ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಸಮೀಪದ ರುದ್ರಭೂಮಿಯ ಬಳಿ ಸಿಕ್ಕಿದ ಮೊಬೈಲ್ ಅನ್ನು ಮಾಲೀಕನಿಗೆ ಮರಳಿಸಿ ಶಿಕ್ಷಕಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆಹಾನಿ ಪರಿಹಾರ ಜಮಾ!

ಬಣಕಲ್ ನ ರಿವರ್ ವ್ಯೂವ್ ಶಾಲೆ ಶಿಕ್ಷಕಿ ಶೀಲಾ ಗಾಮ ಅವರು ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಮೂವತ್ತು ಸಾವಿರ ಬೆಲೆ ಬಾಳುವ ಮೊಬೈಲ್ ಸಿಕ್ಕಿತ್ತು. ಅದನ್ನು ಬಣಕಲ್ ವಾಟ್ಸಾಪ್ ಗ್ರೂಪ್ ನಲ್ಲಿ ಮೊಬೈಲ್ ಸಿಕ್ಕಿದೆ ಎಂಬುದಾಗಿ ಮಾಹಿತಿ ಹಾಕಿದ್ದರು. ಮೊಬೈಲ್ ಕಳೆದುಕೊಂಡ ಸ್ಥಳೀಯರಾದ ಶೇಖರ್ ಎಂಬವರು ಶಿಕ್ಷಕಿಗೆ ಕರೆ ಮಾಡಿ ಕಳೆದು ಹೋಗಿರುವ ಮೊಬೈಲ್ ನನ್ನದು ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: 31 ಸಾವಿರ ರೈತರ ಬೆಳೆ ಸಾಲ ಮನ್ನಾ ಮಾಡಲು 232 ಕೋಟಿ ಹಣ ಬಿಡುಗಡೆ; ಬೆಳೆ ಸಾಲ ಮನ್ನಾ ರೈತರ ಪಟ್ಟಿ ಇಲ್ಲಿದೆ
ರಿವರ್ ವ್ಯೂವ್ ಶಾಲೆಯ ಬಳಿ ಶೇಖರ್ ಗೆ ತನ್ನ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿಗಳಿಗೂ ಕೂಡ ಪ್ರಾಮಾಣಿಕತೆ ಬಗ್ಗೆ ಸಂದೇಶ ರವಾನಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಇದೊಂದು ಕಾರ್ಡ್ ಇದ್ರೆ ಸಾಕು ಸಿಗಲಿದೆ ಇಷ್ಟು ಸೌಲಭ್ಯ; ಯಾವ ಕಾರ್ಡ್, ಯಾರು ಅರ್ಹರು, ಇಲ್ಲಿದೆ ನೋಡಿ















