ಶೃಂಗೇರಿ: ಕೆಂಪು ಕಲ್ಲಿನ ಉತ್ಪಾದನೆ ಮತ್ತೆ ಆರಂಭಿಸಲು ಮನವಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪ್ರಸ್ತುತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪು ಕಲ್ಲಿನ ಉತ್ಪಾದನೆ ಸ್ಥಗಿತಗೊಂಡಿದ್ದು ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಉತ್ಪಾದನೆಯನ್ನು ಮತ್ತೆ ಆರಂಭಿಸಬೇಕು ಎಂದು ತಾಲೂಕು ಕಾರ್ಮಿಕ ಮಿತ್ರ ಬಳಗ ತಾಲೂಕು ಆಡಳಿತಕ್ಕೆ ಒತ್ತಾಯಿಸಿದೆ.


ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ


ಸೋಮವಾರ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾ‌ರ್ ಪ್ರವೀಣ್‌ ಕುಮಾರ್‌ ಗೆ ಕಾರ್ಮಿಕರ ಪರವಾಗಿ ಬಳಗದ ಅಧ್ಯಕ್ಷ ರಮೇಶ್ ಶೂನ್ಯ ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರದ ನಿಯಮದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಅನುಕೂಲಕರವಾದ ಕೆಂಪು ಕಲ್ಲು ಕೊರತೆ ಉಂಟಾಗಿದೆ. ಕೆಂಪು ಕಲ್ಲಿನ ದರಕ್ಕಿಂತ ಇತರ ಇಟ್ಟಿಗೆಗಳ ಬೆಲೆ ಹೆಚ್ಚಳವಾಗಿದೆ.


ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ


ಇದರಿಂದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಮಲೆನಾಡಿನಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಉದ್ಯೋಗ ಆಧರಿಸಿಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಥಗಿತಗೊಂಡ ಕೆಂಪು ಕಲ್ಲಿನ ಉತ್ಪಾದನೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿದರು.


ಇದನ್ನೂ ಓದಿ: ITI ಪಾಸ್‌ ಆದವರಿಗೆ ಭರ್ಜರಿ ಜಾಬ್‌ ಆಫರ್; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.