ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಹತ್ಯೆಗೆ ಸಂಚು ಹೂಡಿರುವ ಆರೋಪದಲ್ಲಿ ನಾಲ್ವರ ವಿರುದ್ಧ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ

ಡಿಚ್ಚಿ ಮುಬಾರಕ್, ಟಿಪ್ಪು ಸೇರಿದಂತೆ ನಾಲ್ವರ ವಿರುದ್ಧ ಗುತ್ತಿಗೆದಾರ ಸುನೀಲ್ ಎಂಬವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ಭದ್ರಾವತಿಯ ಮುಬಾರಕ್ ಎಂಬಾತನಿಗೆ ಕರೆ ಮಾಡಿ, ಭದ್ರಾವತಿ ಗಾಂಧಿ ಸರ್ಕಲ್ ಬಳಿ ಬಸವೇಶ್ ನನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರ ನಾಲ್ವರನ್ನು ಕಳುಹಿಸುತ್ತಿರುವುದಾಗಿ ತಿಳಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಟಿಪ್ಪು ತನಗೆ ಮಾಹಿತಿ ನೀಡಿದ್ದು, ಚಾಕುವೊಂದನ್ನು ಕೂಡ ತೋರಿಸಿದ್ದ ಎಂದು ಸುನೀಲ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ; ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ
ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ












