು ಸರಿಸಿ ಒಳನುಗ್ಗಿದ್ದಾರೆ.

ಮನೆಯಲ್ಲಿದ್ದ ಎರಡು ಬೀರುಗಳನ್ನು ಒಡೆದು ಸುಮಾರು 4 ಪವನ್ ತೂಕದ ಮಾಂಗಲ್ಯ ಸರ, ಕಿವಿಯೋಲೆ ಹಾಗೂ ಚಿನ್ನದ ಉಂಗುರ, 150 ಗ್ರಾಂ ತೂಕದ ಬೆಳ್ಳಿ ಲೋಟ ಮತ್ತು ಪೂಜಾ ಪರಿಕರಗಳು, 45,000 ರೂಪಾಯಿ ನಗದು ಹಣವನ್ನೂ ಲೂಟಿ ಮಾಡಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸಿಗರೇಟ್ ಸೇದಿದ್ರೆ ರಿಲ್ಯಾಕ್ಸ್ ಸಿಗಲ್ಲ; ಭಯಾನಕ ಸತ್ಯ ಬಯಲು!
ಕೆಲಸ ಮುಗಿಸಿ ಮನೆಗೆ ಮರಳಿದ ಮಾಲೀಕರಿಗೆ ಹಂಚು ತೆಗೆದಿರುವುದು ಮತ್ತು ಬೀರುಗಳು ಒಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.













