ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ರಷ್ಯನ್ ಪ್ರಜೆಗಳು ಕಳೆದುಕೊಂಡಿದ್ದ ಬ್ಯಾಗ್ ಅನ್ನು ಹಿಂದಿರುಗಿಸಿ ವಿದೇಶಿ ಪ್ರಜೆಗಳ ಮನಗೆದ್ದಿರುವಂತಹ ಘಟನೆಯೊಂದು ಎನ್. ಆರ್. ಪುರ ತಾಲೂಕಿನ ಮಾಗುಂಡಿಯ ಮಹಲ್ಗೋಡು ಬಳಿ ನಡೆದಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಬುಧವಾರ ರಷ್ಯನ್ ಪ್ರಜೆಗಳು ಬೈಕ್ ನಲ್ಲಿ ಕುದುರೆ ಮುಖಕ್ಕೆ ಟ್ರಕ್ಕಿಂಗ್ ತೆರಳುವಾಗ ಎನ್. ಆರ್. ಪುರ ತಾಲೂಕಿನ ಮಾಗುಂಡಿಯ ಮಹಲ್ಗೋಡು ಬಳಿ ವಿದೇಶಿಗರ ಬ್ಯಾಗ್ ಬಿದ್ದಿದೆ. ಇದನ್ನು ಗಮನಿಸಿದ ಮಹಲ್ಗೋಡು ಗ್ರಾಮದ ಅವಿನಾಶ್ ಎಂಬ ಯುವಕ ಬ್ಯಾಗ್ ಪರಿಶೀಲಿಸಿದಾಗ 3.5 ಲಕ್ಷ ಹಣ, ಲ್ಯಾಪ್ ಟಾಪ್, 3 ಪಾಸ್ ಪೋರ್ಟ್ ಇದ್ದಿದ್ದನ್ನು ಗಮನಿಸಿದ್ದಾರೆ.
ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ತಕ್ಷಣವೇ ಕಳಸ ಬಳಿಯ ಸಂಸ್ಥೆ ಆಟೋ ಚಾಲಕರೊಬ್ಬರಿಗೆ ಮಾಹಿತಿ ನೀಡಿ ವಿದೇಶಿಗರು ಬಂದರೆ ಮಾಹಿತಿ ನೀಡಲು ತಿಳಿಸಿದ್ದಾರೆ. ಅದರಂತೆ ಆಟೋಚಾಲಕ ಸಂಸ್ಥೆಯಲ್ಲಿ ವಿದೇಶಿಗರ ಬೈಕ್ ಅಡ್ಡಹಾಕಿ ಮಹಲ್ಗೋಡು ಗ್ರಾಮಕ್ಕೆ ವಾಪಾಸ್ ಕಳುಹಿಸಿದ್ದಾರೆ. ವಿದೇಶಿಗರು ಬಂದಾಗ ಯುವಕ ಹಣ, ಲ್ಯಾಪ್ ಟಾಪ್ ಬ್ಯಾಗನ್ನು ವಾಪಾಸ್ ನೀಡಿದ್ದಾರೆ. ಯುವಕನ ಪ್ರಾಮಾಣಿಕತೆ ಮೆಚ್ಚಿದ ವಿದೇಶಿಗರು 3.5 ಲಕ್ಷ ಹಣ ಯುವಕನಿಗೆ ನೀಡಲು ಮುಂದಾಗಿದ್ದಾರೆ. ಆದರೆ ಯುವಕ ನಿರಾಕರಿಸಿದ್ದಾನೆ.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
ಈ ಘಟನೆ ನೆನೆದ ವಿದೇಶಿಗರು ಸ್ಥಳದಲ್ಲೇ ಐ ಲವ್ ಇಂಡಿಯಾ, ಇಂಡಿಯನ್ಸ್ ಎಂದು ಯುವಕನನ್ನು ತಬ್ಬಿಕೊಂಡಾಡಿದ್ದಾರೆ. ಯುವಕನ ಪ್ರಾಮಾಣಿಕತೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.












