ಎನ್ .ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?

ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ 8ನೇ ಮೈಲಿಕಲ್ಲು ವ್ಯಾಪ್ತಿಯ ಕೂಸ್ಕಲ್ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗುವಾನಿ ನೆಡುತೋಪಿನಲ್ಲಿ ಮಧ್ಯರಾತ್ರಿ ಸಾಗವಾನಿ ಮರವೊಂದನ್ನು ಅಕ್ರಮವಾಗಿ ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಗ್ರಹಾರ ವಲಯದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಂಧಿಸಿ ಮಹಿಂದ್ರ ಜೀತೊ ವಾಹನ ಮತ್ತು ಬೆಲೆ ಬಾಳುವ ಸ್ವತ್ತನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ; 25,000 ರಿಂದ 35,000 ಸಿಗುವ ಸ್ಕಾಲರ್ ಶಿಪ್; ಒಂದೇ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಿ
ವಲಯ ಅರಣ್ಯಾಧಿಕಾರಿ ಆದರ್ಶ ಎಂ. ಪಿ ರವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ನಂದೀಶ ಹೆಚ್. ಬಿ, ರಂಗನಾಥ ಆರ್ ಅತಾಲಟ್ಟಿ ಹಾಗೂ ಗಸ್ತು ಅರಣ್ಯ ಪಾಲಕರಾದ ಪ್ರತಾಪ್ ಆರ್, ರಂಗನಾಥ ಕೆ. ಹೆಚ್, ನಾಗರಾಜ ಎಂ. ಡಿ, ಲೋಹಿತ್, ಚಾಲಕರಾದ ನಾಗರಾಜ್ ಮತ್ತು ಪವನ್ ಇತರರು ಇದ್ದರು.
ಇದನ್ನೂ ಓದಿ; ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ; ಈ ನಿಯಮ ಪಾಲನೆ, ದಾಖಲೆಗಳು ಕಡ್ಡಾಯ!












