
ಭದ್ರಾವತಿ: (ನ್ಯೂಸ್ ಮಲ್ನಾಡ್ ವರದಿ) ಗೋವಿನ ಕಬಾಬ್ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಹಿಂದೂ ಸಂಘಟನೆ ದೂರು ದಾಖಲಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಇದನ್ನೂ ಓದಿ; ಅಡಕೆ ಬೆಳೆಗಾರರಿಗೆ ಶಾಕಿಂಗ್ ಸುದ್ದಿ! ಕಡಿಮೆಯಾಗುತ್ತಾ ಅಡಿಕೆ ರೇಟ್? ಕಾರಣವೇನು ಗೊತ್ತಾ?

ತರೀಕೆರೆ ರಸ್ತೆಯಲ್ಲಿರುವ ಸಾದತ್ ದರ್ಗಾಬಳಿ ಗೋಮಾಂಸದಿಂದ ತಯಾರಿಸಿದ ಕಬಾಬ್ ಅನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ. ನಂತರ ಸ್ನೇಹಿತರಿಗೆ ಕಾಬಾಬ್ ಖರೀದಿಸಿ ಠಾಣೆಗೆ ತರುವಂತೆ ಸೂಚಿಸಿದ್ದಾರೆ. ಸ್ನೇಹಿತರಿಬ್ಬರು ಸಾದತ್ ದರ್ಗಾ ಬಳಿ ಕಬಾಬ್ ಖರೀದಿಸಿ, ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಅಂಗಡಿ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ; ಅಡಕೆ ಬೆಳೆಗಾರರಿಗೆ ಶಾಕಿಂಗ್ ಸುದ್ದಿ! ಕಡಿಮೆಯಾಗುತ್ತಾ ಅಡಿಕೆ ರೇಟ್? ಕಾರಣವೇನು ಗೊತ್ತಾ?
ಚಿಕ್ಕಮಗಳೂರು: ಬಜರಂಗದಳ ಮಾಜಿ ಸಂಚಾಲಕ, ಬಿಜೆಪಿ ಕಾರ್ಯಕರ್ತನಿಗೆ ಗಡಿಪಾರು ನೋಟಿಸ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳ ಮಾಜಿ ಸಂಚಾಲಕ, ಬಿಜೆಪಿ ಕಾರ್ಯಕರ್ತನನ್ನು ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ; ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ
ಚಿಕ್ಕಮಗಳೂರು ತಾಲ್ಲೂಕು ಆಲ್ಲೂರು ಹೋಬಳಿಯ ಶುಡುಕೂರು ಗ್ರಾಮದ ವಾಸಿ ತುಡುಕೂರು ಮಂಜುನಾಥನನ್ನು 17 ಕಾರಣಗಳನ್ನು ನೀಡಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಮಾ.14 ಗುರುವಾರದಂದು ಜಿಲ್ಲಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.
ಇದನ್ನೂ ಓದಿ; RDPR ಇಲಾಖೆಯಿಂದ ಉದ್ಯೋಗ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ; ಓಂಬುಡ್ಸ್ ಪರ್ಸನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೆಲವು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಶಾಂತಿ, ನೆಮ್ಮದಿ, ಭದ್ರತೆ, ಸಮಾಜಘಾತುಕ ಚಟುವಟಿಕೆಯಿಂದ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಅಲ್ಲದೆ ಮಂಜುನಾಥ್ ವಿರುದ್ಧ 17 ಕ್ರಿಮಿನಲ್ ಪ್ರಕರಣ, 7 ಮುಂಜಾಗ್ರತಾ ಪ್ರಕರಣಗಳು ದಾಖಲಾಗಿವೆ. ಯುವ ಜನರನ್ನು ಪುಚೋದಿಸಿ ಅವರಲ್ಲಿ ಮತೀಯ ದ್ವೇಷವನ್ನು ತುಂಬಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಮರ್ಥ್ಯ ಹಾಗೂ ರಾಜ್ಯಗಳಿಂದ ಬಹಳಷ್ಟು ಜನ ಕಾರ್ಮಿಕರು ಜಿಲ್ಲೆಗೆ ಆಗಮಿಸಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಬಾಂಗ್ಲಾದೇಶದಿಂದ ಆಕ್ರಮವಾಗಿ ವಲಸೆ ಬಂದವರೆಂದು ಬಿಂಬಿಸಿ ಅಪಪ್ರಚಾರ ಮಾಡಿ ಅವರ ಮೇಲೆ ಆಗಾಗ ಹಲ್ಲೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಗಡಿಪಾರು ಮಾಡಲಾಗಿದ್ದು, ಇದನ್ನು ನಿಯಂತ್ರಿಸುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ; ಪಿಎಂ ಸೂರ್ಯ ಯೋಜನೆಯ ಉಚಿತ ವಿದ್ಯುತ್: ಕೇಂದ್ರದಿಂದ ಭಾರೀ ಸಬ್ಸಿಡಿ; ಈ ಹಂತ ಅನುಸರಿಸಿ ಅರ್ಜಿ ಸಲ್ಲಿಸಿ













