ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೋರ್ವ ಏಕಾಏಕಿ ರಸ್ತೆಗೆ ಬಂದ ಕಾರಣ ಲಾರಿಯ ಚಕ್ರಕ್ಕೆ ಸಿಲುಕಿ ಎರಡು ಕಾಲು ಕಟ್ ಆಗಿರುವ ಘಟನೆ ತಳುವೆ ಸಮೀಪ ಬುಧವಾರ ಸಂಜೆ ನಡೆದಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ

ತಾಲೂಕಿನ ಕೊಪ್ಪ ತೀರ್ಥಹಳ್ಳಿ ನಡುವಿನ ತಳುವೆ ಬಳಿ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಕಾಲು ಕಟ್ ಆಗಿದೆ. ಆದರೆ, ಈ ಅಪಘಾತಕ್ಕೆ ಆ ವ್ಯಕ್ತಿಯೇ ಕಾರಣ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ. ಬುಧವಾರ ಬೆಳಗ್ಗೆಯಿಂದ ರಸ್ತೆಯಲ್ಲಿ ಓಡಾಡುವ ಬಸ್ ಹಾಗೂ ಕಾರುಗಳಿಗೆ ಅಡ್ಡ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಖಾಸಗಿ ಬಸ್ ವೊಂದಕ್ಕೆ ಅಡ್ಡ ಹೋಗಿದ್ದಾನೆ ಬಸ್ ನಿಧಾನವಾಗಿ ಬರುತ್ತಿದ್ದ ಕಾರಣ ಬ್ರೇಕ್ ಹಾಕಲಾಗಿದೆ. ನಂತರ ಬಸ್ ಡ್ರೈವರ್ ಈತನಿಗೆ ಬೈದು ಬುದ್ದಿವಾದ ಹೇಳಿ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೂ ಸಂಜೆ ಲಾರಿ ಬರುತ್ತಿದ್ದದ್ದನ್ನು ನೋಡಿ ಏಕಾಏಕಿ ರಸ್ತೆಗೆ ಹಾರಿದ್ದಾನೆ. ಈ ವೇಳೆ ಲಾರಿ ಚಾಲಕ ಎಷ್ಟೇ ತಪ್ಪಿಸಿದರು ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಕಾಲು ಕಟ್ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರ ಖಾತೆಗೆ ಹಣ ವರ್ಗಾವಣೆ
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












